Balagodu – Sullia Samagra Samachara https://sullia.samagrasamachara.com Samagra Media Network Wed, 12 Mar 2025 07:17:13 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Balagodu – Sullia Samagra Samachara https://sullia.samagrasamachara.com 32 32 235500897 ಬಾಳುಗೋಡು: ತೋಟಕ್ಕೆ ಆನೆ ದಾಳಿ ಕೃಷಿ ನಾಶ https://sullia.samagrasamachara.com/2025/03/12/balugodu-wild-elephant-attacked/ Wed, 12 Mar 2025 07:17:13 +0000 https://sullia.samagrasamachara.com/?p=70961 ಕೊಲ್ಲಮೊಗ್ರು: ಇಲ್ಲಿನ ಸಮೀಪದ ಬಾಳುಗೋಡು ಗ್ರಾಮ ಕಟ್ಟೆಮನೆ ಶೈಲೇಶ್ ಎಂಬವರ ತೋಟಕ್ಕೆ ಮಾ.11ರ ರಾತ್ರಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ತೆಂಗು,ಅಡಿಕೆ,ಬಾಳೆಗಿಡಗಳನ್ನು ಹಾನಿ ಮಾಡಿದ ಘಟನೆ ನಡೆದಿದೆ.

ಆನೆಯು ಬೆಂಡೋಡಿ, ಕಾಂತುಕುಮೇರಿ, ದೇವರುಳಿಯ, ಕಟ್ಟೆಮನೆ ಬಸವನಗುಡಿ ಈ ಭಾಗಗಳ ಹಲವು ಕೃಷಿ ತೋಟಗಳಲ್ಲಿ ಹಾನಿ ಮಾಡಿದ್ದು, ಹಲವು ದಿನಗಳಿಂದ ಇದೇ ಭಾಗದಲ್ಲಿ ಬೀಡುಬಿಟ್ಟಿದ್ದು ರೈತರು ಹಾಗು ರಸ್ತೆಯಲ್ಲಿ ಸಂಚಾರಿಸುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

]]>
70961
ಬಾಳುಗೋಡು: ಕಂಡೊಂಡೊಂಜಿ ದಿನ ಗೊಬ್ಬು ಉದ್ಘಾಟನೆ https://sullia.samagrasamachara.com/2024/09/16/balugodu/ Mon, 16 Sep 2024 15:55:56 +0000 https://sullia.samagrasamachara.com/?p=69957 ಬಾಳುಗೋಡು, ಸೆ.16: ಬಾಳುಗೋಡಿನ ವಿಶ್ವ ಯುವಕ ಮಂಡಲದ ಆಶ್ರಯದಲ್ಲಿ “ಕಂಡೊಡೊಂಜಿ ದಿನ” ಗೊಬ್ಬು ಕಾರ್ಯಕ್ರಮ ಉದ್ಘಾಟನೆ ಇಂದು ಬಾಳಗೋಡಿನ ಕಿರಿಬಾಗ ಎಂಬಲ್ಲಿ ಉದ್ಘಾಟನೆಗೊಂಡಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಾಡಲದ ಅಧ್ಯಕ್ಷ ರಾಜೇಶ ಕಿರಿಭಾಗ ವಹಿಸಿದ್ದರು. ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕ ದಿನೇಶ್ ಹಾಲೆಮಜಲು ದೀಪ ಬೆಳಗಿಸಿ ಶುಭ ಹಾರೈಸಿದರು.

ಕ್ರೀಡಾಕೂಟವನ್ನು ಸ್ಥಳದಾನಿ ಯೋಗೀಶ್ ಕಿರಿಬಾಗ ಅವರ ಗದ್ದೆಗೆ ಹಾಲು ಸುರಿಯುವ ಮುಖಾಂತರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿಹರ ಪಲ್ಲಥಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಕುಮಾರ ಆಂಗಣ ಉಪಸಿತರಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳು ಹಿರಿಯರು ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ಯುವಕಮಂಡಲ ಸದಸ್ಯರು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಯುವಕ ಮಂಡಲ ಕಾರ್ಯದರ್ಶಿ ಅಜೆಯ ಪೊಯ್ಯೆಮಜಲು ಕಾರ್ಯಕ್ರಮ ನಿರೂಪಿಸಿದರು.

]]>
69957