Ajjavara – Sullia Samagra Samachara https://sullia.samagrasamachara.com Samagra Media Network Wed, 02 Jul 2025 02:50:29 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Ajjavara – Sullia Samagra Samachara https://sullia.samagrasamachara.com 32 32 235500897 ಸುಳ್ಯ : ಅಜ್ಜಾವರದಲ್ಲಿ ಮಕ್ಕಳ ಹಕ್ಕುಗಳ  ಅರಿವು ಕಾರ್ಯಕ್ರಮ https://sullia.samagrasamachara.com/2025/07/02/news-one-200/ Wed, 02 Jul 2025 02:50:29 +0000 https://sullia.samagrasamachara.com/?p=71256 ಅಜ್ಜಾವರ ಸರಕಾರಿ ಪ್ರೌಢ ಶಾಲೆಯಲ್ಲಿ ಜೂ.30 ಸೋಮವಾರ ಅಪರಾಹ್ನ 2 ಗಂಟೆಗೆ. ಶಾಲಾ ಮುಖ್ಯ ಶಿಕ್ಷಕರಾದ ಗೋಪಿನಾಥ್ ರವರ ಅಧ್ಯಕ್ಷತೆಯಲ್ಲಿ ಮಕ್ಕಳ ಹಕ್ಕುಗಳ  ಅರಿವು ಕಾರ್ಯಕ್ರಮ  ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಖೀ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇದರ ಆಡಳಿತಾಧಿಕಾರಿ ಪ್ರಿಯಾ ರಾಜಮೋಹನ್ 

ಭಾಗವಹಿಸಿದ್ದರು.

ಮಕ್ಕಳ ಹಕ್ಕುಗಳು,ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು. ಪೋಕ್ಸೋ ಕಾಯಿದೆ, ಮಕ್ಕಳ ಸಹಾಯವಾಣಿ

ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಎಸ್ ಡಿಎಂಸಿ ಅಧ್ಯಕ್ಷರಾದ ಪ್ರಕಾಶ್ ಕನೆಮಾರಡ್ಕ ಉಪಾಧ್ಯಕ್ಷರಾದ ಶೌಕತ್ ಅಲಿ. ಸದಸ್ಯರಾದ ಜನಾರ್ಧನ, ದಾಮೋದರ ಕೆ. ಶಾಲಾ ಮಕ್ಕಳ ಸುರಕ್ಷತಾ ಸಮಿತಿ.    ಸದಸ್ಯರಾದ ವಸಂತಿ, ಯಶೋಧ, ಗ್ರಂಥಪಾಲಕಿ ಸುಜಾತ ಕನೆಮಾರಡ್ಕ ಅತಿಥಿಗಳಾಗಿ ಉಪಸ್ಥಿತರಿದ್ದರು. 

ಶಾಲಾ ವಿದ್ಯಾರ್ಥಿಗಳು ಮತ್ತು  ಶಿಕ್ಷಕರು  ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾ ಶಂಕರಿ ಶಿಕ್ಷಕಿ ಎಲ್ಲರನ್ನೂ ಸ್ವಾಗತಿಸಿ,

ಮುಖ್ಯ ಶಿಕ್ಷಕರಾದ ಗೋಪಿನಾಥ್ ರವರು  ಸರ್ವರನ್ನು ವಂದಿಸಿದರು.

]]>
71256
ತುಳಸಿ ಗಿಡದಲ್ಲಿ ಮೂಡಿದ ದಾಸವಾಳ ಹೂ https://sullia.samagrasamachara.com/2024/10/15/news-one-19/ Tue, 15 Oct 2024 10:46:41 +0000 https://sullia.samagrasamachara.com/?p=70220 ಸಮಗ್ರ ನ್ಯೂಸ್: ಪ್ರಕೃತಿ ತನ್ನ ಒಡಲಲ್ಲಿ ಹಲವು ಅಚ್ಚರಿ ಮೂಡಿಸುವಂತ ವಿಸ್ಮಯಕಾರಿ ಘಟನೆ ನಡೆಯುತ್ತಿದೆ.ಅಜ್ಜಾವರದಲ್ಲಿ ತುಳಸಿ ಗಿಡದಲ್ಲೊಂದು ಅರಳಿದ ದಾಸವಾಳ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಸುಮಾರು ನಾಲ್ಕು ಗಿಡಗಳಲ್ಲಿ ಕಳೆದ ಒಂದು ವಾರದಿಂದ ಹೂ ಬಿಡುತ್ತಿದ್ದ ದೃಶ್ಯ ಅಜ್ಜಾವರ ಗ್ರಾಮದ ಶಾಂತಿಮಜಲು ನಿವಾಸಿ, ಭವಾನಿ ಅವರ ಮನೆಯಲ್ಲಿ ಕಂಡು ಬಂದಿದೆ.

]]>
70220
ಅಜ್ಜಾವರ: ರಿಕ್ಷಾ ಚಾಲಕ‌ ಆತ್ಮಹತ್ಯೆ https://sullia.samagrasamachara.com/2024/10/14/rickshaw-driver-commits-suicide/ Mon, 14 Oct 2024 07:40:47 +0000 https://sullia.samagrasamachara.com/?p=70202 ಅಜ್ಜಾವರ: ಇಲ್ಲಿನ ಮೇನಾಲ ನಿವಾಸಿ, ರಿಕ್ಷಾ ಚಾಲಕ ಭಾಸ್ಕರ ರೈ (45) ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲವು ವರ್ಷಗಳಿಂದ ಸುಳ್ಯದಲ್ಲಿ ಅಟೋ ಚಾಲಕರಾಗಿ ದುಡಿಯುತ್ತಿದ್ದ ಅವರು ಗುರುವಾರ ಬೆಳಗ್ಗೆ ಎಂದಿನಂತೆ ಸುಳ್ಯಕ್ಕೆ ಬಂದು ಕೆಲಸ ಮಾಡಿ ಮಧ್ಯಾಹ್ನ ಮನೆಗೆ ಹೋಗಿದ್ದರು.

ಮನೆಯ ಸಮೀಪದಲ್ಲೇ ರಿಕ್ಷಾ ನಿಲ್ಲಿಸಿ ತೋಟಕ್ಕೆ ತೆರಳಿದ್ದು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹುಡುಕಿದಾಗ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವಿವಾಹಿತರಾಗಿದ್ದ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸುಳ್ಯ ಪೊಲೀಸರು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

]]>
70202
ಅಜ್ಜಾವರ: ವತಿಯಿಂದ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಚಹಾಕೂಟ https://sullia.samagrasamachara.com/2024/09/19/news-one-4/ Thu, 19 Sep 2024 04:35:44 +0000 https://sullia.samagrasamachara.com/?p=69975 ಅಜ್ಜಾವರ: ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಸೆ.16 ರಂದು ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಸಾರ್ವಜನಿಕ ಚಹಾಕೂಟವು ಅಜ್ಜಾವರದಲ್ಲಿ ನಡೆಯಿತು.

ಮುಹಿಯುದ್ದೀನ್ ಜುಮಾ ಮಸೀದಿ ಅಜ್ಜಾವರ ವಠಾರದಲ್ಲಿ ಬೆಳಿಗ್ಗೆ 8.30 ಸರಿಯಾಗಿ ತಖ್ ವಿಯ್ಯತ್ತಲ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ಲ್ ಖಾದರ್ ಹಾಜಿ, ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿರವರು ಧ್ವಜಾರೋಹಣ ನೆರವೇರಿಸಿದರು. ನಂತರ ನೂರುಲ್ ಇಸ್ಲಾಂ ಮದ್ರಾಸ ಅಜ್ಜಾವರ, ಮೇನಾಲ, ಬಯಂಬು ಮತ್ತು ಕಲ್ತಡ್ಕ ವಿದ್ಯಾರ್ಥಿಗಳ ಅತ್ಯಾರ್ಕಾಷಕವಾದ ವೀಲಾದ್ ಜಾಥ ಹಾಗೂ ಮದ್ರಾಸ ವಿದ್ಯಾರ್ಥಿಗಳಿಂದ ಧಫ್ ಮತ್ತು ಸ್ಕೌಟ್ ನಡೆಯಿತು.

ಬಹು|ಹಸೈನಾರ್ ಫೈಝಿ ಶನಿವಾರಸಂತೆ ಖತೀಬರು ಎಂ.ಜೆ.ಎಂ ಅಜ್ಜಾವರ- ಮೇನಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ನಾಸರ್ ಕೆ.ಹೆಚ್ ರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಬಾಸ್ಕರ್ ರಾವ್ ಮಾಲಕರು ರೇಷನಲ್ ಇಂಜನಿಯರಿಂಗ್ ವರ್ಕ್ ಗಾಂಧಿನಗರ ಸುಳ್ಯ, ಇವರು ವಹಿಸಿದ್ದರು. ಮರ್ ಹೂಂ ಶಂಸುಬಯಂಬು,ಹೋಟೆಲ್ ಮುಸ್ತಫ, ಅಬ್ದುಲ್ಲ್ ಖಾದರ್, ಕೆ.ಹೆಚ್ ಮಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ| ಅವಿನಾಶ್ ಕೆ.ವಿ ಪ್ರೂಫೆಸರ್ ಕೆ.ವಿ.ಜಿ ಆಯುರ್ವೇದ ಕಾಲೇಜು, ಸುಳ್ಯ, ಜನಾಬ್ ಅಬ್ದುಲ್ಲ್ ಖಾದರ್ ಹಾಜಿ ಅಧ್ಯಕ್ಷರು ತಖ್ ವಿಯ್ಯತುಲ್ ಇಸ್ಲಾಂ ಕಮಿಟಿ ಅಜ್ಜಾವರ ಮೇನಾಲ, ಶ್ರೀ ರಾಘವ ಅಜ್ಜಾವರ ಸಿ.ಎ ಬ್ಯಾಂಕ್ ಸುಳ್ಯ, ಬಹು| ಹನೀಫ್ ಮೌಲವಿ ಇಮಾಮ್ ದರ್ಗಾ ಶರೀಫ್ ಮೇನಾಲ ಅಸೀನಾರಾದರು, ಊರಿನ ಮಹನೀಯರು ಜಾತಿ ಧರ್ಮ ಬೇದವಿಲ್ಲದೇ ಆಗಮಿಸಿದ್ದರು. ಮಿಲಾದ್ ಸಮಿತಿ ಅಜ್ಜಾವರ ಮತ್ತು ಎಂ.ಜೆ.ಎಂ ಅಜ್ಜಾವರ ಮೇನಾಲದ ಸರ್ವ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮವನ್ನು ಜನಾಬ್ ಅಬ್ದುಲ್ಲ್ ಅಝೀಝ್ ಕಾರ್ಯದರ್ಶಿ ಮಿಲಾದ್ ಸಮಿತಿ ಅಜ್ಜಾವರ ಇವರು ಸ್ವಾಗತಿಸಿದರು,ಮುಹಿಯ್ಯದ್ದೀನ್ ಅನ್ಸಾರಿ ಮೇನೆಜರ್ ಝೈನಿಯಾ ವುಮೆನ್ಸ್ ಕಾಲೇಜು ಅಡ್ಕ-ಅಜ್ಜಾವರ ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲರನ್ನು ವಂದಿಸಿದರು.

]]>
69975
ಆ.22: ಸುಳ್ಯದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ https://sullia.samagrasamachara.com/2024/08/21/electrical-variation/ Wed, 21 Aug 2024 13:16:05 +0000 https://sullia.samagrasamachara.com/?p=69677 ಸುಳ್ಯ: ಆ.22 ಗುರುವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಮೆಸ್ಕಾಂ ಹಮ್ಮಿಕೊಂಡಿದೆ.

ಈ ಹಿನ್ನಲೆಯಲ್ಲಿ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ ಮತ್ತು ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

]]>
69677