Balila – Sullia Samagra Samachara https://sullia.samagrasamachara.com Samagra Media Network Wed, 18 Jun 2025 08:24:22 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Balila – Sullia Samagra Samachara https://sullia.samagrasamachara.com 32 32 235500897 ಪಿಕಪ್ ಗಳ‌ ನಡುವೆ ಅಪಘಾತ| 600 ಲೀ ಹಾಲು ರಸ್ತೆ ಪಾಲು https://sullia.samagrasamachara.com/2025/06/18/pic-up-mishup-at-balila/ Wed, 18 Jun 2025 08:24:22 +0000 https://sullia.samagrasamachara.com/?p=71225 ಬೆಳ್ಳಾರೆ: ಹಾಲು ಸಾಗಿಸುತ್ತಿದ್ದ ಪಿಕಪ್ ಗೆ ಮತ್ತೊಂದು ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಹಾಲು ಸಾಗಿಸುತ್ತಿದ್ದ ಪಿಕಪ್ ಪಲ್ಟಿಯಾಗಿ ಅದರಲ್ಲಿದ್ದ ಹಾಲು ರಸ್ತೆ ಪಾಲಾದ ಘಟನೆ ಬೆಳ್ಳಾರೆ ಸಮೀಪದ ಬಾಳಿಲದಲ್ಲಿ ಮಂಗಳವಾರ ಸಂಭವಿಸಿದೆ.

4 ಹಾಲಿನ ಸೊಸೈಟಿಗಳಲ್ಲಿ ಸಂಗ್ರಹವಾದ ಸುಮಾರು 600 ಲೀಟರ್ ಹಾಲು ತುಂಬಿದ್ದ 20 ಕ್ಯಾನ್‌ಗಳನ್ನು ಹೇರಿಕೊಂಡು ಬೆಳ್ಳಾರೆಯತ್ತ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಹಾಲಿನ ಪಿಕಪ್ ಪಲ್ಟಿಯಾಗಿದ್ದು, ಹಾಲಿನ ಕ್ಯಾನ್‌ಗಳು ಚೆಲ್ಲಾಪಿಲ್ಲಿ ರಸ್ತೆ ಮೇಲೆ ಬಿದ್ದಿದೆ. ಸುಮಾರು 600 ಲೀಟರ್ ಹಾಲು ರಸ್ತೆಯ ಪಾಲಾಗಿದೆ. ಚಾಲಕ ಸಯ್ಯದ್ ಅಬ್ದುಲ್ ಚೆನ್ನಾವರ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

]]>
71225