Aletty – Sullia Samagra Samachara https://sullia.samagrasamachara.com Samagra Media Network Fri, 08 Nov 2024 03:10:57 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Aletty – Sullia Samagra Samachara https://sullia.samagrasamachara.com 32 32 235500897 ಆಲೆಟ್ಟಿ: ಎಲ್ ಎಲ್ ಬಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು https://sullia.samagrasamachara.com/2024/11/08/llb-student-committed-to-suicide/ Fri, 08 Nov 2024 03:10:57 +0000 https://sullia.samagrasamachara.com/?p=70379 ಆಲೆಟ್ಟಿ: ಗ್ರಾಮದ ಕಲ್ಲೆಂಬಿ ಎಂಬಲ್ಲಿ ವಿದ್ಯಾರ್ಥಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ(ನ.7) ಸಂಜೆ ವರದಿಯಾಗಿದೆ. ಮೃತನನ್ನು ಕಲ್ಲೆಂಬಿ ಸ್ಥಾನದ ಮನೆಯ ರಾಘವ ಬೆಳ್ಚಪ್ಪಾಡ ಎಂಬವರ ಪುತ್ರ ಮಿಥುನ್ ರಾಜ್( 26) ಎಂದು ಗುರುತಿಸಲಾಗಿದೆ.

ಈತ ಮನೆಯಲ್ಲಿ ಯಾರೂ ಇಲ್ಲದೆ ಸಂದರ್ಭದಲ್ಲಿ ಅಡುಗೆ ಕೋಣೆಯ ಪಕ್ಕಾಸಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮನೆಯವರು ಸುಳ್ಯಕ್ಕೆ ಮದುವೆಗೆಂದು ಬಂದಿರುವ ಸಂದರ್ಭದಲ್ಲಿ ಕೃತ್ಯವೆಸಗಿಕೊಂಡಿದ್ದು ಮನೆಯವರು ಹಿಂತಿರುಗಿ ಬಂದು ನೋಡಿದ ಮೇಲೆ ವಿಷಯ ತಿಳಿಯಿತು.

ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಮಹಜರು ನಡೆಸಿ ಸರಕಾರಿ ಆಸ್ಪತ್ರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕರೆ ತರಲಾಗಿದೆ.
ಮೃತ ಪಟ್ಟ ಯುವಕ ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದು ತಾಯಿ ಪ್ರಸನ್ನ ಕುಮಾರಿ, ಸಹೋದರ ಪ್ರಜೀತ್, ಸಹೋದರಿ ಮಾಯಶ್ರೀ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

]]>
70379
ಆಲೆಟ್ಟಿ: ಕಾಡಾನೆಗಳ‌ ಹಾವಳಿಗೆ ಕೃಷಿ ನಾಶ https://sullia.samagrasamachara.com/2024/09/11/news-1-13/ Wed, 11 Sep 2024 17:20:24 +0000 https://sullia.samagrasamachara.com/?p=69916 ಆಲೆಟ್ಟಿ: ಇಲ್ಲಿನ ತುದಿಯಡ್ಕ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಭಾಗದ ಕೃಷಿಕರ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ.

ಗ್ರಾಮದ ಕೃಪಾಶಂಕರ ತುದಿಯಡ್ಕ, ಕುಮಾರಸ್ವಾಮಿ ಬಿಸಿಲುಮಲೆ, ಕಳಗಿ ರಾಮಯ್ಯ ಹಾಗೂ ಲೋಲಜಾಕ್ಷರವರ ತೋಟಕ್ಕೆ ಮಂಗಳವಾರ ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಧಾಳಿ ಮಾಡಿದ್ದು ಸಿಕ್ಕ ವಸ್ತುಗಳನ್ನು ಪುಡಿಮಾಡಿರುವುದಲ್ಲದೆ ಅಡಿಕೆ,ತೆಂಗು,ಬಾಳೆಗಿಡಗಳನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ‌ ಇಲಾಖೆ ಅಧಿಕಾರಿಗಳು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ.

]]>
69916
ಸ.ಹಿ.ಪ್ರಾ ಶಾಲೆ ಕೋಲ್ಚಾರು ‘ಅತ್ಯುತ್ತಮ ಕನ್ನಡ ಶಾಲೆ’ ಪ್ರಶಸ್ತಿಗೆ ಆಯ್ಕೆ https://sullia.samagrasamachara.com/2024/09/04/kolchar-school-news/ Wed, 04 Sep 2024 12:35:00 +0000 https://sullia.samagrasamachara.com/?p=69831 ಆಲೆಟ್ಟಿ: ಕರ್ನಾಟಕ ಸರ್ಕಾರದ ವತಿಯಿಂದ ೨೦೨೪-೨೫ನೇ ಸಾಲಿನ ಮಾಜಿ ಶಿಕ್ಷಣ ಸಚಿವ ದಿ.ಎಚ್.ಜಿ ಗೋವಿಂದೇ ಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ದಿನಾಚರಣೆಯ ದಿನ ಕೊಡಮಾಡುವ ಒಂದು ಅತ್ಯುತ್ತಮ ಕನ್ನಡ ಸರಕಾರಿ ಶಾಲೆ ರಾಜ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಾಥಮಿಕ ವಿಭಾಗದಲ್ಲಿ ಕೋಲ್ಚಾರ್ ಶಾಲೆ ಆಯ್ಕೆಯಾಗಿದೆ.

ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯ ಸಮಿತಿಯಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಇದರ ಶಿಕ್ಷಣ ಗುಣಮಟ್ಟ, ಪರಿಸರ ಸ್ವಚ್ಛತೆ, ಗ್ರಂಥಾಲಯ, ವಿವಿಧ ಚಟುವಟಿಕೆಗಳ ಆಯೋಜನೆ, ಸಮುದಾಯದ ಸಹಭಾಗಿತ್ವ ಇನ್ನಿತರ ಚಟುವಟಿಕೆಗಳನ್ನು ಪರಿಗಣಿಸಿ ದ.ಕ ಜಿಲ್ಲೆಯಿಂದ ಅತ್ಯುತ್ತಮ ಶಾಲೆ ಎಂದು ಪರಿಗಣಿಸಿ ಆಯ್ಕೆ ಮಾಡಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಮಾಹಿತಿ ನೀಡಿದ್ದಾರೆ

]]>
69831
ಆಲೆಟ್ಟಿ: ಸೇತುವೆಯಿಂದ ಉರುಳಿದ ರಿಕ್ಷಾ| ಚಾಲಕ ಪ್ರಾಣಾಪಾಯದಿಂದ ಬಚಾವ್ https://sullia.samagrasamachara.com/2024/08/26/aletti/ Mon, 26 Aug 2024 06:31:54 +0000 https://sullia.samagrasamachara.com/?p=69728 ಆಲೆಟ್ಟಿ: ಇಲ್ಲಿನ ಕುಕ್ಕುಂಬಳ ಸೇತುವೆಯಿಂದ ಕೆಳಗಡೆ ಆಟೋ ರಿಕ್ಷಾವೊಂದು ಬಿದ್ದು, ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಟೋ ಚಾಲಕ ವೇಣುಗೋಪಾಲ ದೇವಮೂಲೆ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯಾಗಿದ್ದಾರೆ. ಅವರು ದೇವಮೂಲೆಗೆ ಪ್ರಯಾಣಿಕರನ್ನು ಬಿಟ್ಟು ಪೆರಾಜೆ ಕಡೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಆಟೋ ರಿಕ್ಷಾ ಜಖಂಗೊಂಡಿದ್ದು, ಮೇಲಕ್ಕೆ ಎತ್ತುವ ಪ್ರಯತ್ನ ನಡೆಯುತ್ತಿದೆ. ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ.

]]>
69728
ಆಲೆಟ್ಟಿ: ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳು ಸಾವು https://sullia.samagrasamachara.com/2024/08/14/aletty/ Wed, 14 Aug 2024 15:36:05 +0000 https://sullia.samagrasamachara.com/?p=69584 ಆಲೆಟ್ಟಿ: ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ ಶಶಿಧರನ್ ಆಲೆಟ್ಟಿಯವರು( 73) ಮಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆ.10 ರಂದು ಬೆಳಗ್ಗೆ
ಆಲೆಟ್ಟಿಯಿಂದ ಸುಳ್ಯಕ್ಕೆ ತಮ್ಮ ಬೈಕಿನಲ್ಲಿ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಗಾಯಗೊಂಡ ಅವರನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ತಲೆಯ ಭಾಗಕ್ಕೆ ವಿಪರೀತ ಗಾಯಗೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ‌ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

]]>
69584