Aranthodu – Sullia Samagra Samachara https://sullia.samagrasamachara.com Samagra Media Network Wed, 08 Jan 2025 09:39:06 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Aranthodu – Sullia Samagra Samachara https://sullia.samagrasamachara.com 32 32 235500897 ಅರಂತೋಡು: ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ ಹಾಗೂ ಉಪಾಧ್ಯಕ್ಷರಾಗಿ ಡಾ.ಲಕ್ಷ್ಮೀಶ ಕಲ್ಲುಮುಟ್ಲು ಆಯ್ಕೆ https://sullia.samagrasamachara.com/2025/01/08/news-one-77/ Wed, 08 Jan 2025 09:38:27 +0000 https://sullia.samagrasamachara.com/?p=70661 ಸಮಗ್ರ ನ್ಯೂಸ್: ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮೊದಲ ಎರಡೂವರೆ ವರ್ಷಗಳ ಅವದಿಯ ಅಧ್ಯಕರಾಗಿ ಸಂತೋಷ್ ಕುತ್ತಮೊಟ್ಟೆ ಹಾಗೂ ಉಪಾಧ್ಯಕ್ಷರಾಗಿ ಜನಸ್ನೇಹಿ ವೈದ್ಯ ಡಾ.ಲಕ್ಷ್ಮೀ ಶ ಕಲ್ಲುಮುಟ್ಲುರವರು ಆಯ್ಕೆಯಾಗಿದ್ದಾರೆ.

ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪಕ್ಷ ಮತ್ತು ಪರಿವಾರ ನಾಯಕರ ಸೂಚನೆಯಂತೆ ಮುಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಸಲು ತೀರ್ಮಾನಿಸಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಪಕ್ಷ ಪರಿವಾರ ಮೂಲಗಳಿಂದ ತಿಳಿದು ಬಂದಿದೆ.ಎಲ್ಲಾ ಚುನಾಯಿತ ನಿರ್ದೇಶಕರು ಮತ್ತು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಮುಂದಿನ ಎರಡೂವರೆ ವರ್ಷಗಳ ಎರಡನೆ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆಯವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೆಶಕರಾದ ದಯಾನಂದ ಕುರುಂಜಿ, ಚಂದ್ರಶೇಖರ ಚೋಡಿಪಣೆ, ಶಿವಾನಂದ ಕುಕ್ಕುಂಬಳ, ಉದಯಕುಮಾರ್ ಉಳುವಾರು ಪ್ರಶಾಂತ್ ಕಾಪಿಲ, ಶ್ರೀಲತಾ ದೇರಾಜೆ, ಲೋಚನ ಕೊಳಲುಮೂಲೆ, ದಿನೇಶ್ ಅರಮನೆಗಯ, ಪದ್ಮಯ್ಯ ಅಡ್ಯಡ್ಕ ಚಂದ್ರಶೇಖರ ತೊಡಿಕಾನ ಉಪಸ್ಥಿತರಿದ್ದರು.

]]>
70661
ಅರಂತೋಡು ಸಹಕಾರಿ ಸಂಘ ಚುನಾವಣೆ|ಯುವ ವೈದ್ಯ ಡಾ.ಲಕ್ಷ್ಮೀಶ ಭರ್ಜರಿ ಗೆಲುವು https://sullia.samagrasamachara.com/2024/12/28/arantodu-cooperative-society-election/ Sat, 28 Dec 2024 15:45:04 +0000 https://sullia.samagrasamachara.com/?p=70617 ಸುಳ್ಯ:ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಪೈಕಿ ಯುವ ವೈದ್ಯ ಡಾ. ಲಕ್ಷ್ಮೀಶ ಕಲ್ಲುಮುಟ್ಲು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹಿಂದುಳಿದ ಬಿ ವರ್ಗದಿಂದ ಸ್ಪರ್ದಿಸಿದ್ದ ಲಕ್ಷ್ಮೀಶ ಅವರು ಒಟ್ಟು ಚಲಾಯಿತ 898 ಮತಗಳ ಪೈಕಿ ಅತ್ಯದಿಕ 702 ಮತಗಳ ಪಡೆದು ಗೆಲುವು ಸಾಧಿಸಿದರೆ
ಪ್ರತಿಸ್ಪರ್ಧಿ 164 ಮತಗಳ ಪಡೆದು ಪರಾಭವಗೊಂಡಿದ್ದಾರೆ. 32 ಮತಗಳು ಅಸಿಂಧುಗೊಂಡಿವೆ.

]]>
70617
ಅರಂತೋಡು ಪ್ರಾ.ಕೃ.ಪ ಸಹಕಾರಿ ಸಂಘ ಚುನಾವಣೆ| ಸಹಕಾರಿ ಭಾರತಿಯಿಂದ ಯುವವೈದ್ಯಗೆ ಮಣೆ https://sullia.samagrasamachara.com/2024/12/16/aranthodu-pacs-election/ Mon, 16 Dec 2024 17:36:09 +0000 https://sullia.samagrasamachara.com/?p=70576 ಅರಂತೋಡು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಈ ಬಾರಿ ಜನಸ್ನೇಹಿ ಯುವ ವೈದ್ಯ
ಡಾ. ಲಕ್ಷ್ಮೀ ಶ ಕಲ್ಲುಮುಟ್ಲು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಉಳಿದಂತೆ ಮಾಜಿ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ , ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಪ್ರಮುಖರ ಸಹಿತ ಚಂದ್ರಶೇಖರ ಚೋಡಿಪಣೆ , ಯಶೋಧರ ಪಿಂಗಾರತೋಟ , ಲೋಚನಾ ಕೊಳಲುಮೂಲೆ , ಪದ್ಮಯ್ಯ ಅಡ್ಯಡ್ಕ , ಚಂದ್ರಶೇಖರ ಆಚಾರ್ಯ ಎ . ಎಸ್ . , ಉದಯಕುಮಾರ ಉಳುವಾರು , ದಿನೇಶ , ಅಯ್ಯಣ್ಣ ಗೌಡ ಉಳುವಾರು , ಶ್ರೀಲತಾ ದೇರಾಜೆ ಅವರುಗಳನ್ನು ಕಣಕ್ಕಿಳಿಸಲು ಪಕ್ಷ ಮತ್ತು ಪರಿವಾರ ಪ್ರಮುಖರು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಗುಂಪುಗಾರಿಕೆ, ಅಧಿಕಾರಕ್ಕೆ ಪೈಪೋಟಿ, ಬಂಡಾಯ ಮತ್ತಿತರ ಕಾರಣಗಳಿಂದ ಬೇಸತ್ತ ಪಕ್ಷ ಮತ್ತು ಪರಿವಾರ ನಾಯಕರು ಎಲ್ಲರನ್ನು ಸರಿದೂಗಿಸಿ ಮುನ್ನಡೆಸಬಲ್ಲ ಯುವ ವರ್ಚಸ್ಸಿನ ಹೊಸ ಮುಖಕ್ಕೆ ಮಣೆಹಾಕಿ ಅಂತರಿಕ ಸಮಸ್ಯೆ ಪರಿಹಾರಕ್ಕೆ ಮದ್ದರೆಯಲು ಈ ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಣೆ ಕೇಳಿಬರುತಿದ್ದು, ವಿವಿಧ ಹೊಸ ಮುಖಗಳೊಂದಿಗೆ ಪರಿವರ್ತನೆಯತ್ತ ಹೆಜ್ಜೆಯಿಟ್ಟಿದೆ.

]]>
70576
ರಾಯಲ್ ಫ್ರೆಂಡ್ಸ್ ಗೂನಡ್ಕ ಮಹಾಸಭೆ| ಸಾಜಿದ್ ಐ.ಜಿ. ಅಧ್ಯಕ್ಷರಾಗಿ ಆಯ್ಕೆ https://sullia.samagrasamachara.com/2024/12/07/royal-friends-goonadka-mahasabha/ Sat, 07 Dec 2024 10:08:21 +0000 https://sullia.samagrasamachara.com/?p=70556 ಗೂನಡ್ಕ ಡಿ.4:ರಾಯಲ್ ಫ್ರೆಂಡ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ಇದರ ವಾರ್ಷಿಕ ಮಹಾ ಸಭೆಯು ಗೂನಡ್ಕದ ಕಛೇರಿಯಲ್ಲಿ ಅಧ್ಯಕ್ಷ ಸಾಜಿದ್ ಐ.ಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 2024-25ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಾಜಿದ್ ಐ.ಜಿ. ಪ್ರಧಾನ ಕಾರ್ಯದರ್ಶಿಯಾಗಿ ಜಾಬಿ ಎಂ.ಬಿ. ಕೋಶಾಧಿಕಾರಿಯಾಗಿ ಅಜರುದ್ದೀನ್ ಚೇರೂರು
ಉಪಾಧ್ಯಕ್ಷರಾಗಿ ಅಜೀಜ್ ಟಿ.ಬಿ. ಕಾರ್ಯದರ್ಶಿ ಉಬೈಸ್ ಟಿ.ಕೆ. ನಶ್ಫಾನ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎಲ್ಲಾ ಸದಸ್ಯರ ಅಭಿಪ್ರಾಯದ ಪ್ರಕಾರ ನಿವೃತ್ತ ಯೋಧ ಮುಝಾಫರ್ ರವರನ್ನು ಗೌರವಾಧ್ಯಕ್ಷರಾಗಿ, ಅಡ್ವಕೇಟ್ ರಶೀದ್ ಅವರನ್ನು ಕಾನೂನು ಸಲಹೆಗಾರರಾಗಿ ನೇಮಿಸಲಾಯಿತು.
ಸಮಿತಿ ಸದಸ್ಯರಾಗಿ
ಹರ್ಶಿತ್ ಮುನ್ನ, ಸಿಹಾಬ್
ಇಕ್ಬಾಲ್ ಎಂ., ಸಲೀಂ ಸುಳ್ಯ
ಖಾದರ್ ಮೊಟ್ಟೆಂಗಾರ್
ನಪ್ವಾನ್, ಸಿದ್ದೀಕ್ ದೊಡ್ಡಡ್ಕ
ಸಲಹಾ ಸಮಿತಿ ಸದಸ್ಯರಾಗಿ
ನವೀನ್ ಕುಮಾರ್ ಜಿ.ಜಿ.,
ಅಸ್ರಫ್ ಟರ್ಲ್ಲಿ, ಗ್ರಾಮ ಪಂಚಾಯತ್ ಸದಸ್ಯ ಅಬುಸಾಲಿ ಅವರನ್ನು ಆಯ್ಕೆ ಮಾಡಲಾಯಿತು.

]]>
70556
ಗೂನಡ್ಕ: ಕಂಟೈನರ್ – ಸ್ಕೂಟಿ ನಡುವೆ ಡಿಕ್ಕಿ; ಸವಾರ ಗಂಭೀರ https://sullia.samagrasamachara.com/2024/09/24/collision-between-container-scooty/ Tue, 24 Sep 2024 03:09:01 +0000 https://sullia.samagrasamachara.com/?p=70026 ಅರಂತೋಡು: ಕಂಟೈನರ್ ಲಾರಿ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೆ. 24 ರಂದು ಮಾಣಿ – ಮೈಸೂರು ರಾ.ಹೆದ್ದಾರಿಯ ಗೂನಡ್ಕದಲ್ಲಿ ಸಂಭವಿಸಿದೆ.

ಗಾಯಾಳುವನ್ನು ಕಾಸರಗೋಡು ನಿವಾಸಿ ಮಹಮ್ಮದ್ ಜಮೀರ್ ಎಂದು ಗುರುತಿಸಲಾಗಿದೆ. ಇವರು ಎಮ್ಮೆಮಾಡಿನಿಂದ ಕಾಸರಗೋಡಿಗೆ ಹಿಂದಿರುಗಿ ತಮ್ಮ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಗೂನಡ್ಕದ ಶಿರಾಡಿ ದೈವಸ್ಥಾನದ ಸಮೀಪ ಮುಖ್ಯರಸ್ತೆಯಲ್ಲಿ ಬೈಕಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಬೈಕ್ ಸವಾರ ಜಮೀರ್ ಅವರ ಮುಖ, ಕೈ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳೀಯರು ಸೇರಿ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣಾ ಪೊಲೀಸರು ತೆರಳಿ ಪರಿಶೀಲಿಸಿರುವುದಾಗಿ ತಿಳಿದುಬಂದಿದೆ.

]]>
70026
ಅರಂತೋಡು: ಕೃಷಿಯ ಸಮಗ್ರ ಬೆಳೆ ನಿರ್ವಹಣೆಯ ಕುರಿತು ಮಾಹಿತಿ ಮಂಥನ| ಉಚಿತ ನೇತ್ರ ತಪಾಸಣಾ ಶಿಬಿರ https://sullia.samagrasamachara.com/2024/08/30/information-churn/ Fri, 30 Aug 2024 06:51:52 +0000 https://sullia.samagrasamachara.com/?p=69789 ಅರಂತೋಡು: ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯತ್ ಅರಂತೋಡು, ಪ್ರಸಾದ್ ನೇತ್ರಾಲಯ ಸೂಪ‌ರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಕೃಷಿಯ ಸಮಗ್ರ ಬೆಳೆ ನಿರ್ವಹಣೆಯ ಕುರಿತು ಮಾಹಿತಿ ಮಂಥನ ಕಾರ್ಯಕ್ರಮ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ಆ. 29ರಂದು ಅರಂತೋಡು ಸಹಕಾರಿ ಸಂಘದ “ಸಿರಿ ಸೌಧ ” ಸಭಾಂಗಣದಲ್ಲಿ ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆಯವರು ನೆರವೇರಿಸಿದರು.

ಅರಂತೋಡು ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಪಂಚಾಯತ್ ಉಪಾಧ್ಯಕ್ಷ ಭವಾನಿ ಚಿಟ್ಟನ್ನೂರು, ಇಂದೋರ್ ನ ಶ್ರೀ ಸಿದ್ದಿ ಎಗ್ರಿ ಕಂ ಪ್ರೈವೇಟ್ ಲಿಮಿಟೆಡ್ ನ ಪೆರುವೋಡಿ ನಾರಾಯಣ ಭಟ್, ಇನ್ನ‌ರ್ ವೀಲ್‌ ಕ್ಲಬ್ ಅಧ್ಯಕ್ಷ ಚಿಂತನಾ ಸುಬ್ರಹ್ಮಣ್ಯ, ಪ್ರಗತಿಪರ ಕೃಷಿಕರಾದ ಶ್ರೀನಿವಾಸ ನಿಡಿಂಜಿ, ಜೇಟ್ಲಿ ಶ್ರೀಧರ ಭಟ್, ರೋಟರಿ ಕ್ಲಬ್ ಅಧ್ಯಕ್ಷ ಯೋಗಿತಾ ಗೋಪಿನಾಥ್ ಮತ್ತು ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ. ಅಹನಾ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳು, ಪಂಚಾಯತ್ ಸದಸ್ಯರುಗಳು, ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಸದಸ್ಯರು ಮತ್ತು ಪದಾಧಿಕಾರಿಗಳು, ಅರಂತೋಡು -ತೊಡಿಕಾನ ಅವಳಿ ಗ್ರಾಮಗಳ ಗ್ರಾಮಸ್ಥರಲ್ಲದೆ ನೆರೆಯ ಗ್ರಾಮಗಳ ಸಾರ್ವಜನಿಕರು ಭಾಗಿಯಾದರು.

ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ನಯನಕುಮಾರ್ ಕಿರ್ಲಾಯ ವಂದಿಸಿದರು.
ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್.ಆ‌ರ್. ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ನಂತರ ಸಹಕಾರಿ ಸಂಘದ ಸಭಾಂಗಣದಲ್ಲಿ ಕೃಷಿಯ ಮಾಹಿತಿ ಕಾರ್ಯಕ್ರಮ ಮತ್ತು ಪಂಚಾಯತ್ ಸಭಾಂಗಣದಲ್ಲಿ ನೇತ್ರ ತಪಾಸಣಾ ಶಿಬಿರ ನಡೆಯಿತು.

]]>
69789