ಕಾರ್ಯಕ್ರಮ – Sullia Samagra Samachara https://sullia.samagrasamachara.com Samagra Media Network Sat, 28 Feb 2026 16:25:51 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg ಕಾರ್ಯಕ್ರಮ – Sullia Samagra Samachara https://sullia.samagrasamachara.com 32 32 235500897 ನಾಳೆ(ಮಾ.1) ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಭೇಟಿ https://sullia.samagrasamachara.com/2026/02/28/hd-devegowda-visiting-kukke/ Sat, 28 Feb 2026 16:25:51 +0000 https://sullia.samagrasamachara.com/?p=71855 ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಭೇಟಿ ನೀಡಲಿದ್ದಾರೆ. ನಾಳೆ ಸಂಜೆ 5.20ಕ್ಕೆ ಹೆಲಿಕಾಫ್ಟರ್‌ ಮೂಲಕ ಬೆಂಗಳೂರಿನಿಂದ ಆಗಮಿಸಿ ಬಿಳಿನೆಲೆ ಹೆಲಿಪ್ಯಾಡ್‌ನ‌ಲ್ಲಿ ಬಂದಿಳಿಯುವರು.

ಬಿಳಿನೆಲೆಯಿಂದ ರಸ್ತೆ ಮಾರ್ಗದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವರು. 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವರು. ಅಂದು ರಾತ್ರಿ ಸುಬ್ರಹ್ಮಣ್ಯದ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ಮಾ.2ರಂದು ಬೆಳಗ್ಗೆ 6 ಗಂಟೆಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವರು.

ಮಧ್ಯಾಹ್ನ 2.30ಕ್ಕೆ ಸುಬ್ರಹ್ಮಣ್ಯದಿಂದ ರಸ್ತೆ ಮಾರ್ಗದ ಮೂಲಕ ಬಿಳಿನೆಲೆ ಹೆಲಿಪ್ಯಾಡ್‌ಗೆ ತೆರಳಿ 3 ಗಂಟೆಗೆ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ನಿರ್ಗಮಿಸುವರು. ಪ್ರವಾಸದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಝಡ್‌ ಪ್ಲಸ್‌ ಭದ್ರತೆ ಇರಲಿದೆ.

]]>
71855
ಫೆ.15: ವೆಂಕಟರಮಣ ಸೊಸೈಟಿಯ 24ನೇ ಮೂರ್ನಾಡು ಶಾಖೆ ಉದ್ಘಾಟನೆ https://sullia.samagrasamachara.com/2026/02/14/svccs-new-branch-innaguration-at-murnad/ Sat, 14 Feb 2026 04:01:09 +0000 https://sullia.samagrasamachara.com/?p=71833 ಸುಳ್ಯ: ಇಲ್ಲಿನ ಗೌಡರ ಯುವ ಸೇವಾ ಸಂಘದಿಂದ ಪ್ರವರ್ತಿಸಲ್ಪಡುತ್ತಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ನೂತನ 24ನೇ ಮೂರ್ನಾಡು ಶಾಖೆ ಫೆ.15 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮೂರ್ನಾಡಿನಲ್ಲಿ 24ನೇ ಶಾಖೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ ಎಂದರು.

ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಹಾಗೂ ಗಣಕೀಕರಣವನ್ನು ಮೂರ್ನಾಡು ವರ್ತಕರ ಸಂಘದ ಅಧ್ಯಕ್ಷ ಅರುಣ್ ಅಪ್ಪಚ್ಚು ಬಡವಂಡ ಉದ್ಘಾಟಿಸಲಿದ್ದಾರೆ. ಪ್ರಥಮ ಪಾಲುಪತ್ರವನ್ನು ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ.ಹರೀಶ್, ಠೇವಣಿ ಪತ್ರವನ್ನು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ ನ ಉಪಾಧ್ಯಕ್ಷ ನವೀನ್ ಅಂಬೆಕಲ್ಲು ವಿತರಿಸಲಿದ್ದಾರೆ. ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ರೈ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಂಬೀರಂಡ ಬಿ.ಕಾಳಪ್ಪ ಹಾಗೂ ಶ್ರೀ ವೆಂಕಟೇಶ್ವರ ಕಾಂಪ್ಲೆಕ್ಸ್ ನ ಮಾಲೀಕ ಕುಂತೋಡಿರ ದೇವಯ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಂಘವು ಪ್ರಾರಂಭದಿಂದಲೂ ಲಾಭದಲ್ಲಿ ನಡೆಯುತ್ತಿದ್ದು, ಈ ಸಹಕಾರಿ ವರ್ಷದಲ್ಲಿ ಸಂಘ ಹೆಚ್ಚಿನ ಪ್ರಗತಿ ಸಾಧಿಸಿದೆ. ಪ್ರಸ್ತುತ ಸಂಘದಲ್ಲಿ ರೂ.270 ಕೋಟಿ ಠೇವಣಿ ಇದ್ದು, ರೂ.256 ಕೋಟಿ ಸದಸ್ಯರುಗಳಿಗೆ ಸಾಲ ವಿತರಿಸಲಾಗಿದೆ. ರೂ.300 ಕೋಟಿ ದುಡಿಯುವ ಬಂಡವಾಳವಿದ್ದು, ಒಟ್ಟು ರೂ.1,300 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸುತ್ತಿದ್ದೇವೆ ಎಂದು ಕೆ.ಸಿ.ಸದಾನಂದ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದಿನೇಶ ಮಡಪ್ಪಾಡಿ, ನಿರ್ದೇಶಕರಾದ ಸದಾನಂದ ಮಾವಜಿ, ದಾಮೋದರ ನಾರ್ಕೋಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ಮಡಿಕೇರಿ‌ ಶಾಖಾ ವ್ಯವಸ್ಥಾಪಕ ಅಶೋಕ ಬಿ. ಉಪಸ್ಥಿತರಿದ್ದರು.

]]>
71833
ಸಂಪಾಜೆ: ಹಿಟ್ & ರನ್| ರಿಕ್ಷಾ ಚಾಲಕ ಸಾವು https://sullia.samagrasamachara.com/2026/01/29/sampaje-hit-and-run-driver-died/ Thu, 29 Jan 2026 10:25:46 +0000 https://sullia.samagrasamachara.com/?p=71793 ಸಂಪಾಜೆ: ಕಾರೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗೇಟಿನ ಬಳಿ ಸಂಭವಿಸಿದೆ.

ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು ಸಂಪಾಜೆ ಪೆಟ್ರೋಲ್‌ ಪಂಪ್‌ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಗುದ್ದಿ ಪರಾರಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಸುಂದರ ಚಿಟ್ಟಿಕ್ಕಾನ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಪ್ರಯಾಣಿಕನಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

]]>
71793
ಕುಕ್ಕೆಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ಬಿಸು ರಥೋತ್ಸವ https://sullia.samagrasamachara.com/2025/04/15/kukke-subramanya-bisu-car-festive/ Tue, 15 Apr 2025 06:01:24 +0000 https://sullia.samagrasamachara.com/?p=71098 ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಪ್ರದಾಯದ ಪ್ರಕಾರ ಬಿಸು ಕಣಿ ಮತ್ತು ಸೌರಮಾನ ಯುಗಾದಿಯನ್ನು ಸೋಮವಾರ(ಎ.14) ಆಚರಿಸಲಾಯಿತು. ಬಿಸು ಹಬ್ಬದ ಅಂಗವಾಗಿ ಕುಕ್ಕೆ ದೇವಳದಲ್ಲಿ ಬಿಸು ಕಣಿಯನ್ನು ದೇವರಿಗೆ ದರ್ಶನ ಮಾಡಲಾಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬಿಸು ರಥೋತ್ಸವ ನಡೆಯಿತು.

ರಾಜಬೀದಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿಕ್ಕರಥೋತ್ಸವ ನೆರವೇರಿತು. ರಥೋತ್ಸವದ ಬಳಿಕ ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಪೂಜೆ ನೆರವೇರಿತು. ದೇವರ ದರ್ಶನ ಮತ್ತು ಸೇವೆಗಳು ಉತ್ಸವದ ನಂತರ ಆರಂಭವಾದವು.

ಭಾನುವಾರ ರಾತ್ರಿ ಮಹಾಪೂಜೆಯ ನಂತರ ವಿಷು ಪ್ರಯುಕ್ತ ದೇವರಿಗೆ ವಿಶೇಷ ಪಾಲಕಿ ಮತ್ತು ಬಂಡಿ ರಥೋತ್ಸವ ನೆರವೇರಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಭಕ್ತರು ಭಾಗವಹಿಸಿದ್ದರು.

]]>
71098
ಕರಿಕ್ಕಳ: ಶಾಸಕಿ ಭಾಗೀರಥಿ ಮುರುಳ್ಯರಿಂದ ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಬಿಡುಗಡೆ https://sullia.samagrasamachara.com/2024/09/11/karikkala-2/ Wed, 11 Sep 2024 02:18:34 +0000 https://sullia.samagrasamachara.com/?p=69901 ಕರಿಕ್ಕಳ: ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘಟನೆಯ ಟಿ ಶರ್ಟ್ ಅನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಹಿರಿಯರಾದ ಡಾ. ರಾಮಯ್ಯ ಭಟ್, ಶಿವರಾಮಯ್ಯ, ಚಂದ್ರಶೇಖರ ಶಾಸ್ತ್ರಿ, ದಯಾನಂದ ಮೇಲ್ಮನೆ, ಲೋಕೇಶ್ ಬರೆಮೇಲು, ಕಾರ್ಯಪ್ಪ ಗೌಡ ಚಿದ್ಗಲ್, ಲಿಗೋಧರ ಆಚಾರ್ಯ, ನಾರಾಯಣ ಕೃಷ್ಣ ನಗರ, ವಿಜಯಲಕ್ಷ್ಮಿ ಜಳಕದ ಹೊಳೆ, ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘದ ಅಧ್ಯಕ್ಷ ಲತೀಶ್ ಅಲೆಂಗಾರ, ಕಾರ್ಯದರ್ಶಿ ಪವನ್ ಅತ್ಯಡ್ಕ ಹಾಗೂ ವಿಷ್ಣು ಸೇವಾ ಶಕ್ತಿ ಸಂಘದ ಸದಸ್ಯರುಗಳು ಮತ್ತು ಊರವರು ಉಪಸ್ಥಿತರಿದ್ದರು.

]]>
69901
ಕೆ.ವಿ.ಜಿ. ಪಾಲಿಟೆಕ್ನಿಕ್ : ಸಿವಿಲ್ ವಿಭಾಗದ ಮುಖ್ಯಸ್ಥ ದೇವರಾಜ್ ಜಿ ಕೆ ಯವರಿಗೆ ಬೀಳ್ಕೊಡುಗೆ https://sullia.samagrasamachara.com/2024/07/28/kvg-polytechnic-news/ Sun, 28 Jul 2024 07:54:51 +0000 https://local.samagrasamachara.com/?p=69262 ಸುಳ್ಯ: ಇಲ್ಲಿನ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಸುಧಿರ್ಘ ಸೇವೆ ಸಲ್ಲಿಸಿ ಇದೇ ಜುಲೈ 31 ರಂದು ವಯೋ ನಿವ್ರತ್ತಿ ಹೊಂದಲಿರುವ ಸಿವಿಲ್ ವಿಭಾಗದ ಮುಖ್ಯಸ್ಥ ದೇವರಾಜ್ ಜಿ.ಕೆಯವರ ಬಿಳ್ಕೊಡುಗೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಕಮಿಟಿ “ಬಿ” ಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್ ವಹಿಸಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಉಜ್ವಲ್ ಯು ಜೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಬೋಧನೆಯ ಮೂಲಕ ಭವಿಷ್ಯ ನಿರ್ಮಾಣಕ್ಕೊಂದು ಮುನ್ನುಡಿ ಬರೆದ ದೇವರಾಜ್ ರವರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಸಂಸ್ಥೆಯ ಪ್ರಾಂಶುಪಾಲ ಶ್ರೀಧರ್ ಎಂ ಕೆ ಸನ್ಮಾನಿತರ ಮುಂದಿನ ಜೀವನವು ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಸಿವಿಲ್ ವಿಭಾಗದ ಉಪನ್ಯಾಕರುಗಳಾದ ಹರೀಶ್ ಕುಮಾರ್, ಅನಿಲ್ ಕುಮಾರ್ , ರವಿ ಎಂ.ಆರ್ ಮೆಕ್ಯಾನಿಕಲ್ ವಿಭಾಗದ ಮೇಘರಾಜ್, ಅಧೀಕ್ಷಕ ಧನಂಜಯ ಕಲ್ಲುಗದ್ದೆ ನಿವ್ರತ್ತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸಿವಿಲ್ ವಿಭಾಗದ ಉಪನ್ಯಾಸಕ ಸುನಿಲ್ ಕುಮಾರ್ ಎನ್.ಪಿ. ಸನ್ಮಾನ ಪತ್ರ ವಾಚಿಸಿದರು.

ನಿವ್ರತ್ತರನ್ನು ಎ.ಓ.ಎಲ್.ಇ, ಕೆ.ವಿ.ಜಿ.ಪಾಲಿಟೆಕ್ನಿಕ್ ಹಾಗೂ ಸಿವಿಲ್ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಸಿಬ್ಬಂದಿಗಳಾದ ಜಯಲಕ್ಷ್ಮಿ ಹಾಗೂ ಪದ್ಮಾವತಿ ಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ ಸ್ವಾಗತಿಸಿ ಧನಂಜಯ ಕಲ್ಲುಗದ್ದೆ ವಂದಿಸಿದರು, ಶಿಕ್ಷಕ ನಾರಾಯಣ ತೋರಣಗಂಡಿ ನಿರೂಪಿಸಿದರು.

]]>
69262