Balpa – Sullia Samagra Samachara https://sullia.samagrasamachara.com Samagra Media Network Tue, 22 Oct 2024 16:42:50 +0000 en-US hourly 1 https://wordpress.org/?v=6.9.4 https://sullia.samagrasamachara.com/wp-content/uploads/2024/07/cropped-logo-samagra-32x32.jpg Balpa – Sullia Samagra Samachara https://sullia.samagrasamachara.com 32 32 235500897 ಬಳ್ಪ: ಐತಿಹಾಸಿಕ ಬೋಗಾಯನಕೆರೆಯಲ್ಲಿ ಅ. 26 ರಂದು ಗಂಗಾರತಿ, ದೋಣಿ ವಿಹಾರ https://sullia.samagrasamachara.com/2024/10/22/balpa-3/ Tue, 22 Oct 2024 16:41:54 +0000 https://sullia.samagrasamachara.com/?p=70276 ಬಳ್ಪ: ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ ಇದರ ಆಶ್ರಯದಲ್ಲಿ ಐತಿಹಾಸಿಕ ಬೋಗಾಯನಕೆರೆಯಲ್ಲಿ ಗಂಗಾರತಿ ಹಾಗೂ ದೋಣಿವಿಹಾರ ಕಾರ್ಯಕ್ರಮ ಅ. 26ರ ಶನಿವಾರದಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಗ್ರಾಮ ವಿಕಾಸ ಸಂಯೋಜಕ ಜಿತೇಂದ್ರ ಪ್ರಥಾಪ್ ನಗರ ಮುಖ್ಯ ಅತಿಥಿಯಾಗಿ ಭಾಗಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ವಿಶೇಷವಾಗಿ ಸಂಜೆ ಗಂಟೆ 3ರಿಂದ ದೋಣಿ ವಿಹಾರ (ಬೋಟಿಂಗ್) ಪ್ರದರ್ಶನವು ನಡೆಯಲಿದೆ. ಸಂಜೆ ಗಂಟೆ 6:30ಕ್ಕೆ ಗಂಗಾ ಆರತಿ., ರಾತ್ರಿ ಗಂಟೆ 7:00ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 8:00ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿ ಮನೆಯವರು ತಮ್ಮ ಮನೆಯಿಂದ ಬರುವಾಗ ಒಂದು ಕಲಶ, ನೀರು, ಹೂ, ದೀಪ, ಬತ್ತಿ, ಎಣ್ಣೆ, ಊದುಕಡ್ಡಿ ಸಹಿತ ಬರಬೇಕು

]]>
70276
ಬಳ್ಪ: ಮನೆಗೆ ನುಗ್ಗಿ‌ ನಗನಗದು ದರೋಡೆ https://sullia.samagrasamachara.com/2024/10/21/balpa-2/ Mon, 21 Oct 2024 15:40:56 +0000 https://sullia.samagrasamachara.com/?p=70267 ಬಳ್ಪ: ಮನೆಯೊಂದಕ್ಕೆ ನುಗ್ಗಿದ ಕಳ್ಳರು 12 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ಹು ದರೋಡೆಗೈದ ಘಟನೆ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಸುಮಾರು ರೂ. 12 ಲಕ್ಷ ಮತ್ತು ಅಂದಾಜು 28 ಪವನ್ ಚಿನ್ನ ಕಳ್ಳತನವಾಗಿರುವ ಘಟನೆ ಅ. 20ರಂದು ಬೆಳಕಿಗೆ ಬಂದಿದೆ. ಅಕ್ಕೇಣಿ ಸುಂದರ ಗೌಡರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಅಂದಾಜು 6 ಗಂಟೆ ಸುಮಾರಿಗೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪುತ್ತೂರು ಸಮೀಪದ ಪೆರಿಗೇರಿಗೆ ಹೋಗಿದ್ದರು.

ಅ.20ರಂದು ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ ಮುರಿದಿರುವುದನ್ನು ಗಮನಿಸಿ ಮನೆಯೊಳಗೆ ನೋಡಿದಾಗ ರೂ. 12 ಲಕ್ಷ ಮತ್ತು 28 ಪವನ್ ಚಿನ್ನ ಕಾಣೆಯಾಗಿರುವುದು ತಿಳಿಯಿತು. ಕರಿಮಣಿ ಸರವೊಂದರ ತಾಳಿಯನ್ನು ಬಿಚ್ಚಿಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

]]>
70267
ಬಳ್ಪ: ನಾಪತ್ತೆಯಾಗಿದ್ದ ಯುವಕನ ಮೃತದೇಹ ನದಿಯಲ್ಲಿ ಪತ್ತೆ https://sullia.samagrasamachara.com/2024/08/07/balpa/ Wed, 07 Aug 2024 11:00:38 +0000 https://sullia.samagrasamachara.com/?p=69538

ಬಳ್ಪ: ಆ.೪.ರಂದು ಮನೆಯಿಂದ ನಾಪತ್ತೆಯಾಗಿದ್ದ ಬಳ್ಪದ ಯುವಕನ ಮೃತ ದೇಹ ಆ.೭ರಂದು ಹೊಳಯಲ್ಲಿ ಪತ್ತೆಯಾಗಿದೆ.

ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (೩೩ವ)ಎಂಬ ಯುವಕ ನಾಪತ್ತೆಯಾಗಿದ್ದು, ಮೂರು ದಿನದ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಪಂಜ ಹೊಳೆಯ ಪಲ್ಲೋಡಿ ಅಡ್ಕದಲ್ಲಿ ಮೃತ ದೇಹವನ್ನು ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಳ್ಯದ ಮುಳುಗು ತಜ್ಞರ ತಂಡ ಸಂಪಾಜೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಪ್ರಗತಿ ಅಂಬ್ಯುಲೆನ್ಸ್ ನ ಅಬ್ದುಲ್ ರಜಾಕ್ (ಅಚ್ಚು), ಚಿದಾನಂದ ಗೂನಡ್ಕ , ಶ್ರೀ ಮುತ್ತಪ್ಪನ್ ಅಂಬ್ಯುಲೆನ್ಸ್ ನ ಅಭಿ ಸುಳ್ಯ ಪಾಲ್ಗೊಂಡಿದ್ದರು. ಊರವರು , ಸಂಬAಧಿಕರು ,ನಿಂತರ ಹುಡುಕಾಟ ನಡೆಸಿ, ಸಹಕರಿಸಿದ್ದಾರೆ .ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

]]>
69538