Aivathoklu – Sullia Samagra Samachara https://sullia.samagrasamachara.com Samagra Media Network Fri, 21 Nov 2025 04:19:25 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Aivathoklu – Sullia Samagra Samachara https://sullia.samagrasamachara.com 32 32 235500897 ಪಂಜ: ಅಕ್ರಮ‌ವಾಗಿ ಗೋವಧೆ ಮಾಡುತ್ತಿದ್ದ ಶೆಡ್ ಗೆ ಪೊಲೀಸ್ ದಾಳಿ| ಓರ್ವ ವಶಕ್ಕೆ, ಮೂವರು ಪರಾರಿ https://sullia.samagrasamachara.com/2025/11/21/illegal-crime-police-ride/ Fri, 21 Nov 2025 04:19:25 +0000 https://sullia.samagrasamachara.com/?p=71657 ಪಂಜ: ಇಲ್ಲಿನ ಐವತ್ತೊಕ್ಲು ಗ್ರಾಮದ ಶೆಡ್ ವೊಂದರಲ್ಲಿ ದನ ಕಡಿದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಸುಬ್ರಹ್ಮಣ್ಯ ಎಸ್.ಐ ಕಾರ್ತಿಕ್ ಕೆ ನೇತೃತ್ವದ ಪೊಲೀಸರು ನ.18 ರಂದು ದಾಳಿ ಮಾಡಿದ್ದಾರೆ. ಮೂವರು ಪರಾರಿಯಾಗಿದ್ದು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಐವತ್ತೊಕ್ಲು ಗ್ರಾಮದ ಮುಚ್ಚಿಲ ಮೇಲ್ಮನೆ ಚಾಮುಂಡಿ ಮೂಲೆ ಎಂಬಲ್ಲಿ ಕೆಲವರು ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ. ಶೆಡ್ ನಲ್ಲಿ ಮಾಂಸ ಕತ್ತರಿಸುತ್ತಿದ್ದ ಹಮೀದ್ ಎಂಬಾತನನ್ನು ವಿಚಾರಿಸಿದಾಗ ಆತನು ಮುಸ್ತಾಫ, ಶರೀಫ್ ಜುಬೇರ್, ಎಂಬವರೊಂದಿಗೆ ಸೇರಿಕೊಂಡು 3 ವರ್ಷದ ಹೋರಿಯೊಂದನ್ನು ಮಾಂಸ ಮಾಡಿ ಮಾರಾಟ ಮಾಡಿ ಲಾಭ ಪಡೆಯುವ ಉದ್ದೇಶದಿಂದ ಹತ್ಯೆ ಮಾಡಿ ಅಶ್ರಫ್ ಎಂಬವರ ಕಟ್ಟಡದಲ್ಲಿ ಮಾಂಸ ಕತ್ತರಿಸುತ್ತಿರುವುದಾಗಿ ತಿಳಿಸಿದ್ದಾನೆ. ಒಟ್ಟು 102.5 ಕೆ ಜಿ ಮಾಂಸವಿರುವುದು ಕಂಡು ಬಂದಿದ್ದು ಇದರ ಅಂದಾಜು ಮೌಲ್ಯ ಸುಮಾರು 25,500 ಆಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಸೊತ್ತುಗಳ ವಿವರ: ಆರೋಪಿತ ವ್ಯಕ್ತಿ ಬಳಸುತ್ತಿದ್ದ ಅಂದಾಜು ಬೆಲೆ 500/ ರೂ ಬೆಲೆ ಬಾಳುವ ತೂಕ ಮಾಪಕ-1, ಮಾಂಸ ಮಾಡಲು ಉಪಯೋಗಿಸಿದ ಮರದ ತುಂಡು -1, ಮಾಂಸ ಮಾಡಲು ಉಪಯೋಗಿಸಿದ ಕತ್ತಿ- 1 ಅಂದಾಜು ಬೆಲೆ 300 ರೂ, ಹಾಗೂ ಚಾಕು -3 ಅದರ ಅಂದಾಜು ಮೌಲ್ಯ 50/ ರೂ, ಮಾಂಸವನ್ನು ತುಂಬಲು ಉಪಯೋಗಿಸಿದ -2 ಬಕೆಟ್, ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು ಅಂದಾಜು ಬೆಲೆ 2,00,000, , ಬೈಕ್ ಅಂದಾಜು ಬೆಲೆ 50,000 ಮತ್ತು ಆರೋಪಿ ವಧೆ ಮಾಡುವ ಉದ್ದೇಶದಿಂದ ಆತನ ವಶದಲ್ಲಿಟ್ಟುಕೊಂಡಿದ್ದ ಅಂದಾಜು ಮೂರು ವರ್ಷದ ಕಪ್ಪು ಬಣ್ಣದ ಹೋರಿ-1, ಸುಮಾರು ಒಂದೂವರೆ ವರ್ಷದ ಕಪ್ಪು ಬಣ್ಣದ ಹೋರಿ-1, ಕಪ್ಪು ಬಣ್ಣದ ಸುಮಾರು ಐದು ವರ್ಷದ ಹಸು -1 ಸದ್ರಿ ಜಾನುವಾರುಗಳ ಅಂದಾಜು ಮೌಲ್ಯ 12,000 ಆಗಬಹುದಾಗಿದ್ದು, ಈ ಮೇಲಿನ ಸೊತ್ತುಗಳನ್ನು ಮಹಜರು ಮುಖೇನ ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಅ.ಕ್ರ ನಂಬ್ರ 57/2025 ಕಲಂ: 4,7,12 ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಮತ್ತು ಕಲಂ:66,192(A) IMV ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

]]>
71657
ಐವರ್ನಾಡು: ಗೆಳೆಯರ ಬಳಗ ಮತ್ತು ಸಾರ್ವಜನಿಕರಿಂದ ದೇವಸ್ಥಾನ ಮುಂಭಾಗದ ರಸ್ತೆ ಕಾಂಕ್ರೀಟ್ https://sullia.samagrasamachara.com/2024/10/29/aivarnadu-2/ Tue, 29 Oct 2024 13:18:49 +0000 https://sullia.samagrasamachara.com/?p=70313 ಐವರ್ನಾಡು:ಗೆಳೆಯರ ಬಳಗ ದೇರಾಜೆ ಮತ್ತು ಸಾರ್ವಜನಿಕರು ಸೇರಿ ದೇವಸ್ಥಾನ ಮುಂಭಾಗದ ರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐವರ್ನಾಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗ ರಸ್ತೆ ಕೆಟ್ಟು ಹೋಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆದರೂ ರಸ್ತೆ ದುರಸ್ತಿಯಾಗದೆ ಉಳಿದಿತ್ತು. ಇದೀಗ ಗೆಳೆಯರ ಬಳಗ ದೇರಾಜೆ ಮತ್ತು ಸಾರ್ವಜನಿಕರು ಸೇರಿ ದೇವಸ್ಥಾನ ಮುಂಭಾಗದ ರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸಿದ್ದಾರೆ.

]]>
70313
ನವೀನ್ ಚಾತುಬಾಯಿಯವರಿಗೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ  https://sullia.samagrasamachara.com/2024/10/21/progressive-farmer-award/ Mon, 21 Oct 2024 14:34:22 +0000 https://sullia.samagrasamachara.com/?p=70259 ಸೆ.21: ಐವರ್ನಾಡು ಗ್ರಾಮದ ಕೃಷಿಕ ಸಿ.ಕೆ.  ನವೀನ್ ಚಾತುಬಾಯಿ ಅವರಿಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ದೊರೆತಿದೆ.

ಶಿವಮೊಗ್ಗದ ನವುಲೆ ವಿಶ್ವವಿದ್ಯಾಲಯದ ಆವರಣದಲ್ಲಿ  ಅ. 18 ರಿಂದ 24ರ ವರೆಗೆ ನಡೆಯಲಿರುವ  ಕೃಷಿ ಮತ್ತು ತೋಟಗಾರಿಕೆ ಮೇಳ 2024ರಲ್ಲಿ  ಸಮಗ್ರ ಕೃಷಿಯಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಅರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಬಲ್ಕಿಷ್ ಬಾನು, ವಿ. ವಿ. ಕುಲಪತಿ  ಡಾ. ಆರ್.ಸಿ. ಜಗದೀಶ್, ಎಸ್. ಎನ್.ಚೆನ್ನಪ್ಪ ಮೊದಲಾದ ಗಣ್ಯರುಗಳು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿದರು.

]]>
70259
ಐವರ್ನಾಡು: ಬಾಜಪಾ ವತಿಯಿಂದ ಸದಸ್ಯತ್ವ ಅಭಿಯಾನ https://sullia.samagrasamachara.com/2024/09/02/ivarnadu-bjp-news/ Mon, 02 Sep 2024 16:04:11 +0000 https://sullia.samagrasamachara.com/?p=69823 ಐವರ್ನಾಡು: ಭಾರತೀಯ ಜನತಾ ಪಾರ್ಟಿಯ ಮುಂದಿನ ಆರು ವರ್ಷಗಳ ಅವಧಿಯ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ಐವರ್ನಾಡು ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾದ ನಂದಕುಮಾರ್ ಬಾರೇತಡ್ಕ ಇವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಹಾಶಕ್ತಿಕೇಂದ್ರದ ಸದಸ್ಯರಾದ ಕಿಶನ್ ಜಬಳೆ, ವಿನಯ ಕೊಡ್ತಿಲು ( ದೇರಾಜೆ ಬೂತ್ ಅಧ್ಯಕ್ಷರು ) ರಕ್ಷಿತ್ ಸಾರಕೂಟೆಲು ( ಬೂತ್ ಕಾರ್ಯದರ್ಶಿ ) ದೇವಿ ಪ್ರಸಾದ್ ಕೊಪ್ಪತಡ್ಕ, ನಿಶ್ಚಿತ್ ಗುತ್ತಿಗಾರು ಮೂಲೆ, ಪುನೀತ್ ಚಾಕೋಟೆ, ಅನಿಲ್ ದೇರಾಜೆ,ನವೀನ್ ಚಾತುಬಾಯಿ,ರಂಜಿತ್ ಮೂಲೆತೋಟ, ಲವಕುಮಾರ್ ಬಾರೆತಡ್ಕ,ಅರುಣ್ ಗುತ್ತಿಗಾರುಮೂಲೆ,ಅಜಿತ್ ಗುತ್ತಿಗಾರುಮೂಲೆ, ಸತ್ಯನಾರಾಯಣ ಅಚ್ರಪ್ಪಾಡಿ, ಯವರು ಉಪಸ್ಥಿತರಿದ್ದರು.

]]>
69823
ಐವರ್ನಾಡು: ದೇರಾಜೆ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ದೊರಕಿಸಿ ಕೊಡುವುವಂತೆ ಶಾಸಕಿಗೆ ಮನವಿ https://sullia.samagrasamachara.com/2024/08/29/appeal-for-road-development/ Thu, 29 Aug 2024 10:40:20 +0000 https://sullia.samagrasamachara.com/?p=69780 ಐವರ್ನಾಡು: ದೇರಾಜೆ ರಸ್ತೆ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಅನುದಾನವನ್ನು ದೊರಕಿಸಿ ಕೊಡುವುವಂತೆ ಆ.29ರಂದು ಶಾಸಕಿ ಭಾಗೀರಥಿ ಮುರುಳ್ಯರಿಗೆ ಗ್ರಾಮ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ ರವರ ನಾಯಕತ್ವದಲ್ಲಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಮೋಹನ್ ಬೋಳುಗುಡ್ಡೆ, ರಕ್ಷಿತ್ ಸಾರಕುಟೇಲು, ಕಿಶನ್ ಜಬಳೆ, ಅನಿಲ್ ದೇರಾಜೆ, ನಿಕಿಲ್ ಮಡ್ತಿಲ, ಅಜಿತ್ ಐವರ್ನಾಡು, ಅರುಣ್ ಗುತ್ತಿಗಾರುಮೂಲೆ, ಅನಿಲ್ ಕುತ್ಯಾಡಿ ಪ್ರೀತಮ್ ಕೋಡ್ತಿಲು ನವೀನ್ ಸಾರಕೆರೆ ಉಪಸ್ಥಿತರಿದ್ದರು.

]]>
69780
ಐವರ್ನಾಡು ‌ಸುಳ್ಯದಿಂದ ಕಡಬ ತಾಲೂಕಿಗೆ ಶಿಪ್ಟ್!! https://sullia.samagrasamachara.com/2024/08/25/aivarnadu/ Sun, 25 Aug 2024 04:41:24 +0000 https://sullia.samagrasamachara.com/?p=69713 ಐವರ್ನಾಡು: ಇಲ್ಲಿನ ಐವರ್ನಾಡು- ದೇರಾಜೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆದಿದ್ದು ಕಾಮಗಾರಿ ಫಲಕದಲ್ಲಿ ಗ್ರಾಮವನ್ನು ಕಡಬ ತಾಲೂಕಿಗೆ ಅಧಿಕಾರಿಗಳು ಸೇರಿಸಿದ್ದಾರೆ.

ಶಾಸಕರ 25ಲಕ್ಷ ಅನುದಾನದಲ್ಲಿ ದ.ಕ ಜಿಲ್ಲಾ‌ ನಿರ್ಮಿತಿ ಕೇಂದ್ರವು ಕಾಮಗಾರಿಯನ್ನು ನಡೆಸಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಈ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ‘ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಐವರ್ನಾಡು – ದೇರಾಜೆ ರಸ್ತೆ’ ಎಂದು ನಮೂದಿಸಿದ್ದು ಈ ಬೋರ್ಡ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸುಳ್ಯ ತಾಲೂಕಿನ ಹೃದಯಭಾಗದ ಗ್ರಾಮವೊಂದನ್ನು ದೂರದ ಕಡಬ ತಾಲೂಕಿಗೆ ಸೇರಿಸಿದ ಅಧಿಕಾರಿಗಳ ಈ ಸಾಹಸ(!) ಮೆಚ್ಚಲೇಬೇಕು.

]]>
69713