ಮಂಗಳೂರು – Sullia Samagra Samachara https://sullia.samagrasamachara.com Samagra Media Network Sat, 11 Apr 2026 16:52:00 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg ಮಂಗಳೂರು – Sullia Samagra Samachara https://sullia.samagrasamachara.com 32 32 235500897 ಬಂಟ್ವಾಳ: ಮೆಹಂದಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ನಿರೂಪಕ ಕುಸಿದು ಬಿದ್ದು ಸಾವು https://sullia.samagrasamachara.com/2026/04/11/news-one-301/ Sat, 11 Apr 2026 16:52:00 +0000 https://sullia.samagrasamachara.com/?p=71890 ಸಮಗ್ರ ನ್ಯೂಸ್: ಯುವ ನಿರೂಪಕನೋರ್ವ ಮದುವೆಯ ಮೆಹಂದಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ನಡೆದಿದೆ. ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿಥ್ (32) ಮೃತ ನಿರೂಪಕ.

ತನ್ನ ಸಂಬಂಧಿಕರ ಮದುವೆಯ ಮೆಹಂದಿ ಕಾರ್ಯಕ್ರಮದ ಸಂಭ್ರಮ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ನಿರೂಪಣೆ ಮಾಡಲೆಂದು ವೇದಿಕೆಯನ್ನು ಏರಿದಾಗ ಅವರು ಹಠಾತ್ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ.

ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ನಡೆದ ಈ ಘಟನೆಯಿಂದ ಆತಂಕ್ಕೊಳಗಾದ ಮನೆಯವರು, ಕೂಡಲೇ ಸಮೀಪದ ತುಂಬೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅದಾಗಲೇ ಮೃತಪಟ್ಟಿರುವ ಕುರಿತು ವೈದ್ಯರು ತಿಳಿಸಿದ್ದಾರೆ. ಘಟನಾ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

]]>
71890
ನಿರುದ್ಯೋಗಿಗಳಿಗೆ ಸುವರ್ಣಾವಕಾಶ| ಅ. 11 ರಂದು ಮಂಗಳೂರಿನ ಶ್ರೀನಿವಾಸ್ ಸಫ್ರಾನ್ ಹೊಟೇಲಿನಲ್ಲಿ ನೇರಸಂದರ್ಶನ https://sullia.samagrasamachara.com/2024/10/07/job-offer/ Mon, 07 Oct 2024 14:59:13 +0000 https://sullia.samagrasamachara.com/?p=70140 ಉದ್ಯೋಗ: ದುಬೈನಲ್ಲಿ ಪ್ರಸಿದ್ದಿ ಪಡೆದು ಹಲವು ವರ್ಷಗಳಿಂದ ಸೇವೆ ಸಲ್ಲಿಸುತಿರುವ ಲಹೇಜ್ ಅಂಡ್ ಸುಲ್ತಾನ್ ಕಂಪನಿಯು ಇದೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಉದ್ಯೋಗ ನೇರ ಸಂದರ್ಶನ ನಡೆಸಲಿದ್ದು, ಇದೇ ತಿಂಗಳ ಅ. 11ರ ಶುಕ್ರವಾರ ಮಂಗಳೂರಿನ ಶ್ರೀನಿವಾಸ್ ಸಫ್ರಾನ್ ಹೊಟೇಲಿನಲ್ಲಿ ಮಂಗಳೂರಿನ ಹೆಸರಾಂತ ಕಂಪನಿ ನೂರ್ ಇಂಟರ್ನ್ಯಾಷನಲ್ ನ ಸಹಯೋಗದೊಂಧಿಗೆ ನಡೆಸಲಿದೆ.

ಎತ್ತರ 5.7ft, ವಯಸ್ಸು 38ರ ಒಳಗಿನ SSLC ಪಾಸ್ ಆಗಿರುವ ನಿರುದ್ಯೋಗಿ/ಅನುಭವಸ್ತ ಆಸಕ್ತ ಯುವಕರು ಇದರ ಪ್ರಯೋಜನವನ್ನು ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ನೂರ್ international ನ ಮಂಗಳೂರು ವಿಭಾಗ ಕಚೇರಿಗೆ ಅಥವಾ ಈ ಕೆಳಗೆ ನಮೂದಿಸಿರುವ ನಂಬರ್ಗೆ ( 9591279487, 9008758055,
8951428055 )ಸಂಪರ್ಕಿಸ ಬಹುದು.

(ವಿ.ಸೂ: ಇಲ್ಲಿ ಪ್ರಕಟವಾಗಿರುವ ಸುದ್ದಿ ವಿಶ್ವಾಸಪೂರ್ಣವೇ ಆದರೂ ಸಮಗ್ರ ಸಮಾಚಾರ ಜವಾಬ್ದಾರಿ ವಹಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರನ್ನೇ ಸಂಪರ್ಕಿಸುವುದು – ಸಂ)

]]>
70140
ಮಂಗಳೂರು: ಮುಮ್ತಾಝ್ ಆಲಿ ಅಗಲುವಿಕೆಗೆ ಎಸ್‌ಡಿಪಿಐ ಸಂತಾಪ https://sullia.samagrasamachara.com/2024/10/07/mumtaz-ali/ Mon, 07 Oct 2024 14:06:23 +0000 https://sullia.samagrasamachara.com/?p=70137 ಮಂಗಳೂರು: ದುಷ್ಕರ್ಮಿಗಳ ಕುತಂತ್ರಕ್ಕೆ ಬಲಿಯಾದ ಕರಾವಳಿ ಜಿಲ್ಲೆಯ ಸಾಮಾಜಿಕ-ಧಾರ್ಮಿಕ-ಶೈಕ್ಷಣಿಕ ದುರೀಣ ಬಿ.ಎಂ. ಮುಮ್ತಾಝ್ ಅಲಿ ಅವರ ಮರಣಕ್ಕೆ ದ. ಕ. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರಾವಳಿ ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮುಮ್ತಾಝ್ ಅಲಿ ಯವರು ಯಶಸ್ವಿ ಉದ್ಯಮಿ ಕೂಡ ಆಗಿದ್ದರು. ಮಂಗಳೂರಿನ ಯಾವುದೇ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಮುಂಚೂಣಿಯಲ್ಲಿ ನಿಂತು ನೇತೃತ್ವ ನೀಡುತ್ತಿದ್ದ ಇವರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸುವ ವ್ಯಕ್ತಿತ್ವವಾಗಿದ್ದರು. ಹಲವಾರು ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಇವರ ಪಾತ್ರ ಬಹಳ ದೊಡ್ಡದಾಗಿತ್ತು.

ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಮೇರು ವ್ಯಕ್ತಿತ್ವದ ಮುಮ್ತಾಝ್ ರವರ ಅಗಲುವಿಕೆ ಸಮಾಜಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಕುಟುಂಬ ಮತ್ತು ಬಂಧುಗಳಿಗೆ ಮುಮ್ತಾಝ್ ರವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಅನ್ವರ್ ಸಾದತ್ ತನ್ನ ಸಂತಾಪವನ್ನು ತಿಳಿಸಿದ್ದಾರೆ.

]]>
70137
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ದ.ಕ. ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ ಅವರ ಕಚೇರಿ ಉದ್ಘಾಟನೆ https://sullia.samagrasamachara.com/2024/08/14/news-1/ Wed, 14 Aug 2024 15:40:51 +0000 https://sullia.samagrasamachara.com/?p=69587 ಮಂಗಳೂರು; ಆ .14; ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ದ.ಕ. ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ ಅವರ ಕಚೇರಿಯು ನಗರದ ಉರ್ವ ಸ್ಟೋರ್‌ನ ದ.ಕ.ಜಿಲ್ಲಾ ಪಂಚಾಯತ್‌ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

ಕಮ್ಮಾರಿಕೆ ವೃತ್ತಿ ನಡೆಸುವ ಮೂಲಕ ಕಾಯಕ ಯೋಗಿನಿ ಎಂದು ಗುರುತಿಸಿಕೊಂಡಿರುವ ಗುತ್ತಿಗಾರಿನ ಲೀಲಾವತಿ ಅಪ್ಪಯ್ಯ ಆಚಾರ್ಯ ಅವರು ಕಚೇರಿ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾ‌ರ್, ಮಾಜಿ ಶಾಸಕ ಜೆ.ಆ‌ರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ, ರಾಜೀವಿ ಆರ್. ರೈ, ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅರೆ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ, ಪಿ.ಸಿ. ಜಯರಾಮ್, ನಿತ್ಯಾನಂದ ಮುಂಡೋಡಿ, ಮಹಮ್ಮದ್ ಇಟ್ಬಾಲ್ ಎಲಿಮಲೆ, ಕೆ.ಪಿ.ಥಾಮಸ್, ಸುಧೀರ್ ಕುಮಾ‌ರ್ ಶೆಟ್ಟಿ ಶಾಹುಲ್ ಹಮೀದ್ ಕುತ್ತಮೊಟ್ಟೆ ಸಿದ್ದಿಕ್ ಕೊಕ್ಕೊ, ರಂಜಿತ್ ರೈ ಮೇನಾಲ, ಕರುಣಾಕರ ಅಡ್ಪಂಗಾಯ ಉಪಸ್ಥಿತರಿದ್ದರು.

]]>
69587
ಮಂಗಳೂರು: ವಿದ್ಯಾರ್ಥಿಗಳಿಗೆ ಹೆಂಡದ ಆಫರ್ ನೀಡಿದ್ದ ಪಬ್ ಮೇಲೆ ಎಫ್ಐಆರ್ https://sullia.samagrasamachara.com/2024/07/27/news-1-3881/ https://sullia.samagrasamachara.com/2024/07/27/news-1-3881/#respond Sat, 27 Jul 2024 03:57:47 +0000 https://samagrasamachara.com/?p=69061 ಸಮಗ್ರ ನ್ಯೂಸ್: ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ದೇರೆಬೈಲ್‌ನಲ್ಲಿರುವ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ವಿಡ್ ಲಾಂಜ್ ಬಾರ್) ನಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಪಾನ ಮಾಡಲು ಉತ್ತೇಜಿಸುವ ಪೋಸ್ಟರ್ ಹರಿದಾಡುತ್ತಿರುವ ಹಿನ್ನೆಲೆ ಎಚ್ಚೆತ್ತ ಅಬಕಾರಿ ಇಲಾಖೆ ಬಾರ್ ಮಾಲೀಕರ ವಿರುದ್ಧ FIR ದಾಖಲಿಸಿದೆ.

ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಿಂದ ವಿಧ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ರೊಚ್ಚಿಗೆದ್ದಿದ್ದರು. ಈ ಬಗ್ಗೆ ಎಚ್ಚೆತ್ತ ಪೋಲಿಸ್ ಇಲಾಖೆಯ ಸೂಚನೆಯ ಮೇರೆಗೆ ಹಾಗೂ ಅಬಕಾರಿ ಇಲಾಖೆ ಕರ್ನಾಟಕ ಅಬಕಾರಿ ಕಾಯ್ದೆ, 1965 ಮತ್ತು ಪರವಾನಗಿ ನಿಬಂಧನೆಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳ ಉಲ್ಲಂಘನೆಯಾದ ಪರಿಣಾಮವಾಗಿ, ಅಬಕಾರಿ ಇಲಾಖೆಯು Cr No 5/2024-25/1503DySE/150309 ರಲ್ಲಿ ಕರ್ನಾಟಕ ಅಬಕಾರಿ ಕಾಯಿದೆ, 1965 ರ u/s 36 ಕಾಯಿದೆ ಅನ್ವಯ ಬಾರ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಮಂಗಳೂರು ನಗರ ಪೊಲೀಸರು ಬಾರ್ ಮತ್ತು ಪಬ್‌ಗಳಲ್ಲಿ ಇಂತಹ ಚಟುವಟಿಕೆಗಳನ್ನು ತಡೆಯಲು ಪೋಲಿಸ್ ಇಲಾಖೆ ಬದ್ಧರಾಗಿದ್ದು ಅದರಂತೆ ನಿನ್ನೆ ಪೊಲೀಸರಿಂದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳನ್ನು ತಡೆಗಟ್ಟಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು ಅಂತಹ ಅಭ್ಯಾಸಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ನಗರ ಪೋಲಿಸ್ ಆಯುಕ್ತರು ಎಲ್ಲಾ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.

]]>
https://sullia.samagrasamachara.com/2024/07/27/news-1-3881/feed/ 0 69061
ಮಂಗಳೂರಿನಲ್ಲಿ ಬೀಸಿದ ಭಾರೀ ಬಿರುಗಾಳಿ| ಶಾಲಾ ಮೇಲ್ಚಾವಣಿ ಕುಸಿದು ವಿದ್ಯಾರ್ಥಿ, ಶಿಕ್ಷಕಿಗೆ ಗಾಯ https://sullia.samagrasamachara.com/2024/07/26/news-1-3872/ https://sullia.samagrasamachara.com/2024/07/26/news-1-3872/#respond Fri, 26 Jul 2024 11:16:35 +0000 https://samagrasamachara.com/?p=69033 ಸಮಗ್ರ ನ್ಯೂಸ್: ಶುಕ್ರವಾರ ಮಧ್ಯಾಹ್ನ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಬೀಸಿದ ಬಿರುಗಾಳಿ ಮಳೆ ಅವಾಂತರ ಸೃಷ್ಟಿಸಿದೆ. ಶಾಲೆ, ಮನೆಯ ಮೇಲ್ಛಾವಣಿ ಕುಸಿದು, ಹಲವಾರು ವಿದ್ಯುತ್ ಕಂಬ ಧರಾಶಾಹಿಯಾಗಿರುವ ಘಟನೆ ಸುರತ್ಕಲ್ ನ ಕೃಷ್ಣಪುರದಲ್ಲಿ ನಡೆದಿದೆ.

ಕೃಷ್ಣಪುರ ಕಾರುಣ್ಯ ವಿದ್ಯಾಲಯದ ಮೇಲ್ಛಾವಣಿ ಕುಸಿದು ಬಿದ್ದು ವಿದ್ಯಾರ್ಥಿ ಹಾಗೂ ಶಿಕ್ಷಕಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬಡಾವಣೆಗೆ ಸಂಪರ್ಕವಿರುವ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಪಕ್ಕದ ಮನೆಯ ಶೀಟ್ ಹಾರಿ ಬಂದು ಇನ್ನೊಂದು ಮನೆಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಭಾರೀ ಗಾಳಿ ಬೀಸಿದ ಪರಿಣಾಮ ಮನೆಯ ಹಂಚು ಹಾರಿ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ.

]]>
https://sullia.samagrasamachara.com/2024/07/26/news-1-3872/feed/ 0 69033
ಬಂಟ್ವಾಳ: ತೀವ್ರ ಜ್ವರದ ಕಾರಣ ಉಸಿರು ಚೆಲ್ಲಿದ ಯುವಕ https://sullia.samagrasamachara.com/2024/07/26/news-1-3870/ https://sullia.samagrasamachara.com/2024/07/26/news-1-3870/#respond Fri, 26 Jul 2024 06:45:50 +0000 https://samagrasamachara.com/?p=69027 ಸಮಗ್ರ ನ್ಯೂಸ್: ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಮೃತ ಯುವಕನನ್ನು ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಎಂದು ಗುರುತಿಸಲಾಗಿದೆ.

ಯುವಕ ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವಾರದ ಹಿಂದೆ ಜ್ವರ ಬಂದಿತ್ತು. ಈ ಹಿನ್ನಲೆ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

]]>
https://sullia.samagrasamachara.com/2024/07/26/news-1-3870/feed/ 0 69027
ಮಂಗಳೂರು-ಮಡಂಗಾವ್‌ ವಂದೇ ಭಾರತ್‌ ರೈಲು/ ಇನ್ಮುಂದೆ ಉಡುಪಿ ಮತ್ತು ಕಾರವಾರ ನಿಲ್ದಾಣದಲ್ಲಿ ನಿಲುಗಡೆ https://sullia.samagrasamachara.com/2024/07/26/news-1-3867/ https://sullia.samagrasamachara.com/2024/07/26/news-1-3867/#respond Fri, 26 Jul 2024 05:48:56 +0000 https://samagrasamachara.com/?p=69018 ಸಮಗ್ರ ನ್ಯೂಸ್‌: ಅತ್ಯಂತ ವೇಗದ ರೈಲು ಎಂದು ಕರೆಯಲ್ಪಡುವ ವಂದೇ ಭಾರತ್ ರೈಲು ಪ್ರಸ್ತುತ ದೇಶದ ಹಲವು ಭಾಗಗಳಲ್ಲಿ ಸಂಚರಿಸುತ್ತಿದ್ದು, ವೇಗವನ್ನು ಹೆಚ್ಚಿಸಲು ಈ ರೈಲುಗಳು ಕಡಿಮೆ ನಿಲ್ದಾಣಗಳನ್ನು ಹೊಂದಿದ್ದವು.
ಆದರೆ, ಪ್ರಯಾಣಿಕರ ಅನುಕೂಲವನ್ನು ಪರಿಗಣಿಸಿ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲುಗಳನ್ನು ನಿಲುಗಡೆ ಮಾಡುವಂತೆ ಮನವಿ ಮಾಡಲಾಗಿದೆ.

ಇದೀಗ ಕೊಂಕಣ ರೈಲ್ವೇ ನಿಗಮದ ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸಿದ್ದು, ಮಂಗಳೂರು ಸೆಂಟ್ರಲ್ ಸ್ಟೇಷನ್ ನಿಂದ ಮಡಂಗಾವ್ ವರೆಗೆ ವಾರದಲ್ಲಿ ಆರು ದಿನ ಸಂಚರಿಸುವ ವಂದೇ ಭಾರತ್ ರೈಲನ್ನು ಉಡುಪಿ ಮತ್ತು ಕಾರವಾರ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚಿಸಿದ್ದಾರೆ.

]]>
https://sullia.samagrasamachara.com/2024/07/26/news-1-3867/feed/ 0 69018
ಮಂಗಳೂರು: ಕಾಂಪೌಂಡ್ ಕುಸಿದು ಬಾಲಕ ಸಾವು https://sullia.samagrasamachara.com/2024/07/25/news-1-3851/ https://sullia.samagrasamachara.com/2024/07/25/news-1-3851/#respond Thu, 25 Jul 2024 05:32:39 +0000 https://samagrasamachara.com/?p=68943 ಸಮಗ್ರ ನ್ಯೂಸ್: ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿದ್ದ ಬಾಲಕ ಮೃತಪಟ್ಟ ಘಟನೆ ಮಂಗಳೂರು ಹೊರ ವಲಯದ ಜೋಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಮೃತರು. ತಡೆ ಗೋಡೆ ಕುಸಿದು ಬಿದ್ದ ಮನೆಗೆ ಬಾಲಕ ಶೈಲೇಶ್ ಅತಿಥಿಯಾಗಿ ಬಂದಿದ್ದ ಎಂದು ತಿಳಿದು ಬಂದಿದೆ.

]]>
https://sullia.samagrasamachara.com/2024/07/25/news-1-3851/feed/ 0 68943
ಉಡುಪಿ ಮಳೆ ಹಿನ್ನೆಲೆ ಕಾರ್ಕಳ, ಹೆಬ್ರಿ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜು.25) ರಜೆ https://sullia.samagrasamachara.com/2024/07/25/heavy-rainfall-holiday-declared-karkal-and-hebri/ https://sullia.samagrasamachara.com/2024/07/25/heavy-rainfall-holiday-declared-karkal-and-hebri/#respond Thu, 25 Jul 2024 04:07:16 +0000 https://samagrasamachara.com/?p=68929 ಸಮಗ್ರ ನ್ಯೂಸ್: ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.25ರಂದು ರಜೆ ಸಾರಲಾಗಿದೆ.


ಕಾರ್ಕಳ ತಹಶೀಲ್ದಾರ್ ನರಸಪ್ಪ ಅವರು ನಿನ್ನೆ ರಾತ್ರಿ ರಜೆ ಘೋಷಣೆ ಮಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಈಗಾಗಲೇ ಇದನ್ನು ಎಲ್ಲ ಮುಖ್ಯಶಿಕ್ಷಕರಿಗೆ ತಿಳಿಸಿದ್ದಾರೆ.
ಕೆಲದಿನ ತುಸು ಬಿಡುವು ನೀಡಿದ್ದ ಮಳೆ ನಿನ್ನೆಯಿಂದ ಮತ್ತೆ ಅಬ್ಬರಿಸಲು ತೊಡಗಿದೆ. ಮಳೆಯ ಜೊತೆಗೆ ಭಾರಿ ವೇಗದಲ್ಲಿ ಗಾಳಿಯೂ ಬೀಸುತ್ತಿರುವುದರಿಂದ ಮಕ್ಕಳ ಸುರಕ್ಷೆಯ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ತಹಸೀಲ್ದಾರ್‌ ತಿಳಿಸಿದ್ದಾರೆ.

]]>
https://sullia.samagrasamachara.com/2024/07/25/heavy-rainfall-holiday-declared-karkal-and-hebri/feed/ 0 68929