Hariharapallathadka – Sullia Samagra Samachara https://sullia.samagrasamachara.com Samagra Media Network Sun, 12 Jan 2025 10:30:42 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Hariharapallathadka – Sullia Samagra Samachara https://sullia.samagrasamachara.com 32 32 235500897 ಹರಿಹರ ಪಳ್ಳತ್ತಡ್ಕ: ಹೋರಿ ಎರಗಿ ವ್ಯಕ್ತಿಗೆ ಗಾಯ https://sullia.samagrasamachara.com/2025/01/12/news-one-81/ Sun, 12 Jan 2025 10:30:42 +0000 https://sullia.samagrasamachara.com/?p=70679 ಗುತ್ತಿಗಾರು: ಇಲ್ಲಿನ ಸಮೀಪದ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಬೀಡಾಡಿ ಹೋರಿ ಎರಗಿ ವ್ಯಕ್ತಿ ಗಾಯಗೊಂಡ ಘಟನೆ ಜ.10ರಂದು ಸಂಭವಿಸಿದೆ.

ಹರಿಹರ ಪಳ್ಳತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ಗಾಯಗೊಂಡವರು. ಅವರು ಮನೆಯ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ರಸ್ತೆ ಬದಿಯಿದ್ದ ಹೋರಿ ಏಕಾಏಕಿ ಅವರ ಮೇಲೆ ಎರಗಿದೆ.

ಘಟನೆಯಲ್ಲಿ ತಲೆ, ಸೊಂಟ, ಪಕ್ಕೆಲುಬಿಗೆ ಗಾಯವಾಗಿದೆ. ಗಾಯಗೊಂಡ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಡಾಡಿ ಜಾನುವಾರುಗಳ ಹಾವಳಿ ಹರಿಹರ ಪಳ್ಳತ್ತಡ್ಕದಲ್ಲಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಆಗ್ರಹ ಕೇಳಿಬಂದಿದೆ.

]]>
70679
ಹರಿಹರ : ಶ್ರೀ ವರಮಹಾಲಕ್ಷ್ಮೀ ಪೂಜೆ https://sullia.samagrasamachara.com/2024/08/17/varamahalakshmi-pooje/ Sat, 17 Aug 2024 04:35:52 +0000 https://sullia.samagrasamachara.com/?p=69642 ಹರಿಹರ; ಆ. 16:ಶ್ರೀ ಹರಿಹರೇಶ್ವರ ದೇವಸ್ಥಾನ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಇವುಗಳ ಸಹಬಾಗಿತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ಆ. 16ರಂದು ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಯಿತು.

ದೇವಸ್ಥಾನದ ಪ್ರದಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ಕಾರ್ಯವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ವರಮಹಾಲಕ್ಷ್ಮೀ ಸಮಿತಿಯ ಸ್ಥಾಪಕಧ್ಯಕ್ಷ ತಾರ ಮಲ್ಲಾರ, ಗೌರವಾಧ್ಯಕ್ಷ ಸಾಯಿಗೀತಾ ಕೂಜುಗೋಡು, ಅಧ್ಯಕ್ಷೆ ಹರ್ಷಿಣಿ ಶಿಶಿರ್ ಕಟ್ಟೆಮನೆ, ಹಾಗು ಸರ್ವ ಸದಸ್ಯರು, ಊರ ಪರವೂರ ಭಕ್ತಾದಿಗಳು ಭಾಗಿಯಾದರು.

]]>
69642