ಪುತ್ತೂರು – Sullia Samagra Samachara https://sullia.samagrasamachara.com Samagra Media Network Wed, 23 Jul 2025 12:09:05 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg ಪುತ್ತೂರು – Sullia Samagra Samachara https://sullia.samagrasamachara.com 32 32 235500897 ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಚಾಲಕ ನಾಪತ್ತೆ https://sullia.samagrasamachara.com/2025/07/23/news-one-210/ Wed, 23 Jul 2025 12:09:05 +0000 https://sullia.samagrasamachara.com/?p=71302 ಸುಬ್ರಹ್ಮಣ್ಯ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಚಾಲಕ ಜುಲೈ 22 ರಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ನಾಪತ್ತೆಯಾಗಿರುವ ವ್ಯಕ್ತಿ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ಆರಂಭಿಸಲಾಗಿದೆ.

ಹೊನ್ನಪ್ಪ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬ್ಯಲೆನ್ಸ್ ವಾಹನದ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಅವರು ಜುಲೈ 22ರಂದು ಕರ್ತವ್ಯಕ್ಕೆಂದು ಮನೆಯಿಂದ ಬೆಳಗ್ಗೆ ಹೋಗಿದ್ದು, ಬಳಿಕ ಕಾಣೆಯಾಗಿದ್ದಾರೆ. ಅಲ್ಲದೆ ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರ ನದಿ ಕಡೆ ಹೋಗುತ್ತಿರುವುದು ಅಲ್ಲಿನ ಸಿ.ಸಿ. ಕೆಮರಾದಲ್ಲಿ ದಾಖಲಾಗಿದ್ದು, ಈ ಹಿನ್ನಲೆ ನದಿಗೆ ಹಾರಿರುವ ಶಂಕೆ ಇದ್ದು, ಕುಮಾರಧಾರ ನದಿಯಲ್ಲಿ ಹುಡುಕಾಟ ಆರಂಭಿಸಲಾಗಿದೆ.

ಎಸ್.ಡಿ.ಆರ್.ಎಫ್. ತಂಡ, ಈಜುಗಾರರು ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು, ಸ್ಥಳೀಯರು ಘಟನಾ ಸ್ಥಳದಲ್ಲಿದ್ದಾರೆ.

]]>
71302
ಉಪ್ಪಿನಂಗಡಿ: ಸರ್ಕಾರಿ ಬಸ್ ನಲ್ಲಿ ಬಟ್ಟೆ ಒಣಹಾಕಿ ‘ ಶಕ್ತಿ’ ಪ್ರದರ್ಶನ https://sullia.samagrasamachara.com/2025/06/25/news-one-194/ Wed, 25 Jun 2025 12:28:04 +0000 https://sullia.samagrasamachara.com/?p=71234 ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಶಕ್ತಿ ಯೋಜ‌ನೆ ಜಾರಿಗೆ ತಂದ ಮೇಲೆ ಉಚಿತ ಪ್ರಯಾಣದ ಪ್ರಯೋಜನವನ್ನು ಕೋಟ್ಯಾಂತರ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಹಲವು ತೀರ್ಥಕ್ಷೇತ್ರ, ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ.

ಈ ನಡುವೆ ಪ್ರಯಾಣಿಸುವ ಬಸ್ ಗಳೇ ವೈಯಕ್ತಿಕ ಕೆಲಸಗಳಿಗೆ ಬಳಕೆಯಾಗುತ್ತಿರುವುದು ಯೋಜನೆಯ ದುರುಪಯೋಗವಾಗುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಗೋಕರ್ಣದಿಂದ ಮಂಗಳೂರು ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ನಲ್ಲಿ ಜೂ.25ರ ಸಂಜೆ ಕಂಡುಬಂದ ದೃಶ್ಯವಿದು. ಕೆಲ ಮಹಿಳಾ ಪ್ರಯಾಣಿಕರು ತಮ್ಮ ಉಡುಪುಗಳನ್ನು ಬಸ್ ನೊಳಗೆ ಒಣಹಾಕಿ ಪ್ರಯಾಣಿಕರಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದಾರೆ. ನಿರ್ವಾಹಕ ಇದನ್ನು ಕಂಡೂ ಕಾಣದಂತೆ ತನ್ನ ಪಾಡಿಗಿರುವುದು ಆಶ್ಚರ್ಯ ಉಂಟುಮಾಡಿದೆ.

ಚಾಲಕನ ಹಿಂದಿನ ಸೀಟಿನಲ್ಲಿ ಕುಳಿತ ಕೆಲ ಮಹಿಳಾ ಪ್ರಯಾಣಿಕರು ತಮ್ಮ ಲಂಗ ಹಾಗೂ ಇನ್ನಿತರ ಉಡುಪುಗಳನ್ನು ಒಣಹಾಕಿದ್ದಾರೆ. ಯೋಜನೆಯ ಲಾಭವನ್ನು ಪಡೆಯುವ ಬದಲು ಬಸ್ಸನ್ನು ಮನೆಯನ್ನಾಗಿ ಮಾಡಿಕೊಂಡಿರುವುದು ಯೋಜನೆಯ ದುರುಪಯೋಗವೆಂದರೆ ತಪ್ಪಾಗಲಾರದು.

]]>
71234
ಮಾಣಿ ಸಮೀಪದ ಸೂರಿಕುಮೇರು ಬಳಿ ಭೀಕರ ಅಪಘಾತ| ಮರ್ಗಿಲಡ್ಕದ ಯುವಕ ದಾರುಣ ಸಾವು https://sullia.samagrasamachara.com/2024/12/19/news-one-64/ Thu, 19 Dec 2024 04:45:41 +0000 https://sullia.samagrasamachara.com/?p=70597 ಸುಳ್ಯ: ತಾಲೂಕಿನ ಅಮರಮುಡ್ನೂರು ಗ್ರಾಮದ ಮರ್ಗಿಲಡ್ಕ ನಿವಾಸಿ ಪುನೀತ್( 30) ರವರು ಸೂರಿಕುಮೇರು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.

ಮಂಗಳೂರಿನಲ್ಲಿ ಕೋಸ್ಟಲ್ ಕೋಳಿ ಫಾರ್ಮ್ ನಲ್ಲಿ ಚಾಲಕರಾಗಿದ್ದ ಪುನೀತ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಸೂರಿಕುಮೇರು ರಾಜ್ಯ ಹೆದ್ದಾರಿಯಲ್ಲಿ ಟೆಂಪೊ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತರು ಅವಿವಾಹಿತರಾಗಿದ್ದು ತಂದೆ ಗಂಗಾಧರ ಗೌಡ ಮರ್ಗಿಲಡ್ಕ , ತಾಯಿ ಮತ್ತು ಇಬ್ಬರು ಸಹೋದರರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಸ್ಥಳೀಯ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಪುನೀತ್ ಅಗಲಿಕೆಗೆ ಬಂಧುಗಳು ಕಂಬನಿ ಮಿಡಿದಿದ್ದಾರೆ.

]]>
70597
ಪುತ್ತೂರು:ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಹುಟ್ಟು ಹಬ್ಬ ಆಚರಣೆ https://sullia.samagrasamachara.com/2024/10/08/avg-school/ Tue, 08 Oct 2024 08:14:30 +0000 https://sullia.samagrasamachara.com/?p=70147 ಪುತ್ತೂರು, ಅ.7: ಕೃಷ್ಣ ನಗರದ ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಅ. 7ರಂದು ಸೀತಾರಾಮ ಕೇವಳ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಅಧ್ಯಕ್ಷ ಕಳುವಾಜೆ ವೆಂಕಟರಮಣ ಗೌಡರು ವಹಿಸಿದರು.

ಕಾರ್ಯಕ್ರಮದಲ್ಲಿ ಗಂಗಾಧರ ಗೌಡ, ಗಂಗಯ್ಯ ಗೌಡ ಅನಂತಾಡಿ, ಮಾಧವ ಗೌಡ ಪೆರಿಯತ್ತೋಡಿ, ಸುಂದರ ಗೌಡ ಜ್ಯೋತಿ ಎಲೆಕ್ಟ್ರಿಕಲ್, ಕುಶಾಲಪ್ಪ ಗೌಡ ಅಂಕಲ್ ಸ್ವೀಟ್ಸ್, ಅಮರನಾಥ ಗೌಡ ಬಪ್ಪಳಿಗೆ, ಸೀತಾರಾಮ ಗೌಡ ಕಾಂತಿಲ, ಪದ್ಮಪ್ಪ ಗೌಡ ರಾಮಕುಂಜ, ಪ್ರತಿಬಾದೇವಿ, ಮುಖ್ಯ ಶಿಕ್ಷಕಿ ಸವಿತಾ ಕುಮಾರಿ, ಶಿಕ್ಷಕಿ ಯಶುಭಾ, ಶ್ರೇಯ, ಚಂದ್ರಿಕಾ, ಗೀತಾ ಭಾಗವಹಿಸಿದರು.

ಶಾಲಾ ಸಂಚಾಲಕ ಎ.ವಿ. ನಾರಾಯಣ ಸ್ವಾಗತಿಸಿ, ಉಮೇಶ್ ಮಳುವೇಲು ವಂದಿಸಿದರು. ಗುಡ್ಡಪ್ಪ ಗೌಡ ಬಲ್ಯ, ಕಾರ್ಯಕ್ರಮ ನಿರೂಪಿಸಿದರು. ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

]]>
70147
ಪುತ್ತೂರು: ಮುಳಿಯ ಜ್ಯುವೆಲ್ಸ್ ವತಿಯಿಂದ ಆ.11 ರಂದು ಸ್ವಾತಂತ್ರ್ಯ ದಿನದ ಅಂಗವಾಗಿ ಛದ್ಮವೇಷ ಸ್ಪರ್ಧೆ https://sullia.samagrasamachara.com/2024/08/06/puttur-muliya-jewels-competition/ Tue, 06 Aug 2024 04:36:19 +0000 https://sullia.samagrasamachara.com/?p=69514 ಸಮಗ್ರ ನ್ಯೂಸ್: ಪುತ್ತೂರಿನ ಮುಳಿಯ ಜ್ಯುವೆಲ್ಸ್ ನವರು ಸ್ವಾತಂತ್ರ್ಯ ದಿನದ ಅಂಗವಾಗಿ ಆ.11ರಂದು ಬೆಳಗ್ಗೆ 10ರಿಂದ ಸ್ವಾತಂತ್ರ್ಯ ಹೋರಾಟಗಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಛದ್ಮವೇಷ ಸ್ಪರ್ಧೆಯಲ್ಲಿ 3ರಿಂದ 7 ವರ್ಷ ಮತ್ತು 8ರಿಂದ 12ವರ್ಷಗಳ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯನ್ನು ಝೂಮ್ ಆಪ್ ಮೂಲಕ ನಡೆಸಲಾಗುತ್ತದೆ. ಸ್ಪರ್ಧಿಗಳು ಮನೆಯಿಂದಲೇ ವೇಷ ಭೂಷಣಗಳನ್ನು ಧರಿಸಿ ಮುಳಿಯ ಜ್ಯುವೆಲ್ಸ್ ಝೂಮ್ ಲಿಂಕ್ ನಲ್ಲಿ ಭಾಗವಹಿಸಬಹುದು.

ಪ್ರತಿ ಸ್ಪರ್ಧಿಗೆ 2 ನಿಮಿಷಗಳ ಕಾಲಾವಾಕಾಶವನ್ನು ನೀಡಲಾಗುತ್ತಿದ್ದು, ನೃತ್ಯ, ಡೈಲಾಗ್, ಹಿನ್ನಲೆ ಸಂಗೀತಗಳನ್ನು ಬಳಸಿಕೊಳ್ಳಬಹುದಾಗಿದೆ. ಭಾಗವಹಿಸುವ ಸ್ಪರ್ಧಿಗಳು ಆ.8ರ ಒಳಗಾಗಿ ಹೆಸರನ್ನು 9353030916 ಮೂಲಕ ನೋಂದಾಯಿಸಿಕೊಳ್ಳಬೇಕಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

]]>
69514
ಪುತ್ತೂರು ಸಮೀಪದ ಶೇಖಮಲೆ ಬಳಿ ಗುಡ್ಡ ಕುಸಿತ| ಮಾಣಿ -ಮೈಸೂರು ರಾ.ಹೆದ್ದಾರಿ ಸಂಚಾರ ಬಂದ್ https://sullia.samagrasamachara.com/2024/07/30/puttur-land-slide-near-shekamale/ Tue, 30 Jul 2024 07:29:07 +0000 https://local.samagrasamachara.com/?p=69313 ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು – ಸುಳ್ಯ ರಸ್ತೆಯ ಶೇಖಮಲೆ ಎಂಬಲ್ಲಿ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮವಾಗಿ‌ ಬಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಗುಡ್ಡ ಕುಸಿತದಿಂದಾಗಿ ಈಗಾಗಲೇ 4 ವಿದ್ಯುತ್‌ ಕಂಬಗಳು ನೆಲಕ್ಕುರುಳಿದೆ. ಗುಡ್ಡ ಕುಸಿತ ಮುಂದುವರಿದಿದ್ದು 2 ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಬಂಧಪಟ್ಟವರ ಕಾರ್ಯಾಚರಣೆಗೆ ಪ್ರಯಾಣಿಕರು ಕಾಯುತ್ತಿದ್ದಾರೆ. ಸದ್ಯ ಪುತ್ತೂರು ಸುಳ್ಯ ರಸ್ತೆ ಸಂಚಾರ ಬಂದ್‌ ಆಗಿದೆ ಎಂದು ತಿಳಿದುಬಂದಿದೆ.

]]>
69313
ಕಡಬ: ನೇಣುಬಿಗಿದು ಯುವಕ ಆತ್ಮಹತ್ಯೆ https://sullia.samagrasamachara.com/2024/07/29/committed-to-suicide/ Mon, 29 Jul 2024 07:04:16 +0000 https://local.samagrasamachara.com/?p=69299 ಕಡಬ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕಳಾರ ಎಂಬಲ್ಲಿ ಸೋಮವಾರ (ಜು.29) ಬೆಳಿಗ್ಗೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಳಾರ ನಿವಾಸಿ ಮುಸ್ತಫಾ(33) ಎಂದು ಗುರುತಿಸಲಾಗಿದೆ. ಸೋಮವಾರದಂದು ಬೆಳಿಗ್ಗೆ ಮುಸ್ತಫಾ ಅವರನ್ನು ಹುಡುಕಾಡಿದಾಗ ಹಳೆ ಮನೆಯೊಂದರಲ್ಲಿ ಮೊಬೈಲ್ ರಿಂಗ್ ಆಗುತ್ತಿದ್ದು ಬಳಿಕ ಸ್ಥಳೀಯರು ಗಾಜು ಒಡೆದು ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೋಧನೆ ನಡೆಸಿದ್ದಾರೆ.

]]>
69299
ಪುತ್ತೂರು: ಟ್ಯಾಂಕರ್ ಮತ್ತು‌ ಸ್ಕೂಟರ್‌ ನಡುವೆ ಭೀಕರ ಅಪಘಾತ| ವಿಕಲಚೇತನ ಸ್ಕೂಟಿ ಸವಾರ ದುರ್ಮರಣ https://sullia.samagrasamachara.com/2024/07/24/accident-119/ https://sullia.samagrasamachara.com/2024/07/24/accident-119/#respond Wed, 24 Jul 2024 05:58:44 +0000 https://samagrasamachara.com/?p=68894 ಸಮಗ್ರ ನ್ಯೂಸ್: ಪುತ್ತೂರಿನ ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು ಟ್ಯಾಂಕ‌ರ್ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

]]>
https://sullia.samagrasamachara.com/2024/07/24/accident-119/feed/ 0 68894
ಉಡುಪಿ ಅಗ್ನಿ ಅವಘಡ ಪ್ರಕರಣ| ಉದ್ಯಮಿ ಪತ್ನಿ ಸೋಶಿಯಲ್ ಮೀಡಿಯಾ ಖ್ಯಾತಿಯ ಅಶ್ವಿನಿ ಶೆಟ್ಟಿ ಸಾವು https://sullia.samagrasamachara.com/2024/07/16/udupi-fire-accident/ https://sullia.samagrasamachara.com/2024/07/16/udupi-fire-accident/#respond Tue, 16 Jul 2024 09:30:05 +0000 https://samagrasamachara.com/?p=68479 ಸಮಗ್ರ ನ್ಯೂಸ್: ಉಡುಪಿಯ ಅಂಬಲಪಾಡಿಯಲ್ಲಿ ಸೋಮವಾರ ಬೆಳಗಿನ ಜಾವ ಬಾರ್ & ರೆಸ್ಟೋರೆಂಟ್ ಉದ್ಯಮಿ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಅಶ್ವಿನಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

ಸೋಮವಾರ ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ನ ಮಾಲಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಸಿಲುಕಿದ ಬಾರ್ ಮಾಲಕ ರಮಾನಂದ ಹಾಗು ಪತ್ನಿ ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ರಮಾನಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಬೆಂಕಿ ಅವಘಡದ ವೇಳೆ ಹೊಗೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಪತ್ನಿ ಅಶ್ವಿನಿ ಕೂಡ ಮಂಗಳವಾರ ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಮಕ್ಕಳಿಬ್ಬರು ಮನೆಯ ಮೇಲಿನ ಮಹಡಿಯಲ್ಲಿದ್ದ ಪರಿಣಾಮ ಅಪಾಯದಿಂದ ಪಾರಾಗಿದ್ದು, ಘಟನೆಯಿಂದ ಮನೆ ಸುಟ್ಟು ಕರಕಲಾಗಿದೆ.

]]>
https://sullia.samagrasamachara.com/2024/07/16/udupi-fire-accident/feed/ 0 68479
ಸುರತ್ಕಲ್: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ| 16 ಜಾನುವಾರುಗಳ ರಕ್ಷಣೆ| ಗೋಮಾಂಸ, ವಾಹನ ವಶ https://sullia.samagrasamachara.com/2024/07/08/suraatkal/ https://sullia.samagrasamachara.com/2024/07/08/suraatkal/#respond Mon, 08 Jul 2024 02:56:54 +0000 https://samagrasamachara.com/?p=68055 ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಕೃಷ್ಣಾಪುರ 8ನೇ ಬ್ಲಾಕ್ ಬಳಿ ಮನೆಯಲ್ಲೇ ಭಾರಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿರುವುದು ಭಾನುವಾರ ಪತ್ತೆಯಾಗಿದೆ. ಸ್ಥಳದಲ್ಲಿದ್ದ 16 ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು, ಗೋಮಾಂಸ ಹಾಗೂ ಅದರ ಸಾಗಣೆಗೆ ಬಳಸುತ್ತಿದ್ದ ಆಟೊರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.

ಸುಸಜ್ಜಿತ ಕಾಂಕ್ರಿಟ್ ಮನೆಯೊಂದರಲ್ಲಿ ಜಾನುವಾರುಗಳನ್ನು ಕಡಿದು ಮಾಂಸ ತಯಾರಿಸಿ ಸ್ಥಳೀಯ ಹೋಟೆಲ್‌ಗಳೂ ಸೇರಿದಂತೆ ವಿವಿಧೆಡೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪ್ರಮುಖರು ನೀಡಿದ ಮಾಹಿತಿ ಆಧರಿಸಿ ಕೃಷ್ಣಾಪುರದ ಮನೆಯೊಂದಕ್ಕೆ ದಾಳಿ ನಡೆಸಿದಾಗ 16ಕ್ಕೂ ಹೆಚ್ಚು ಜಾನುವಾರುಗಳು ಪತ್ತೆಯಾಗಿದ್ದು, ಅವುಗಳನ್ನು ಸಂರಕ್ಷಿಸಲಾಗಿದೆ. ಕೆ.ಜಿ ಗಟ್ಟಲೆ ಗೋಮಾಂಸವೂ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

]]>
https://sullia.samagrasamachara.com/2024/07/08/suraatkal/feed/ 0 68055