Devachalla – Sullia Samagra Samachara https://sullia.samagrasamachara.com Samagra Media Network Tue, 11 Mar 2025 09:38:20 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Devachalla – Sullia Samagra Samachara https://sullia.samagrasamachara.com 32 32 235500897 ಕಂದ್ರಪ್ಪಾಡಿ ಜಾತ್ರೆ ಪ್ರಯುಕ್ತ ಧ್ವಜಾರೋಹಣ https://sullia.samagrasamachara.com/2025/03/11/kandrappady-jathre-dvajarohana/ Tue, 11 Mar 2025 09:38:20 +0000 https://sullia.samagrasamachara.com/?p=70958 ಗುತ್ತಿಗಾರು.ಮಾ11: ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ನಿನ್ನೆ(ಮಾ. 10) ರಾತ್ರಿ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ, ಸದಸ್ಯರುಗಳಾದ ಸೋಮಶೇಖರ ಕೇವಳ, ಜಯರಾಮ ಕಡ್ಲಾರು, ಯಂ. ಆರ್. ಪುರುಷೋತಮ ಮುಂಡೋಡಿ, ಗೀತಾ ತಿಮ್ಮಪ್ಪ ಕಡ್ಯ, ಜಾನಕಿ ಚಿದಾನಂದ ಪೆರಾಳಕಜೆ, ಶೂರಪ್ಪ ದೇವ, ಕರುಣಾಕರ ದೇವರಗುಂಡ ಹಾಗೂ ಮಾಜಿ ಸದಸ್ಯರುಗಳು, ಊರ ಭಕ್ತರು ಉಪಸ್ಥಿತರಿದ್ದರು.

ಕಂದ್ರಪ್ಪಾಡಿ ಜಾತ್ರೆಯು ಮಾ. 14ರಿಂದ ಮಾ.15ರ ವರೆಗೆ ವಿವಿಧ ಧಾರ್ಮಿಕ‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

]]>
70958
ದೇವಚಳ್ಳ: ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ https://sullia.samagrasamachara.com/2024/12/17/yelimale-swasthya-sankalpa-programme/ Tue, 17 Dec 2024 03:10:23 +0000 https://sullia.samagrasamachara.com/?p=70579 ಎಲಿಮಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ, ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಎಲಿಮಲೆಯಲ್ಲಿ‌ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಸಂಧ್ಯಾ ಕೆ ವಹಿಸಿದ್ದರು.

ದೇವಚಳ್ಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲುರವರು ದೀಪ ಪ್ರಜ್ವಲಿಸಿ ಮಾತನಾಡುತ್ತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಿದೆ, ಮಹಿಳೆಯರು ಸಬಲೀಕರಣರಾಗಿದ್ದಾರೆ. ಯೋಜನೆಯಿಂದ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಮಕ್ಕಳು ಸರಿ ದಾರಿಗೆ ಬಂದು ಉತ್ತಮವಾದ ಶಿಕ್ಷಣವನ್ನು ಪಡೆದು, ಒಳ್ಳೆಯ ಜೀವನ ನಡೆಸಿಕೊಂಡು ಹೋಗಲು ಧರ್ಮಸ್ಥಳದ ಪೂಜ್ಯರು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಪ್ರತಿ ಶಾಲೆಗಳಲ್ಲಿ ಹಮ್ಮಿಕೊಂಡು ಬಂದಿದ್ದಾರೆ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮವಾದ ಶಿಕ್ಷಣವನ್ನು ಪಡೆಯಿರಿ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡ ಮಾತನಾಡಿ, ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದು ಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳತ್ತಾ ಬಂದಿದೆ. ಶಾಲಾ ವಿದ್ಯಾರ್ಥಿಗಳು ದುಶ್ಚಟಕ್ಕೆ ಬೀಳಬಾರದು ಎಂಬ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹದಿಹರೆಯ ಮಕ್ಕಳಲ್ಲಿ ಬೇರೆ ಬೇರೆ ವಿಧಗಳಲ್ಲಿ ದುಶ್ಚಟಗಳು ಕಂಡು ಬರುತ್ತದೆ. ಮಾದಕ ವಸ್ತುಗಳಾದ ದೂಮಪಾನ, ಮದ್ಯಪಾನ, ಡ್ರಗ್ಸ್ ಮುಂತಾದ ಮದ್ಯವ್ಯಸನಿಗಳಿಗೆ ತುತ್ತಾಗಿ ಮಕ್ಕಳು ಕೆಟ್ಟ ದಾರಿಗೆ ಬೀಳುತ್ತಾರೆ. ಇದರಿಂದ ಮಕ್ಕಳ ಅರೋಗ್ಯ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕಾದರೆ ಉತ್ತಮವಾದ ನಡತೆಯನ್ನು ಹೊಂದಿರಬೇಕು. ಪೋಷಕರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಒತ್ತನ್ನು ಕೊಡಬೇಕು. ಸಂಸ್ಕಾರ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು. ಮಕ್ಕಳು ಪ್ರತಿನಿತ್ಯ ಯೋಗಾಸನವನ್ನು ಮಾಡಬೇಕು ಎಂದು ಹೇಳಿದರು.

ಜನಜಾಗೃತಿ ವಲಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿರವರು ಮಾತನಾಡಿ, ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಅನೇಕ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದೇವೆ. ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು, ಮುಂದಿನ ಜೀವನದಲ್ಲಿ ಉತ್ತಮ ಪ್ರಜೆಯಾಗಬೇಕು ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತ ಬಂದಿದ್ದೇವೆ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಜನಜಾಗೃತಿ ಸದಸ್ಯರಾದ ಬಾಬು ಗೌಡ ಅಚ್ರಪ್ಪಾಡಿರವರು ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಧನಂಜಯ ಬಾಳೆತೋಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷರಾದ ಬಾನುಪ್ರಕಾಶ್ ತಳೂರು, ದೇವಚಳ್ಳ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಸೇವಾಪ್ರತಿನಿಧಿ ಉಷಾಲತಾ, ಶಾಲಾ ಶಿಕ್ಷಕರು, ಮಾವಿನಕಟ್ಟೆ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದರು. ಶಿಕ್ಷಕ ವಸಂತರವರು ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ನಿರೂಪಿಸಿದರು. ಶಿಕ್ಷಕ ಮುರಳಿ ಪುನುಕುಟ್ಟಿರವರು ವಂದಿಸಿದರು.

]]>
70579
ಶಿಕ್ಷಕರ ದಿನಾಚರಣೆ ಪ್ರಯುಕ್ತ ದೇವಪ್ಪ ಮಾಸ್ಟರ್ ಬಳ್ಳಕ ಅವರಿಗೆ ಗೌರವ ಅರ್ಪಣೆ https://sullia.samagrasamachara.com/2024/09/05/news-1-11/ Thu, 05 Sep 2024 12:33:45 +0000 https://sullia.samagrasamachara.com/?p=69845 ದೇವಚಳ್ಳ , ಸೆ.5; ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಹಿರಿಯ ಶಿಕ್ಷಕ ದೇವಪ್ಪ ಮಾಸ್ಟರ್ ಬಳ್ಳಕ ಅವರ ಸ್ವಗೃಹಕ್ಕೆ ತೆರಳಿ ಗೌರವ ಅರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶೈಲೇಶ್ ಅಂಬೆಕಲ್ಲು, ರಾಮಕೃಷ್ಣ ಅಂಬೆಕಲ್ಲು ಕೇಶವ ಕಾಯರ, ಶೀಲಾವತಿ ರಾಮಕೃಷ್ಣ, ಧರ್ಮಪಾಲ ಮೆದು ಉಪಸ್ಥಿತರಿದ್ದರು.

]]>
69845
ಎಲಿಮಲೆ ಪ್ರೌಢಶಾಲೆಯಲ್ಲಿ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ https://sullia.samagrasamachara.com/2024/09/01/elimale-high-school-sendoff-news/ Sun, 01 Sep 2024 16:23:55 +0000 https://sullia.samagrasamachara.com/?p=69811 ಎಲಿಮಲೆ: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ವರ್ಗಾವಣೆಗೊಂಡಿರುವ ಆಂಗ್ಲ ಭಾಷಾ ಶಿಕ್ಷಕರಾದ ಸುಂದರ ಕೆ ಇವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಧನಂಜಯ ಬಾಳೆತೋಟ ಇವರು ವಹಿಸಿದ್ದರು. ಅಜ್ಜಾವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಿನಾಥ ಎಂ ಅಭಿನಂದನಾ ಭಾಷಣ ಮಾಡಿದರು.

ಅತಿಥಿಗಳಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕಿರಣ್ ಗುಡ್ಡೆಮನೆ, ಎಸ್ ಡಿ ಎಂ ಸಿ ಸದಸ್ಯರಾದ ಪುರುಷೋತ್ತಮ ಸುಳ್ಳಿ, ಕೃಷ್ಣಪ್ಪ ಹರ್ಲಡ್ಕ, ಗೋವಿಂದ ಪಾರೆಮಜಲು, ಲೀಲಾವತಿ ಹರ್ಲಡ್ಕ, ವಿಶಾಲಾಕ್ಷಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಕಜೆ, ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ, ಶಾಲಾ ವಿದ್ಯಾರ್ಥಿ ನಾಯಕಿ ರಕ್ಷಿತಾ ಪಿ ಎಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೋಷಕರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು,ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

]]>
69811
ದೇವಚಳ್ಳ : ಬೃಹತ್ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ https://sullia.samagrasamachara.com/2024/09/01/yelimale-blood-camp/ Sun, 01 Sep 2024 15:52:44 +0000 https://sullia.samagrasamachara.com/?p=69807 ಎಲಿಮಲೆ: “ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ ಅಲ್ಲದೆ, ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದು, 18 ರಿಂದ 60 ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಲಿಂಗ ಭೇದವಿಲ್ಲದೆ ರಕ್ತ ಮಾಡಬಹುದು” ಎಂದು ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಅಧ್ಯಕ್ಷರಾದ ಡಾ. ಸೀತಾರಾಮ ಭಟ್ ತಿಳಿಸಿದರು. ಅವರು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆದ ಬೃಹತ್ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ನ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರಿನ ಪೂರ್ವಾಧ್ಯಕ್ಷರಾದ ಉಮಾನಾಥ್ ಪಿ ಬಿ, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾಕ್ಟರ್ ಸುಯೋಗ್, ಸುಳ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ರಾಮಕೃಷ್ಣ ರೈ, ಕಾರ್ಯದರ್ಶಿ ರಾಮಚಂದ್ರ ಪಲ್ಲತಡ್ಕ, ಪೂರ್ವಾಧ್ಯಕ್ಷ ವೀರಪ್ಪಗೌಡ, ಲಯನ್ ದೇವಿಪ್ರಸಾದ ಕುದ್ಪಾಜೆ, ಆರೋಗ್ಯ ಇಲಾಖೆ ಕುಸುಮಾವತಿ ಜಯಪ್ರಕಾಶ್, ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್, ಸರಕಾರಿ ಪ್ರೌಢಶಾಲೆ ಎಲಿಮಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಧನಂಜಯ ಬಾಳೆತೋಟ, ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಪ್ರವೀಣ್ ಮಾವಿನಕಟ್ಟೆ ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ದೇವಚಳ್ಳ, ಲಯನ್ಸ್ ಕ್ಲಬ್ ಸುಳ್ಯ, ಆರೋಗ್ಯ ಉಪಕೇಂದ್ರ ಎಲಿಮಲೆ ಮತ್ತು ಕಂದ್ರಪ್ಪಾಡಿ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಹಿರಿಯ ವಿದ್ಯಾರ್ಥಿ ಸಂಘದ ಸರಕಾರಿ ಪ್ರೌಢಶಾಲೆ ಎಲಿಮಲೆ ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಂತರ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಸುಳ್ಯ ತಹಸೀಲ್ದಾರ್ ಮಂಜುನಾಥ್ ಹಾಗೂ ಮಹಿಳೆಯರು ಸೇರಿದಂತೆ 53 ಜನ ರಕ್ತದಾನ ಮಾಡಿದ್ದು ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಟೆಕ್ನಿಷನ್ ಸಜಿನಿ ಮಾರ್ಟೀಸ್ ಮತ್ತು ತಂಡದವರು ಸಹಕರಿಸಿದ್ದರು. ಆರೋಗ್ಯ ಇಲಾಖೆಯ ಸಮುದಾಯದ ಆರೋಗ್ಯ ವೈದ್ಯಾಧಿಕಾರಿಗಳಾದ ಕು.ಮೋನಿಷಾ, ಕು. ಧನ್ಯ, ಅರೋಗ್ಯ ಸಹಾಯಕಿ ಕುಸುಮ ಜಯಪ್ರಕಾಶ್ ಹಾಗೂ ಆಶಾ ಕಾರ್ಯಕರ್ತೆಯರು ಅರೋಗ್ಯ ತಪಾಸಣೆ ನಡೆಸಿಕೊಟ್ಟರು.

ಪ್ರಸಾದ್ ನೇತ್ರಾಲಯದ ಪಿ ಆರ್ ಓ ಸಯ್ಯದ್ ಮತ್ತು ತಂಡದವರು ಕಣ್ಣಿನ ಪರೀಕ್ಷೆ ನಡೆಸಿದರು.ಗ್ರಾಮ ಒನ್ ದೇವಚಳ್ಳ ಇದರ ಲೋಹಿತ್ ಮಾವಿನಗೊಡ್ಲು ಮತ್ತು ಸಿಬ್ಬಂದಿ ಗಳಿಂದ ಅಂಚೆ ಇಲಾಖೆಯ ಮಾಹಿತಿ, ಡಿಜಿಟಲ್ ಖಾತೆ ಹಾಗೂ ವಿಮೆಗಳನ್ನು ಮಾಡಿಸಿಕೊಟ್ಟರು. ಶಿಕ್ಷಕರಾದ ಮುರಳೀಧರ ಪುನುಕುಟ್ಟಿ ಧನ್ಯವಾದ ಅರ್ಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಅಂಬೆಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

]]>
69807