Bellare – Sullia Samagra Samachara https://sullia.samagrasamachara.com Samagra Media Network Wed, 10 Sep 2025 11:57:34 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Bellare – Sullia Samagra Samachara https://sullia.samagrasamachara.com 32 32 235500897 ಬೆಳ್ಳಾರೆ: ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದಾತ ಅರೆಸ್ಟ್ https://sullia.samagrasamachara.com/2025/09/10/news-one-241/ Wed, 10 Sep 2025 11:57:34 +0000 https://sullia.samagrasamachara.com/?p=71445 ಬೆಳ್ಳಾರೆ: ಮನೆಗೆ ತೆರಳುತ್ತಿದ್ದ ವಿಧ್ಯಾರ್ಥಿನಿಗೆ ಬೈಕ್ ನಲ್ಲಿ ಬಂದು ಕಿರುಕುಳ ನೀಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ಪೆರ್ಲಂಪಾಡಿ ನಿವಾಸಿ ಉದಯ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಆಗಮಿಸಿದ ಯುವಕನೋರ್ವ ಕಿರುಕುಳ ನೀಡಿದ್ದಾನೆಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದರು.

ಕೇಸು ದಾಖಲಿಸಿಕೊಂಡ ಪೊಲೀಸರು ಘಟನೆಯ ಸ್ಥಳದ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 15 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಬಳಿಕ ಬೈಕ್‌ ನಂಬ‌ರ್ ಪತ್ತೆ ಹಚ್ಚಿದ್ದರು. ಸಿಸಿ ಟಿವಿ ಆಧಾರದ ಮೇಲೆ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಉದಯ ನನ್ನು ಬಂಧಿಸಿದ್ದಾರೆ.

]]>
71445
ನಾಳೆ(ಜೂ.10) ಬೆಳ್ಳಾರೆ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಕರೆಂಟಿಲ್ಲ https://sullia.samagrasamachara.com/2025/06/09/news-one-190/ Mon, 09 Jun 2025 12:36:33 +0000 https://sullia.samagrasamachara.com/?p=71211 ಬೆಳ್ಳಾರೆ: ವಿದ್ಯುತ್ ಲೈನ್ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ನಿರ್ವಹಣೆ ಜೂ.10 ರಂದು ಇರುವುದರಿಂದ ಬೆಳ್ಳಾರೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಬೆಳ್ಳಾರೆ ಆಸುಪಾಸಿನ ಗ್ರಾಮಗಳಾದ ಪೆರುವಾಜೆ,ಕೊಡಿಯಾಲ,ಬಾಳಿಲ, ಐವರ್ನಾಡು, ಚೊಕ್ಕಾಡಿಗಳಲ್ಲಿ ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ ಗಂಟೆ 5.30 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಜೆ.ಇ.ಪ್ರಸಾದ್ ಕತ್ಲಡ್ಕ ತಿಳಿಸಿದ್ದಾರೆ.

]]>
71211
ಬೆಳ್ಳಾರೆ: ಸಹಕಾರಿ ಸಂಘದ ಚುನಾವಣೆ ವೇಳೆ ಕೈ ಮಿಲಾಯಿಸಿಕೊಂಡ ಇತ್ತಂಡಗಳು https://sullia.samagrasamachara.com/2024/12/26/news-one-66/ Thu, 26 Dec 2024 05:00:38 +0000 https://sullia.samagrasamachara.com/?p=70615 ಬೆಳ್ಳಾರೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಬುಧವಾರ ಚುನಾವಣೆ ನಡೆದಿದ್ದು, ಈ ನಡುವೆ ಎರಡು ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆದಿದೆ.

ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಬೆಂಬಲಿತರು ತಮ್ಮ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಇರುವಂತಹ ಚೀಟಿಗಳನ್ನು ಮತ ಚಲಾಯಿಸಲು ಬರುತ್ತಿದ್ದವರಿಗೆ ನೀಡುತ್ತಿದ್ದರು.

ಈ ವೇಳೆ ಒಂದು ಪಕ್ಷದವರು ನೀಡಿದ ಚೀಟಿಯನ್ನು ಇನ್ನೊಂದು ಪಕ್ಷದವರು ಹಿಂದೆಗೆದುಕೊಂಡು ಅವರ ಪಕ್ಷದ ಅಭ್ಯರ್ಥಿಗಳ ಚಿಹ್ನೆಯ ಪಟ್ಟಿಯನ್ನು ನೀಡಿದ್ದರೆಂಬ ಕಾರಣಕ್ಕೆ ಎರಡೂ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಒಂದಿಬ್ಬರು ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆದಿದೆ. ಪ್ರಚಾರದ ಸಂದರ್ಭದಲ್ಲಿ ಮುಖಂಡರೋರ್ವರು ಹೇಳಿದ್ದರೆನ್ನಲಾದ ಮಾತು ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಹಿರಿಯರು ಜಗಳವನ್ನು ಬಿಡಿಸಿದರು. ಬಳಿಕ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಹೆಚ್ಚುವರಿ ಬಂದೋಬಸ್ತ್ ಕಲ್ಪಿಸಿದರು.

]]>
70615
ಬೆಳ್ಳಾರೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ https://sullia.samagrasamachara.com/2024/11/06/news-one-30/ Wed, 06 Nov 2024 12:11:36 +0000 https://sullia.samagrasamachara.com/?p=70371 ಬೆಳ್ಳಾರೆ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮ ಇದರ ಅಂಗವಾಗಿ ಶಾಲಾ ಮೈದಾನದ ನವೀಕರಣ ಕ್ಕೆ ಗುದ್ದಲಿ ಪೂಜೆ,ವಸಂತ ಸಂಭ್ರಮದ ಲೋಗೋ ಬಿಡುಗಡೆ ಹಾಗೂ ಮನವಿ ಪತ್ರ ಬಿಡುಗಡೆಯು ನ.6 ರಂದು ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೀವಿ ಆರ್.ರೈ, ಕೆಪಿಎಸ್ ನ ಎಸ್.ಡಿ.ಎಂ.ಸಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯರವರು ಗುದ್ದಲಿ ಪೂಜೆ ನೆರವೇರಿಸಿ, ವಸಂತ ಸಂಭ್ರಮದ ಲೋಗೊ ಹಾಗೂ ಮನವಿ ಪತ್ರ ಬಿಡುಗಡೆಗೊಳಿಸಿದರು.

ಸಂಚಾಲಕ ಎಸ್.ಎನ್.ಮನ್ಮಥ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ,ಎಸ್.ಡಿ‌ಎಂ.ಸಿ. ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಕಾಲೇಜಿನ ಪ್ರಾಂಶುಪಾಲರಾದ ಜನಾರ್ಧನ ಎನ್, ಉಪಪ್ರಾಂಶುಪಾಲೆ ಉಮಾಕುಮಾರಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ಮಾಯಿಲಪ್ಪ,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಪದ್ಮನಾಭ ಬೀಡು,ಗಂಗಾಧರ ರೈ ಪುಡ್ಕಜೆ, ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆ , ಕಟ್ಟಡ ಸಮಿತಿಯ ಹರ್ಷ ಜೋಗಿಬೆಟ್ಟು, ಐವರ್ನಾಡು ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ವಸಂತ ಉಲ್ಲಾಸ್, ಸಂಜಯ್ ನೆಟ್ಟಾರ್ ,ಇಂಜಿನಿಯರ್ ಗಳಾದ ಮಣಿಕಂಠ, ಗ್ರಾಮೀಣಾಭಿವೃದ್ಧಿ ಮತ್ತು ನೈರ್ಮಲ್ಯ ಹಾಗೂ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚೈತ್ರಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

]]>
70371
ಕೊಡಿಯಾಲ: ನಾದಿನಿಗೆ ಬೆಂಕಿ ಹಚ್ಚಿದ್ದ ಪ್ರಕರಣ| ಸುಟ್ಟ ಗಾಯದಿಂದ ಬಳಲುತ್ತಿದ್ದ ಮಹಿಳೆ ಸಾವು https://sullia.samagrasamachara.com/2024/10/25/a-case-of-arson/ Fri, 25 Oct 2024 02:54:30 +0000 https://sullia.samagrasamachara.com/?p=70296 ಬೆಳ್ಳಾರೆ: ಕೊಡಿಯಾಲ ಗ್ರಾಮದ ವೃದ್ಧರೊಬ್ಬರು ತನ್ನ ತಮ್ಮನ ಪತ್ನಿ ಮಲಗಿದ್ದಲ್ಲಿಗೆ ಹೋಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಯಭಾರತಿ (56) ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ಸಂಭವವಿದೆ.

ಅ.12ರಂದು ರಾತ್ರಿ ಮನೆಯ ಕೋಣೆಯಲ್ಲಿ ಮಲಗಿದ್ದ ಜಯಭಾರತಿ ಮೇಲೆ ಪತಿಯ ಅಣ್ಣ ಶಂಕರ ನಾಯಕ್‌ ಕಿಟಕಿ ಮೂಲಕ ಪೆಟ್ರೋಲ್‌ ಎರಚಿ ಲೈಟರ್‌ ಮೂಲಕ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಆರೋಪಿಯೂ ಗಾಯಗೊಂಡಿದ್ದ. ಮೃತ ಮಹಿಳೆಯ ಪತಿ ಜನಾರ್ದನ ನಾಯಕ್‌ ಒಂದೂ ವರೆ ವರ್ಷದ ಹಿಂದೆ ನಿಧನ ಹೊಂದಿದ್ದರು.

ಜಯಭಾರತಿ ಮತ್ತು ಅವರ ಪುತ್ರ ಆರೋಪಿಯ ಮನೆಯಲ್ಲೇ ವಾಸವಿದ್ದರು. ಮಹಿಳೆಯ ಪುತ್ರ ಇತ್ತೀಚೆಗಷ್ಟೇ ವಿದೇಶಕ್ಕೆ ಹೋದ ಕಾರಣ ಮನೆಯಲ್ಲಿ ಜಯಭಾರತಿ ಮತ್ತು ಶಂಕರ ನಾಯಕ್‌ ಮಾತ್ರ ಇದ್ದರು. ಪಾರ್ಶ್ವವಾಯುವಿಗೆ ಒಳಗಾಗಿ ಒಂದು ಕೈ ಮತ್ತು ಕಾಲಿನಲ್ಲಿ ಹಿಡಿತ ಕಳೆದುಕೊಂಡಿದ್ದ ಶಂಕರ ನಾಯಕ್‌ಗೆ ಮಹಿಳೆಯು ಊಟ, ಮದ್ದು ಕೊಡುತ್ತಿದ್ದರೂ ಆರೋಪಿಯು ವೃದ್ಧ ಜಯಭಾರತಿಯನ್ನು ಯಾವಾಗಲೂ ದ್ವೇಷಿಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

]]>
70296
ಬೆಳ್ಳಾರೆ: ಪೇಟೆಯಲ್ಲಿ ಆಡುಗಳನ್ನು ಬಿಟ್ಟವರಿಗೆ ದಂಡ ವಿಧಿಸಿದ ಪಂಚಾಯತ್ https://sullia.samagrasamachara.com/2024/10/25/bellare-5/ Fri, 25 Oct 2024 02:51:49 +0000 https://sullia.samagrasamachara.com/?p=70293 ಬೆಳ್ಳಾರೆ: ಪೇಟೆಗೆ, ಸಾರ್ವಜನಿಕ ವಾಗಿ ಸಾಕು ಪ್ರಾಣಿಗಳನ್ನು ಅಲೆದಾಡಲು, ಮೇಯಲು ಬಿಡಬಾರದು ಎಂಬ ಸೂಚನೆಗಳನ್ನು ನೀಡುತ್ತಾ ಬರಲಾಗಿದ್ದರೂ ಸೂಚನೆ ಉಲ್ಲಂಘಿಸುವ ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲು ಬೆಳ್ಳಾರೆ ಗ್ರಾಮ ಪಂಚಾಯತ್‌ ಮುಂದಾಗಿದೆ.

ಬೆಳ್ಳಾರೆ ಪೇಟೆಯಲ್ಲಿ ಆಡುಗಳನ್ನು ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮ ಪಂಚಾಯತ್‌ ಗೆ ದೂರು ಸಲ್ಲಿಕೆಯಾಗಿತ್ತು.

ಅಲ್ಲದೆ ಯಾವುದೇ ಕಾರಣಕ್ಕೂ ಸಾಕುಪ್ರಾಣಿಗಳನ್ನು ಪೇಟೆಯಲ್ಲಿ ಅಲೆದಾಡಲು ಬಿಡದಂತೆ ಗ್ರಾ.ಪಂ. ಸೂಚನೆ ನೀಡಿತ್ತು. ಅದರೂ ಸೂಚನೆ ಉಲ್ಲಂ ಸಿದವರ ವಿರುದ್ಧ ಕ್ರಮಕ್ಕೆ ಆಡಳಿತ ಮುಂದಾಗಿದೆ. ಪೇಟೆಗೆ ಬಿಟ್ಟ ಆಡುಗಳನ್ನು ಗ್ರಾ.ಪಂ. ಕಟ್ಟಿ ಹಾಕಿ ಆಡಿನ ಮಾಲಕರಿಗೆ ದಂಡ ವಿಧಿಸಲಾಗಿದೆ. ಮುಂದೆಯೂ ಸೂಚನೆ ಉಲ್ಲಂ ಸುವುದು ಕಂಡು ಬಂದಲ್ಲಿ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಳ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಗ್ರಾ.ಪಂ. ನೀಡಿದೆ.

ಪೇಟೆಯಲ್ಲಿ ಆಡುಗಳನ್ನು ಬಿಡದಂತೆ ಮೊದಲೇ ಸೂಚನೆ ನೀಡಲಾಗಿತ್ತು, ಆದರೂ ಮಾಲಕರು ಆಡನ್ನು ಪೇಟೆಗೆ ಬಿಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಅದರಂತೆ ಪೇಟೆಗೆ ಬಿಟ್ಟಿದ್ದ ಆಡನ್ನು ಕಟ್ಟಿ ಹಾಕಿ ಮಾಲಕರನ್ನು ಕರೆಸಿ ಅವರಿಗೆ ಮುಂದೆ ಆಡನ್ನು ಬಿಡದಂತೆ ಸೂಚಿಸಿ ದಂಡ ವಿಧಿಸಿ, ಆಡನ್ನು ಬಿಟ್ಟು ಕೊಡಲಾಗಿದೆ. ಹೀಗೆಯೇ ಮುಂದುವರಿದರೆ ದಂಡದ ಮೊತ್ತ ಹೆಚ್ಚುಗೊಳಿಸಲಾಗುವುದು. ಆಡಿನ ಮಾಲಕರು ಆಡನ್ನು ಪೇಟೆಗೆ ಬಿಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

]]>
70293
ಉಪ ವಲಯಾರಣ್ಯಧಿಕಾರಿ ಸಂಜೀವ ಪೂಜಾರಿ ಬಿಡುಗಡೆ https://sullia.samagrasamachara.com/2024/10/19/sanjeeva-poojary-released/ Sat, 19 Oct 2024 04:53:20 +0000 https://sullia.samagrasamachara.com/?p=70251 ಬೆಳ್ಳಾರೆ: ಹಿಂದೂ ಹೆಣ್ಣು ಮಕ್ಕಳ ಕುರಿತು ಅವಹೇಳನಕಾರಿ ಪದ ಬಳಕೆ ಆರೋಪದಲ್ಲಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಕಲಂ 79 ಬಿಎನ್‌ ಎಸ್‌ -2023 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪುತ್ತೂರು ಡಿವೈಎಸ್ಪಿ ಕಚೇರಿ ಎದುರು ಹಿಂಜಾವೇ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪೊಲೀಸರು ಸಂಜೀವ ಪೂಜಾರಿ ಅವರನ್ನು ಅವರ ಮನೆಯಿಂದಲೇ ಬಂಧಿಸಿ ಕರೆದೊಯ್ದರು.

ಪೊಲೀಸರು ವಿಚಾರಣೆ ನಡೆಸಿ ಅವರನ್ನು ನ್ಯಾಯಧೀಶರೆದುರು ಹಾಜರುಪಡಿಸಿದರು. ಸುಳ್ಯ ನ್ಯಾಯಾಧೀಶರು‌ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದರು.

ಪಂಜದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರು ವ್ಯಕ್ತಿಯೊಬ್ಬರೊಂದಿಗೆ ದೂರವಾಣಿ ಮೂಲಕ ಮಾತನಾಡುವ ವೇಳೆ ಒಂದು ಸಮುದಾಯದ ಮಹಿಳೆಯರ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಗೆಯೇ ಅವರುಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್‌ ಆಗಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ವತಿಯಿಂದ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಅಲ್ಲಿ ಮಹಿಳೆಯರನ್ನು ನಿಂದಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಪುತ್ತೂರಿನ ಡಿವೈಎಸ್ಪಿ ಕಚೇರಿ ಬಳಿ ಹಿಂದೂ ಸಂಘಟನೆಯವರು ಪ್ರತಿಭಟನೆ ನಡೆಸಿ ಸಂಜೀವ ಪೂಜಾರಿ ಬಂಧನಕ್ಕೆ ಆಗ್ರಹಿಸಿದ್ದರು.

ಅದರಂತೆ ಬೆಳ್ಳಾರೆ ಪೊಲೀಸರು ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ಕಾಣಿಯೂರಿನ ಅವರ ಮನೆಯಿಂದ ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಜೀವ ಪೂಜಾರಿ ಅವರ ಮೇಲೆ ಈ ಹಿಂದೆಯೂ ಭಜಕರ ಬಗ್ಗೆ ಅವಹೇಳಕಾರಿಯಾಗಿ ಪೋಸ್ಟ್‌ ಹಾಕಿದ ಆರೋಪ ಕೇಳಿಬಂದಿತ್ತು.

]]>
70251
ಬೆಳ್ಳಾರೆ: ಬಿಲ್ಲವ ಮಹಿಳೆಯರು ಹಾಗೂ ಭಜನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಅರಣ್ಯಾಧಿಕಾರಿ ಅರೆಸ್ಟ್ https://sullia.samagrasamachara.com/2024/10/18/sanjeeva-poojary-arrest/ Fri, 18 Oct 2024 10:46:41 +0000 https://sullia.samagrasamachara.com/?p=70249 ಬೆಳ್ಳಾರೆ: ಬಿಲ್ಲವ ಸಮಾಜದ ಹೆಣ್ಣುಮಕ್ಕಳ ಬಗ್ಗೆ ಮತ್ತು ಭಜನೆ ಮಾಡುವ ಹೆಣ್ಣು ಮಕ್ಕಳ ಬಗ್ಗೆ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಬಗ್ಗೆ ಕೀಳುಮಟ್ಟದ ಪದ ಬಳಸಿ ಅವಮಾನ ಮಾಡಿರುವ ಆರೋಪದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಭಜನೆ ಮಾಡುವ ಮೂಲಕ ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ಹಿಂದೂ ಸಂಘಟನೆಯ ಮುಖಂಡರು ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿ ಸಂಜೀವ ಪೂಜಾರಿಯವರನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಇದೀಗ ಬೆಳ್ಳಾರೆ ಪೊಲೀಸರು ಆರೋಪಿ ಸಂಜೀವ ಪೂಜಾರಿಯವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

https://sullia.samagrasamachara.com/2024/10/18/panja-audio-viral-news/

]]>
70249
ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ| ಆರೋಪಿಯನ್ನು ಬಂಧಿಸಿದ ಪೊಲೀಸರು https://sullia.samagrasamachara.com/2024/10/17/crime-2/ Thu, 17 Oct 2024 01:48:41 +0000 https://sullia.samagrasamachara.com/?p=70244 ಬೆಳ್ಳಾರೆ: ಕೊಡಿಯಾಲ ಗ್ರಾಮದ ಕಲ್ಲರ್ಪೆ ಎಂಬಲ್ಲಿ ಸ್ವಂತ ಅತ್ತಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಶಂಕರ ನಾಯಕ್‍ ಎಂಬಾತನನ್ನು ಬೆಳ್ಳಾರೆ ಪೊಲೀಸರು ಆಸ್ಪತ್ರೆಯಿಂದ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಬೆಂಕಿ ಹಚ್ಚಿದ್ದ ವೇಳೆ ಬೆಂಕಿ ವ್ಯಾಪಿಸಿ ಶಂಕರ ನಾಯಕ್ ನಿಗೂ ಗಾಯವಾಗಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬುಧವಾರ ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಈ ವೇಳೆ ಆತನನ್ನು ಕಸ್ಟಡಿಗೆ ಪಡೆದ ಬೆಳ್ಳಾರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಜಯಭಾರತಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

]]>
70244
ಕಲ್ಮಡ್ಕ: ಸ್ವಿಪ್ಟ್ ಕಾರಿನಲ್ಲಿ ಅಕ್ರಮ ಗೋಸಾಗಾಟ| ಬೆಳ್ಳಾರೆ ಠಾಣೆ ಪೊಲೀಸರಿಂದ ದಾಳಿ https://sullia.samagrasamachara.com/2024/10/16/kalmadka/ Wed, 16 Oct 2024 07:52:32 +0000 https://sullia.samagrasamachara.com/?p=70235 ನಿಂತಿಕಲ್ಲು: ಕಾರಿನಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿಯಂತೆ ಬೆಳ್ಳಾರೆ ಠಾಣಾ ಎಸೈ ಈರಯ್ಯ ಡಿ.ಎನ್‌. ಅವರ ನೇತೃತ್ವದಲ್ಲಿ ದಾಳಿ ನಡೆಸಲಾದ ಘಟನೆ ಕಲ್ಮಡ್ಕ ಎಂಬಲ್ಲಿ ಸೋಮವಾರ(ಅ.14) ರಾತ್ರಿ ನಡೆದಿದೆ.

ಪೊಲೀಸರು ದಾಳಿ ನಡೆಸುವ ವೇಳೆ ಸ್ವಿಪ್ಟ್ ಕಾರಿನಲ್ಲಿ ಹಿಂಸಾತ್ಮಕವಾಗಿ ಮೂರು ದನಗಳನ್ನು ತುಂಬಿರುವುದು ಕಂಡುಬಂದಿದೆ.

ಕಾರಿನ ಸಮೀಪದಲ್ಲೇ ತೆರೆದ ಕೊಟ್ಟಿಗೆಯಲ್ಲಿ 2 ಜಾನುವಾರುಗಳು ಕಂಡುಬಂದಿದ್ದು ಅದನ್ನು ಮೂವರು ವ್ಯಕ್ತಿಗಳು ಬಿಚ್ಚಲು ಯತ್ನಿಸುತ್ತಿದ್ದು ಪೊಲೀಸರನ್ನು ಕಂಡು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಅಕ್ರಮ ಸಾಗಾಟಕ್ಕೆ ಯತ್ನಿಸಲಾಗಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

]]>
70235