Jalsoor – Sullia Samagra Samachara https://sullia.samagrasamachara.com Samagra Media Network Sat, 13 Dec 2025 05:32:27 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Jalsoor – Sullia Samagra Samachara https://sullia.samagrasamachara.com 32 32 235500897 ಜಾಲ್ಸೂರು: ಪಯಸ್ವಿನಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ| ‘ಕ್ರೀಡೆಯಿಂದ ಮಾನಸಿಕ- ದೈಹಿಕ ವಿಕಸನ ಸಾಧ್ಯ’ – ಸದಾನಂದ ಮಾವಜಿ https://sullia.samagrasamachara.com/2025/12/13/jalsoor-sports-day-meet/ Sat, 13 Dec 2025 05:32:26 +0000 https://sullia.samagrasamachara.com/?p=71714 ಜಾಲ್ಸೂರು: ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾ ಕೂಟಗಳು ವಿದ್ಯಾರ್ಥಿಗಳ ಮಾನಸಿಕ – ದೈಹಿಕ ವಿಕಸನಕ್ಕೆ ಪೂರಕ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಶಾಲಾ ಸಂಚಾಲಕ ಸದಾನಂದ ಮಾವಜಿ ಹೇಳಿದರು. ಅವರು ಶನಿವಾರ ನಡೆದ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧ್ಯಕ್ಷತೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಸದಾನಂದ ಜಾಕೆ ವಹಿಸಿ, ಮಾತನಾಡಿ, ಕ್ರೀಡಾಕೂಟ ಜಾತಿ, ಧರ್ಮವನ್ನು ಮೀರಿ ಇಡೀ ಸಮಾಜವನ್ನು ಒಗ್ಗೂಡಿಸುತ್ತದೆ ಎಂದರು.

ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್ ಇದ್ದರು. ಶಿಕ್ಷಕಿ ಮೀನ ಕುಮಾರಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ ಕೆ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಶಿಕ್ಷಕರಾದ ಶಿವಪ್ರಕಾಶ ಕೆ., ಕುಮಾರ ಲಮಾಣಿ, ಸವಿತಾ ಕುಮಾರಿ, ಪ್ರಶಿಕ್ಷಣಾರ್ಥಿಗಳಾದ ನಿಶ್ಮಿತಾ ಕೆ. ಯಜ್ಞ ಎಂ., ಸಿಬ್ಬಂದಿ ಬೇಬಿ.ಕೆ ಕಾರ್ಯಕ್ರಮಕ್ಕೆ ಸಹಕರಿಸಿದರು.

]]>
71714
ಜಾಲ್ಸೂರು: ಕುತ್ತಿಗೆಗೆ ಕೈಹಾಕಿ ಚಿನ್ನದ ಸರ ಕದ್ದವನಿಗೆ ಶಿಕ್ಷೆ ಪ್ರಕಟ https://sullia.samagrasamachara.com/2025/02/27/news-one-130/ Thu, 27 Feb 2025 06:58:05 +0000 https://sullia.samagrasamachara.com/?p=70897 ಜಾಲ್ಸೂರು: ಗ್ರಾಮದ ಅಡ್ಕಾರಿನಲ್ಲಿ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನ ಎಳೆದು ಪರಾರಿಯಾದ ಆರೋಪಿಯ ಆರೋಪ ಸಾಬೀತಾಗಿದ್ದು ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.

ಸಲೀಂ ಎಂಬಾತ 2022ರ ನ. 28ರಂದು ಬೆಳಗ್ಗೆ ಜಾಲ್ಸೂರು ಗ್ರಾಮದ ಬೈತಡ್ಕದಲ್ಲಿ ಕಮಲಾ ಅಡ್ಕಾರು ಆವರ ಮನೆಗೆ ದ್ವಿಚಕ್ರ ವಾಹನದಲ್ಲಿ ಬಂದು ಪರಿಚಯಸ್ಥರಂತೆ ಮಾತನಾಡಿ ಕುಡಿಯಲು ನೀರು ಕೇಳಿದ್ದ.

ಕಮಲಾ ಅವರು ನೀರು ತರಲೆಂದು ಮನೆಯೊಳಗೆ ಹೋದಾಗ ಅವರನ್ನು ಹಿಂಬಾಲಿಸಿ ಮನೆಗೆ ಅಕ್ರಮ ಪ್ರವೇಶ ಮಾಡಿ ಅಡುಗೆ ಕೋಣೆಯಲ್ಲಿ ಕಮಲಾ ಅವರ ಕುತ್ತಿಗೆಯನ್ನು ಹಿಂದಿನಿಂದ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು, ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆಂದು ಜೀವ ಬೆದರಿಕೆಯೊಡ್ಡಿ ಅವರ ಕುತ್ತಿಗೆಯಲ್ಲಿದ್ದ 23.873 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದ. ಅಷ್ಟರಲ್ಲಿ ಹೋಗುವ ಸಮಯ ಚಿನ್ನದ ಸರ ಎರಡು ತುಂಡಾಗಿದ್ದು, ಅದರಲ್ಲಿ 13.23 ಗ್ರಾಂ ತೂಕದ ಚಿನ್ನವು ಮನೆಯಲ್ಲಿ ಬಿದ್ದಿದ್ದು, ಉಳಿದ ಭಾಗವನ್ನು ಆತ ತೆಗೆದುಕೊಂಡು ಪರಾರಿಯಾಗಿದ್ದ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಿ. ಮೋಹನ್‌ ಬಾಬು ಅವರ ಸಮಕ್ಷಮ ನಡೆದು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಲಾಗಿದೆ. ಭಾರತೀಯ ದಂಡ ಸಂಹಿತೆ ಕಲಂ 386ಕ್ಕೆ 3 ವರ್ಷ ಸಾದಾ ಕಾರಾಗೃಹ ವಾಸ ಮತ್ತು 10,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ, ಕಲಂ 448ರಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸ. ಈ ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗತಕ್ಕದ್ದೆಂದು ಆದೇಶಿಸಲಾಗಿದೆ.

ಕೃಪೆ: ಉದಯವಾಣಿ

]]>
70897
ಕನಕಮಜಲು: ರಾ‌.ಹೆದ್ದಾರಿಯಲ್ಲಿ ಗಜ ಪರೇಡ್| ಆತಂಕದಲ್ಲಿ ಗ್ರಾಮಸ್ಥರು https://sullia.samagrasamachara.com/2024/11/12/news-one-33/ Tue, 12 Nov 2024 05:32:33 +0000 https://sullia.samagrasamachara.com/?p=70407 ಕನಕಮಜಲು: ಇಲ್ಲಿನ ಆನೆಗುಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ನ.12) ಮುಂಜಾನೆ ಕಾಡಾನೆಗಳು ಸಂಚರಿಸಿವೆ.

ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ರಸ್ತೆ ಬದಿ ಸಂಚರಿಸಿ ಬಳಿಕ ರಸ್ತೆ ಪಕ್ಕದ ಕಾಡಿನೊಳಗೆ ಹೋಗಿರುವುದಾಗಿ ತಿಳಿದುಬಂದಿದೆ.

ಕನಕಮಜಲು ಗ್ರಾಮದ ಕುದ್ಕುಳಿ, ಕುತ್ಯಾಳ, ಕಣಜಾಲು, ಮುಗೇರು ಪರಿಸರದಲ್ಲಿ ಕೃಷಿಕರ ಕೃಷಿ ತೋಟಗಳಿಗೆ ನುಗ್ಗಿ ಪ್ರತಿ ವರ್ಷ ಹಾನಿ ನಡೆಸುತ್ತಿದ್ದ ಕಾಡಾನೆಗಳು ಇದೀಗ ಆನೆಗುಂಡಿ ಪರಿಸರದ ಕಾಡಿನಲ್ಲಿ ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದೆ.ಇದರಿಂದ ಪರಿಸರದ ರೈತರು ಆತಂಕಗೊಂಡಿದ್ದಾರೆ.

]]>
70407
ಜಾಲ್ಸೂರು: ಬೈತಡ್ಕ ದಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿ https://sullia.samagrasamachara.com/2024/10/30/news-one-25/ Wed, 30 Oct 2024 09:03:59 +0000 https://sullia.samagrasamachara.com/?p=70319 ಜಾಲ್ಸೂರು: ಮಾಣಿ – ಮೈಸೂರು ರಾ.ಹೆದ್ದಾರಿಯ ಬೈತಡ್ಕ ಎಂಬಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾದ ಘಟನೆ ಅ.30 ಮಧ್ಯಾಹ್ನ ಸಂಭವಿಸಿದೆ.

ಟ್ಯಾಂಕರ್ ಪಲ್ಟಿಯಾಗಿ ತೈಲ ಸೋರಿಕೆಯಾಗುತ್ತಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಸುಳ್ಯ ‌ಅಗ್ನಿಶಾಮಕ‌ ಠಾಣೆ ಸಿಬ್ಬಂದಿ ಧಾವಿಸಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

]]>
70319
ಕನಕಮಜಲು: ಆನೆದಾಳಿಗೆ ಕೃಷಿ ನಾಶ https://sullia.samagrasamachara.com/2024/10/03/kanakamajal/ Thu, 03 Oct 2024 03:45:47 +0000 https://sullia.samagrasamachara.com/?p=70111 ಜಾಲ್ಸೂರು: ಕನಕಮಜಲು ಗ್ರಾಮದ ಕುಧ್ಕುಳಿ ಹಾಗೂ ಕೊರಂಬಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ಆನೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆ ನಾಶಗೊಳಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಕನಕಮಜಲು ಗ್ರಾಮದ ಲೋಹಿತ್‌ ಕುಮಾರ್‌ ಕುಧ್ಕುಳಿ ಅವರ ಕೃಷಿ ತೋಟದಲ್ಲಿ ಎಂಟು ತೆಂಗಿನ ಗಿಡ, ಒಂದು ದೊಡ್ಡ ತೆಂಗಿನ ಮರ, 25ಕ್ಕೂ ಅಧಿಕ ಬಾಳೆ, ಅಡಿಕೆ ಸಸಿಗಳಿನ್ನು ನಾಶಗೊಳಿಸಿದೆ.

ಅಲ್ಲದೇ ಗ್ರಾಮದ ಕೊರಂಬಡ್ಕ ಪದ್ಮನಾಭ ಗೌಡರ ಕೃಷಿ ತೋಟಕ್ಕೂ ದಾಳಿ ನಡೆಸಿದ್ದು, ಅಡಿಕೆ ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡಿದೆ.

]]>
70111
ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ https://sullia.samagrasamachara.com/2024/08/24/jalsoor/ Sat, 24 Aug 2024 07:07:05 +0000 https://sullia.samagrasamachara.com/?p=69703 ಸುಳ್ಯ: ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಶನಿವಾರ(ಆ.24) ನಡೆಯಿತು.

ಸ್ಪರ್ಧೆಗಳಿಗೆ ಶಾಲಾ ಸಂಚಾಲಕ ಜಾಕೆ ಸದಾನಂದ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ದೇರಣ್ಣ ಗೌಡ ಎ ವಹಿಸಿದರು. ಅತಿಥಿಗಳಾಗಿ ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಆಶಾ ನಾಯಕ್ ಭಾಗವಹಿಸಿ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ. ಹೆಚ್. ಅಬ್ದುಲ್ ಖಾದರ್, ಬಿಆರ್ ಪಿ ಸುಂದರ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಜಯಲತಾ ಕೆ.ಆರ್. ಸ್ವಾಗತಿಸಿ, ಶಿಕ್ಷಕ ಶಿವಪ್ರಕಾಶ ಕೆ ವಂದಿಸಿ, ಶಿಕ್ಷಕಿ ಸವಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಕೆ ಕಾರ್ಯಕ್ರಮ ನಿರ್ವಹಿಸಿದರು.

]]>
69703
ಜಾಲ್ಸೂರು: ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ-ದತ್ತಿನಿಧಿ ವಿತರಣೆ https://sullia.samagrasamachara.com/2024/08/15/independence-day-celebration/ Thu, 15 Aug 2024 08:13:54 +0000 https://sullia.samagrasamachara.com/?p=69596 ಜಾಲ್ಸೂರು; ಆ 15: ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ದತ್ತಿನಿಧಿ ವಿತರಣೆ ಕಾರ್ಯಕ್ರಮ ನಡೆಯಿತು.

ಪಯಸ್ವಿನಿ ಪ್ರೌಢ ಶಾಲಾ ಸಂಚಾಲಕ ಜಾಕೆ ಸದಾನಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಂತರ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ ಕೆ. ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಕದಿಕಡ್ಕ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳು ಜಂಟಿಯಾಗಿ ಜಾಲ್ಸೂರು ಪೇಟೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ಜೈ ಘೋಷದೊಂದಿಗೆ ಬೃಹತ್ ಮೆರವಣಿಗೆ ನಡೆಯಿತು.

ಈ ವೇಳೆ ಜಾಲ್ಸೂರು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಲಡ್ಡು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಿವೃತ್ತ ಶಿಕ್ಷಕ ಹಾಗೂ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಾಜಿ ಅಧ್ಯಕ್ಷ ಕೇಪು ಸುಂದರ ಮಾಸ್ತರ್ ಅವರು ನೀಡಿರುವ ದತ್ತಿ ನಿಧಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್, ಶಿಕ್ಷಕರಾದ ಮೀನಕುಮಾರಿ, ಶಿವಪ್ರಕಾಶ.ಕೆ, ಸವಿತಾ ಕುಮಾರಿ, ಕುಮಾರ್ ಲಮಾಣಿ, ಸಿಬ್ಬಂದಿ ಬೇಬಿ. ಕೆ ಉಪಸ್ಥಿತರಿದ್ದರು. ಶಿಕ್ಷಕ ಶಿವಪ್ರಕಾಶ್ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.

]]>
69596
ಏಕಾಏಕಿ ಸುರಿದ ಧಾರಾಕಾರ ಮಳೆ| ತಾಲೂಕಿನ ಅಲ್ಲಲ್ಲಿ ರಾತ್ರಿ ವೇಳೆ ನೆರೆ ಹಾವಳಿ https://sullia.samagrasamachara.com/2024/08/14/rain/ Wed, 14 Aug 2024 03:42:06 +0000 https://sullia.samagrasamachara.com/?p=69558 ಸುಳ್ಯ: ಆ.14; ಅವಿಭಜಿತ ಸುಳ್ತ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಸಂಜೆವರೆಗೆ ಬಿಸಿಲಿತ್ತು. ಆ ಬಳಿಕ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಐವರ್ನಾಡು, ಪಂಜ, ಅರಂತೋಡು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಗುತ್ತಿಗಾರು, ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ ಮತ್ತಿತರ ಪರಿಸದಲ್ಲೂ ಉತ್ತಮ ಮಳೆಯಾಗಿದೆ.

ಏಕಾಏಕಿ ಸುರಿದ ಮಳೆಯಿಂದ ಕೆಲವೆಡೆ ನದಿ ತೊರೆಗಳು ಉಕ್ಕಿ ಹರಿದು ನೆರೆಭೀತಿ ಉಂಟಾಗಿತ್ತು. ಸಂಪಾಜೆ, ಕಲ್ಲುಗುಂಡಿ, ಕೊಯನಾಡು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಇಲ್ಲಿನ ಮನೆಯೊಂದರ ಸುತ್ತ ರಾತ್ರಿ ಹೊಳೆ ನೀರು ಆವರಿಸಿತು.

ಆತಂಕಿತರಾದ ಮನೆಯವರು ಮನೆಗೆ ಬೀಗ ಹಾಕಿ ಹೊರಗೆ ನಿಂತರು. ಸಂಪಾಜೆಯ ಗ್ಯಾರೇಜ್‌ ಒಂದಕ್ಕೆ ನೀರು ಆವರಿಸಿ ಗ್ಯಾರೇಜ್‌ನಲ್ಲಿದ್ದ ವಾಹನಗಳನ್ನು ಸ್ಥಳೀಯರ ಸಹಕಾರದಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು.

ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜ ಸಮೀಪದ ಬೊಳ್ಮಲೆಯಲ್ಲಿ ನದಿ ಉಕ್ಕಿ ಹರಿದ ಪರಿಣಾಮ ನೀರು ಹೆದ್ದಾರಿಗೆ ಆವರಿಸಿ‌ ವಾಹನ ಸವಾರರು ಪ್ರಯಾಸಪಟ್ಟರು. ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ ಕೆಲಕಾಲ ಆತಂಕ‌ ಸೃಷ್ಟಿಸಿತ್ತು.

]]>
69558