Guthigaru – Sullia Samagra Samachara https://sullia.samagrasamachara.com Samagra Media Network Wed, 22 Jul 2026 02:57:01 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Guthigaru – Sullia Samagra Samachara https://sullia.samagrasamachara.com 32 32 235500897 ನಿಧನ: ಶ್ರೀಮತಿ ಅಕ್ಕಯ್ಯ ಆರ್ನೋಜಿ https://sullia.samagrasamachara.com/2026/07/22/death-news-akkaiah-arnoji/ Wed, 22 Jul 2026 02:57:01 +0000 https://sullia.samagrasamachara.com/?p=71963 ಗುತ್ತಿಗಾರು: ಇಲ್ಲಿನ ವಳಲಂಬೆ ಸಮೀಪದ ದಿ. ಆರ್ನೋಜಿ ಕೃಷ್ಣಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಅಕ್ಕಯ್ಯರವರು ಅಸೌಖ್ಯದಿಂದ ಜು. 21 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಸಾಹಿತಿ ಎ.ಕೆ. ಹಿಮಕರ, ಪ್ರಗತಿಪರ ಕೃಷಿಕರಾದ ರಾಘವ, ಗೋಪಾಲಕೃಷ್ಣ, ಪುತ್ರಿಯರಾದ ತಾರಾವತಿ, ಭವಾನಿ, ಹೇಮಾವತಿ, ಸೊಸೆ, ಅಳಿಯಂದಿರು,ಮೊಮ್ಮಕ್ಕಳನ್ನು, ಮರಿಮಕ್ಕಳನ್ನು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

]]>
71963
ಮರಕತ:ಚಾಮುಂಡಿ ಕ್ಷೇತ್ರದಲ್ಲಿ ಸಂಕ್ರಮಣ ತಂಬಿಲ https://sullia.samagrasamachara.com/2026/05/21/news-one-308/ Thu, 21 May 2026 04:09:28 +0000 https://sullia.samagrasamachara.com/?p=71919 ಗುತ್ತಿಗಾರು: ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಚಾಮುಂಡಿ ಹಾಗೂ ಪಂಜುರ್ಲಿ, ಪುರುಷರಾಯ‌ ದೈವಸ್ಥಾನದಲ್ಲಿ ವೃಷಭ ಸಂಕ್ರಮಣದ ಪ್ರಯುಕ್ತ ತಿಂಗಳ ಸಂಕ್ರಮಣದ ತಂಬಿಲ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಹಾಗೂ ಬ್ರಹ್ಮಕಲಶ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆದು ಬರಲಿ ಎಂದು ಪ್ರಾರ್ಥಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷೆ ನಿರ್ಮಲಾ ಪದ್ಮನಾಭ ಪರಮಲೆ ಹಾಗೂ ಬ್ರಹ್ಮ ಕಲಶ ಸಮಿತಿ. ಅಧ್ಯಕ್ಷ ವಿನ್ಯಾಸ್ ಕೊಚ್ಚಿ ಹಾಗೂ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಮಾವಿನ ಕಟ್ಟೆ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ವಿವಿಧ ಅಭಿವೃದ್ಧಿ ಸಮಿತಿಯ ಸದಸ್ಯರು ಊರವರು ಉಪಸ್ಥಿತರಿದ್ದರು.

]]>
71919
ಇನ್ಸ್ಟಾಗ್ರಾಮ್ ನಲ್ಲಿ ಗುತ್ತಿಗಾರಿನ ಬ್ಯಾನರ್ ವೈರಲ್ https://sullia.samagrasamachara.com/2026/04/18/news-one-305/ Sat, 18 Apr 2026 13:34:18 +0000 https://sullia.samagrasamachara.com/?p=71905 ಗುತ್ತಿಗಾರು‌: ಇಲ್ಲಿನ ಕಮಿಲ – ಬಳ್ಪ ರಸ್ತೆ ಬದಿಯಲ್ಲಿ ನಾಗರೀಕರೊಬ್ಬರು ಅಳವಡಿಸಿದ ಬ್ಯಾನರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Instagram/niranthdevasyaofficial ಪೇಜ್ ನಲ್ಲಿ ವೈರಲ್ ಆಗುತ್ತಿರುವ ಬ್ಯಾನರ್ ನಲ್ಲಿ ”ಎಲೆಕ್ಷನ್ ಮತ್ತು ಕಲೆಕ್ಷನ್ ನವರಿಗೆ ಕಡ್ಡಾಯವಾಗಿ ಒಳಗೆ ಪ್ರವೇಶವಿಲ್ಲ ಕಚ್ಚುವ ನಾಯಿಗಳಿವೆ ಜಾಗ್ರತೆ” ಎಂದು ಬರೆದಿದ್ದಾರೆ. ಹಲವು ದಿನಗಳಿಂದ ಈ ಬ್ಯಾನರ್ ರಾರಾಜಿಸುತ್ತಿದೆ. ಲಕ್ಷ್ಮಣ ದೇವಸ್ಯ ಎಂಬವರು ತಮ್ಮ ಮನೆ ಬಳಿ ಇಂತಹ ಬರಹವಿರುವ ಬ್ಯಾನರ್ ರಸ್ತೆ ಬದಿ ಅಳವಡಿಸಿದ್ದಾರೆ.

ದೇಶದಲ್ಲಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ಊರು ಊರಲ್ಲಿ ನೆಲೆಸುತಿದ್ದು ಅವರನ್ನು ಪತ್ತೆ ಹಚ್ಚ ಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಣ ಅವರು ಪಂಚಾಯತ್ ಮತ್ತು ಜನಪ್ರತಿನಿಧಿಗಳ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದ ಕಾರಣ ಈ ರೀತಿಯ ಬ್ಯಾನರ್ ಅಳವಡಿಸಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿರುವುದಾಗಿ ಕಂಟೆಂಟ್ ಕ್ರಿಯೇಟರ್ ನಿರಂತ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸಾಮಾಜಿಕ ವ್ಯವಸ್ಥೆಯ ಕುರಿತು ಅವರು ಎತ್ತಿರುವ ಪ್ರಶ್ನೆಗೆ ಸರಿಯಾದ ಉತ್ತರ ಸಿಗದಿರುವಂಥದ್ದು ರಾಜಕೀಯ ನಾಯಕರನ್ನು ಗೇಲಿ ಮಾಡಿದಂತಿದೆ.

]]>
71905
ಗುತ್ತಿಗಾರು: ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ https://sullia.samagrasamachara.com/2025/12/15/guthigaru-veeranjaneya-sports-news/ Mon, 15 Dec 2025 16:09:39 +0000 https://sullia.samagrasamachara.com/?p=71724 ಗುತ್ತಿಗಾರು: ಇಲ್ಲಿನ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಗುತ್ತಿಗಾರಿನ ಪ. ವರ್ಗದ ಸಭಾಭವನದಲ್ಲಿ ಕ್ಲಬ್ ನ
ಸ್ಥಾಪಕಾಧ್ಯಕ್ಷರಾದ ಮಾಯಿಲಪ್ಪ ಕೊಂಬೆಟ್ಟು ಇವರ ಸಮ್ಮುಖದಲ್ಲಿ ನಡೆಯಿತು.

ಕ್ಲಬ್ ನ‌ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಶಿರಾಜೆ,
ಪ್ರಧಾನ ಕಾರ್ಯದರ್ಶಿಯಾಗಿ ನಿರಂತ್ ದೇವಶ್ಯ, ಕೋಶಾಧಿಕಾರಿಯಾಗಿ ವಿನೀತ್ ಮುತ್ಲಾಜೆ ಹಾಗೂ ನಿರ್ದೇಶಕರುಗಳಾಗಿ ಗಿರೀಶ್ ಪಾರೆಪ್ಪಾಡಿ, ಜಯಂತ ದೇವ, ನವೀನ್ ಕೊಪ್ಪಡ್ಕ, ಭರತ್ ಹುಲಿಕೆರೆ, ಚಂದ್ರಶೇಖರ
ಕಡೋಡಿ, ಶಿವಪ್ರಸಾದ್ ಚಣಿಲ, ಸುನಿಲ್ ಸಂಪ್ಯಾಡಿ, ಕುಲದೀಪ್ ಪೈಕ, ಅನಿಲ್ ಮೆಟ್ಟಿನಡ್ಕ ಇವರುಗಳನ್ನು ಆಯ್ಕೆ‌ ಮಾಡಲಾಯಿತು.

]]>
71724
ಗುತ್ತಿಗಾರು – ಬಳ್ಪ ಸಂಪರ್ಕಿಸುವ ಚತ್ರಪ್ಪಾಡಿ ಸೇತುವೆ ದುರಸ್ತಿ ಹಿನ್ನಲೆ ಸಂಚಾರ ಬಂದ್ https://sullia.samagrasamachara.com/2025/11/19/guthigaru-balpa-road-closed/ Wed, 19 Nov 2025 09:31:32 +0000 https://sullia.samagrasamachara.com/?p=71648 ಗುತ್ತಿಗಾರು: ಇಲ್ಲಿಂದ ಬಳ್ಪ ಸಂಪರ್ಕಿಸುವ ರಸ್ತೆಯ ಚತ್ರಪ್ಪಾಡಿ ಎಂಬಲ್ಲಿ ಹಳೆ ಸೇತುವೆ ತೆಗೆದು ನೂತನ ಸೇತುವ ನಿರ್ಮಾಣ ಕಾಮಗಾರಿ ಕೆಲಸ ಇಂದಿನಿಂದ (ನ.19) ಪ್ರಾರಂಭವಾಗಲಿದೆ. ಆದ್ದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸೂಚಿಸಿದ್ದಾರೆ.

ಬಳ್ಪ ಸಂಪರ್ಕಿಸಲು ಘನ ವಾಹನಗಳು ಗುತ್ತಿಗಾರು – ಬಳ್ಳಕ ಪಂಜ ಮಾರ್ಗವಾಗಿ ಸಂಚರಿಸಬಹುದು. ಲಘು ವಾಹನಗಳು ಈ ಮಾರ್ಗದಲ್ಲಿ ಅಲ್ಲದೇ ಚತ್ರಪ್ಪಾಡಿಯಿಂದ ಹಾಲೆಮಜಲು ಮೂಲಕವಾಗಿ ರಾಜ್ಯ ರಸ್ತೆ ಸಂಪರ್ಕ ಪಡೆದು ಗುತ್ತಿಗಾರಿಗೆ ಪ್ರಯಾಣಿಸಬಹುದು.

]]>
71648
ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸ್ಪರ್ಧೆಗಳಿಗೆ ಆಹ್ವಾನ https://sullia.samagrasamachara.com/2025/11/07/pnja-hobali-sahithya-sammelana-competition/ Fri, 07 Nov 2025 04:26:50 +0000 https://sullia.samagrasamachara.com/?p=71596 ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನ.09 ರಂದು ವಳಲಂಬೆ ದೇವಸ್ಥಾನದ ವಠಾರದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ.

ಪ್ರಾಥಮಿಕ ಶಾಲಾ ವಿಭಾಗ : ಕನ್ನಡ ಗೀತೆ ಗಾಯನ, ಕವಿ-ಸಾಹಿತಿಗಳ ಹೆಸರುಗಳನ್ನು ಬರೆಯುವುದು, ರಾಷ್ಟ್ರಧ್ವಜದ ಚಿತ್ರ ಬಿಡಿಸುವುದು.
ಪ್ರೌಢಶಾಲಾ ವಿಭಾಗ : ಕನ್ನಡ ಗೀತೆ ಗಾಯನ, ಕವಿ-ಸಾಹಿತಿಗಳ ಹೆಸರುಗಳನ್ನು ಬರೆಯುವುದು, ಚೀಟಿ ಎತ್ತಿ ಭಾಷಣ.
ಪದವಿಪೂರ್ವ/ಪದವಿ ವಿಭಾಗ : ಸ್ಥಳದಲ್ಲಿ ಕಥೆ ರಚನೆ, ಕವನ ರಚನೆ, ಚೀಟಿ ಎತ್ತಿ ಭಾಷಣ.
ಸಾರ್ವಜನಿಕ ವಿಭಾಗ : ಗೀತೆ ಗಾಯನ, ಒಬ್ಬ ಕವಿಯ ಪರಿಚಯ ಮಾಡುವುದು, ಕವಿತೆ ರಚನೆ.

ಸ್ಪರ್ಧೆಗಳು ನ.09 ಆದಿತ್ಯವಾರದಂದು ಬೆಳಿಗ್ಗೆ 9:30 ರಿಂದ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಪಂಜ ಹೋಬಳಿಯ ಗ್ರಾಮಗಳಾದ ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಕೂತ್ಕುಂಜ, ಮುರುಳ್ಯ, ಪಂಬೆತ್ತಾಡಿ ಹಾಗೂ ಪಕ್ಕದ ಸುಳ್ಯ ಹೋಬಳಿಯ ಗ್ರಾಮಗಳಾದ ಕಲ್ಮಡ್ಕ, ಕಳಂಜ, ಬಾಳಿಲ, ಅಮರ ಮುಡ್ನೂರು, ಅಮರ ಪಡ್ನೂರು, ನೆಲ್ಲೂರು ಕೆಮ್ರಾಜೆ ಮತ್ತು ಮಡಪ್ಪಾಡಿ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಯೋಗೀಶ್ ಹೊಸೊಳಿಕೆ 9449576632 ರವರನ್ನು ಸಂಪರ್ಕಿಸುವಂತೆ ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

]]>
71596
ಕಂದ್ರಪ್ಪಾಡಿ: ಪಂಚಸಪ್ತತಿ ಅಭಿಯಾನಕ್ಕೆ ಚಾಲನೆ https://sullia.samagrasamachara.com/2025/10/11/news-one-262/ Sat, 11 Oct 2025 02:17:25 +0000 https://sullia.samagrasamachara.com/?p=71531 ಗುತ್ತಿಗಾರು: ಯುವಜನ ಸಂಯುಕ್ತ ಮಂಡಳಿ ಸುಳ್ಯ ಆಶ್ರಯದಲ್ಲಿ ಹಮ್ಮಿಕೊಂಡಿರುವ “ಪಂಚಸಪ್ತತಿ – 2025” ಎಪ್ಪತ್ತೈದು ದಿನಗಳ ಸ್ವಚ್ಛತಾ ಅಭಿಯಾನಕ್ಕೆ ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಯವರಿಂದ ಇಂದು ಕಂದ್ರಪ್ಪಾಡಿ ಬಸ್ ತಂಗುದಾಣದ ವಠಾರದಲ್ಲಿ ಚಾಲನೆ ನೀಡಲಾಯಿತು. ನಂತರ ಬಸ್ ತಂಗುದಾಣದ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ದಿವಾಕರ ಮಂಡೋಡಿ,
ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಸಾಂಸ್ಕೃತಿಕ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಮತ್ತು ಯುವಕಮಂಡಲದ ಕಾರ್ಯದರ್ಶಿ ಪ್ರೀತಮ್ ಮುಂಡೋಡಿ, ಸದಸ್ಯರಾದ ವಿನೋದ್ ಕುಮಾರ್ ಮುಂಡೋಡಿ, ಓಂ ಪ್ರಕಾಶ್ ಮುಂಡೋಡಿ, ಅಶ್ವಿತ್ ಪರಮಲೆ, ಧೀರನ್ ಕುಂಬಾರಕೇರಿ, ರಾಕೇಶ್ ರಾಜ್ ಹಿರಿಯಡ್ಕ, ಜಯಪ್ರಕಾಶ್ ಕಡ್ಲಾರು, ಯೋಗೀಶ್ ಬಾಳೆಗುಡ್ಡೆ, ವಿಜಯ ಮಾಡಬಾಗಿಲು, ಪ್ರದೀಪ್ ಕುತ್ಯಾಳರವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

]]>
71531
ಗುತ್ತಿಗಾರು: ಧ.ಗ್ರಾ ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಾಗಾರ https://sullia.samagrasamachara.com/2025/08/28/news-one-236/ Thu, 28 Aug 2025 13:07:32 +0000 https://sullia.samagrasamachara.com/?p=71428 ಗುತ್ತಿಗಾರು:: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಬಾಬು ಮಾಸ್ತರ್, ಶಾಲಾ ಮಕ್ಕಳು ದುಶ್ಚಟಗಳಿಂದ ದೂರವಿದ್ದು ಶಾಲಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಹಾಗೂ ಹಿರಿಯರಿಗೆ ಗೌರವ ಕೊಡುವುದರ ಜತೆಗೆ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದರು.

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮಹತ್ವದ ಬಗ್ಗೆ ತರಬೇತುದಾರರಾದ ಲೋಕೇಶ್ ಪೀರನಮನೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಂಪಾಲೆ ಚೆನ್ನಮ್ಮ ಪಿ. ವಹಿಸಿದ್ದರು.

ವಲಯ ಮೇಲ್ವಿಚಾರಕರಾದ ರಾಜೇಶ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಂಜಿತ್ ಕಾರ್ಯಕ್ರಮ ನಿರ್ವಹಿಸಿದರು.

]]>
71428
ಬಳ್ಳಕ: ಗಣೇಶೋತ್ಸವ ಸಂಪನ್ನ https://sullia.samagrasamachara.com/2025/08/28/news-one-235/ Thu, 28 Aug 2025 12:28:24 +0000 https://sullia.samagrasamachara.com/?p=71425 ಗುತ್ತಿಗಾರು: ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಬಳ್ಳಕ್ಕ ಇದರ ಆಶ್ರಯದಲ್ಲಿ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ. 27ರಂದು ನಡೆಯಿತು.

ಬೆಳಿಗ್ಗೆ ಗಣಪತಿ ಪ್ರತಿಷ್ಠೆ, ಶ್ರೀ ಮಹಮ್ಮಾಯಿ ಭಜನಾ ತಂಡ ಬಳ್ಳಕ್ಕ ಇವರಿಂದ ಭಜನಾ ಕಾರ್ಯಕ್ರಮ, ರಂಗಪೂಜೆ, ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಹರಿಪುರ ಬಳ್ಳಕ್ಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ನಿಯೋಜನೆಗೊಂಡಿರುವ ಪ್ರದೀಪ್ ಕುಮಾರ್ ಎಸ್.ಕೆ ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಣೇಶೋತ್ಸವ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಜೆ ಶೋಭಾಯಾತ್ರೆ ನಡೆದು ಹೊಳೆಯಲ್ಲಿ ಗಣಪತಿ ವಿಸರ್ಜನೆ ನಡೆಯಿತು.

]]>
71425
ವಳಲಂಬೆ: ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಅರ್ಧಕ್ಕೇ ಬ್ರೇಕ್ ಹಾಕಿದ ಪೊಲೀಸರು https://sullia.samagrasamachara.com/2025/08/27/valalambe-police-entered-and-stopped-ganeshostva-program/ Wed, 27 Aug 2025 17:11:03 +0000 https://sullia.samagrasamachara.com/?p=71411 ಗುತ್ತಿಗಾರು: ಇಲ್ಲಿನ ವಳಲಂಬೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೆ ನಿಲ್ಲಿಸಿದ ಘಟನೆ ಇಂದು(ಆ.27) ರಾತ್ರಿ ನಡೆದಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 10ಗಂಟೆ ನಂತರ ನಡೆಸಬಾರದು ಎಂದು ಸರ್ಕಾರದ ಆದೇಶವಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಕಾರ್ಯಕ್ರಮ ನಿಲ್ಲಿಸುವಂತೆ ತಿಳಿಸಿದರು. ಅದಾಗಲೇ 10 ಗಂಟೆ ಕಳೆದಿದ್ದು 30 ನಿಮಿಷಗಳ ಕಾರ್ಯಕ್ರಮ ಬಾಕಿ ಇರುವಾಗಲೇ ಕಾರ್ಯಕ್ರಮಗಳು ದಿಢೀರ್ ಸ್ಥಗಿತಗೊಂಡಿತು.

ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಸೇರಿರುವ ಭಕ್ತಾದಿಗಳು ಹಾಗೂ ಕಲಾವಿದರಿಗೆ ನಿರಾಶೆಯಾಗಿದ್ದು, ಸರ್ಕಾರದ ಆದೇಶಕ್ಕೆ ಅಸಮಾಧಾನಗೊಂಡರು.

]]>
71411