ನಿಮ್ಮೂರ ಸುದ್ದಿ – Sullia Samagra Samachara https://sullia.samagrasamachara.com Samagra Media Network Mon, 03 Aug 2026 04:27:55 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg ನಿಮ್ಮೂರ ಸುದ್ದಿ – Sullia Samagra Samachara https://sullia.samagrasamachara.com 32 32 235500897 ಸುಬ್ರಹ್ಮಣ್ಯ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ https://sullia.samagrasamachara.com/2026/08/03/news-one-319/ Mon, 03 Aug 2026 04:27:55 +0000 https://sullia.samagrasamachara.com/?p=71983 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯ, ಕಲ್ಲಾಜೆ ಮತ್ತು ಕುಲ್ಕುಂದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆ.2 ರಂದು ನಡೆಸಲಾಯಿತು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿಮಲಾ ರಂಗಯ್ಯರವರ ಅಧ್ಯಕ್ಷತೆ ಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು  ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ ಸ್ಕಂದರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು .

ಈ ಸಮಾರಂಭದಲ್ಲಿ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ನೆರವೇರಿಸಿ ಮಾತನಾಡುತ್ತ, ಕಾರ್ಯಕ್ರಮವನ್ನು ಸಂಭ್ರಮಿಸುತ್ತಿರುವ ಈ ಪದಗ್ರಹಣ ಸಮಾರಂಭದ ಹಿಂದಿರುವ ಆಶಯ ಮತ್ತು ಶಕ್ತಿ ನಿಜಕ್ಕೂ ಅಪಾರವಾದದು. ಪರಮಾಪೂಜ್ಯ ಡಾ | ಡಿ. ವೀರೇಂದ್ರ ಹೆಗ್ಗಡೆಯವರಿಂದ ಆರಂಭವಾದ ಈ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕೋಟ್ಯಂತರ ಗ್ರಾಮೀಣ ಕುಟುಂಬಗಳ ಬದುಕಿಗೆ ಬೆಳಕಾಗಿದೆ. ಪ್ರಗತಿ ಬಂಧು ಎಂಬುದು ಶ್ರಮದಾನ ಮತ್ತು ಪರಸ್ಪರ ಸಹಕಾರದ ಮೂಲಕ ಕೃಷಿಕರ ಶ್ರಮವನ್ನು ಹಸನುಗೊಳಿಸಿದ ಅಪೂರ್ವ ಮಾದರಿಯಾಗಿದೆ. ಸಣ್ಣ ಉಳಿತಾಯದಿಂದ ತೊಡಗಿ ಇಂದಿನ ಜ್ಞಾನ ವಿಕಾಸದವರೆಗೆ ಗ್ರಾಮೀಣ ಮಹಿಳೆಯಾರಿಗೆ ಆತ್ಮವಿಶ್ವಾಸ ಹಾಗೂ ಆರ್ಥಿಕ ಭದ್ರತೆಯನ್ನು ನೀಡಿದೆ. ಗ್ರಾಮ ಮಟ್ಟದ ಸ್ವಸಹಾಯ ಸಂಘಗಳು ಒಕ್ಕೂಟಗಳಾಗಿ ರೂಪುಗೊಂಡು ಇಂದು ನಾಯಕತ್ವ ಬೆಳೆಸುವ ದೊಡ್ಡ ವೇದಿಕೆಯಾಗಿ ರೂಪುಗೊಂಡಿದೆ. ಇಂತಹ ಪವಿತ್ರ ಸಂಸ್ಥೆಯಲ್ಲಿ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ಜವಾಬ್ದಾರಿಯುತ್ತವಾಗಿ ಮುಂದುವರಿಸಿ ಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಸುಬ್ರಹ್ಮಣ್ಯ ವಲಯದ ತಾಲೂಕು ಭಜನೋತ್ಸವ ಸಮಿತಿ 2026 ರ ಅಧ್ಯಕ್ಷರಾದ ಡಾ | ರವಿ ಕಕ್ಕೆಪದವುರವರು, ಸುಬ್ರಹ್ಮಣ್ಯ ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಸತೀಶ್ ಟಿ ಎನ್ ರವರು, ಸುಬ್ರಹ್ಮಣ್ಯ ವಲಯದ ಭಜನಾ ಪರಿಷತ್ ನ ವಲಯ ಅಧ್ಯಕ್ಷರಾದ ಚಂದ್ರಶೇಖರ ಕೊಂದಳರವರು, ಸುಬ್ರಹ್ಮಣ್ಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ದಿನೇಶ್ ರವರು, ಕಲ್ಲಾಜೆ ಒಕ್ಕೂಟದ ಅಧ್ಯಕ್ಷರಾದ ಮೋನಪ್ಪ ಗೌಡರವರು, ಕುಲ್ಕುಂದ ಒಕ್ಕೂಟದ ಅಧ್ಯಕ್ಷರಾದ ಹರಿಪ್ರಸಾದ್ ರವರು, ಸುಬ್ರಹ್ಮಣ್ಯ ಒಕ್ಕೂಟದ ನೂತನ ಅಧ್ಯಕ್ಷರಾದ ಶ್ರೀಮತಿ ರತ್ನಾವತಿರವರು, ಕುಲ್ಕುಂದ ಒಕ್ಕೂಟದ ನೂತನ ಒಕ್ಕೂಟದ ಅಧ್ಯಕ್ಷರಾದ ರವಿಚಂದ್ರರವರು ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಕುಲ್ಕುಂದ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಹರಿಣಾಕ್ಷಿರವರು ಸಾಧನೆಯ ವರದಿ ಮಂಡನೆ ಮಾಡಿದರು. ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರವನ್ನು ಮತ್ತು ನೂತನ ಒಕ್ಕೂಟದ ಕಾರ್ಯದರ್ಶಿಗಳಿಗೆ ದಾಖಲಾತಿ ಹಸ್ತಾಂತರ ಮಾಡಲಾಯಿತು. ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರನ್ನು, ವಲಯದ ಭಜನಾ ಪರಿಷತ್ ನ ಪದಾಧಿಕಾರಿಗಳನ್ನು, ನವಜೀವನ ಸಮಿತಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳು, ನೂತನ ಪದಾಧಿಕಾರಿಗಳು, ಸುಬ್ರಹ್ಮಣ್ಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಶೈಲಜಾರವರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಎಲ್ಲಾ ಸದಸ್ಯರುಗಳು, ನವಜೀವನ ಸಮಿತಿಯ ಸದಸ್ಯರುಗಳು, ಯೋಜನೆಯ ಎಲ್ಲಾ ಹಿತೈಷಿ ಬಂಧುಗಳು ಭಾಗವಹಿಸಿದರು.

ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿದರು, ಶ್ರದ್ದಾ ಸಂಘದ ಸದಸ್ಯರಾದ ಶ್ರೀಮತಿ ಜಯಶ್ರೀರವರು ಧನ್ಯವಾದವಿತ್ತರು. ಸುಬ್ರಹ್ಮಣ್ಯ ಒಕ್ಕೂಟದ ನಿಕಟ ಪೂರ್ವ ಉಪಾಧ್ಯಕ್ಷರಾದ ರಾಮಚಂದ್ರರವರು ಕಾರ್ಯಕ್ರಮ ನಿರೂಪಿಸಿದರು.

]]>
71983
ಸುಬ್ರಹ್ಮಣ್ಯ: ಗ್ರಾಮಸ್ಥರಿಂದ ಕಲ್ಲಾಜೆ – ಏನೆಕಲ್ಲು ರಸ್ತೆ ದುರಸ್ತಿ https://sullia.samagrasamachara.com/2026/02/26/news-one-295/ Thu, 26 Feb 2026 12:59:08 +0000 https://sullia.samagrasamachara.com/?p=71851 ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಜೆ ಇಂದ ಏನೇಕಲ್ಲು ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ಹಾಳಾಗುತ್ತಿದ್ದು, ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಭಾರೀ ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಗುಂಡಿಗಳು ಮತ್ತು ಕೆಸರು ತುಂಬಿಕೊಂಡ ಪರಿಣಾಮ ಸ್ಥಳೀಯರು ಸಂಕಷ್ಟಕ್ಕೆ ಒಳಗಾಗಿದ್ದರು.

ಈ ಸಮಸ್ಯೆ ಕುರಿತು ಗ್ರಾಮಸ್ಥರು ಹಲವು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಆರಂಭದಲ್ಲಿ ಯಾವುದೇ ಸ್ಪಂದನೆ ದೊರಕಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ರಸ್ತೆ ಮಧ್ಯೆ ಬಾಳೆ ಗಿಡ ನೆಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಪಂಚಾಯಿತಿಗೆ ಸವಾಲು ಹಾಕಿದರು.

ಗ್ರಾಮಸ್ಥರ ಈ ಕ್ರಮಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ರಸ್ತೆ ದುರಸ್ತಿ ಕಾರ್ಯವನ್ನು ಆರಂಭಿಸಿದರು. ಇದರಿಂದಾಗಿ ಸ್ಥಳೀಯರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

 ಈ ಕುರಿತು ಗ್ರಾಮಸ್ಥರು ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದ್ದಾರೆ.

ದಾಮೋದರ ಮರಕತ, ಪ್ರಕಾಶ್ ನೇರಳಗದ್ದೆ,ಶೇಖರ ನೇರಳಗದ್ದೆ, ನಿತಿನ್ ಮಾಣಿಬೈಲು, ಧರ್ಮಪಾಲ ಮರಕತ ಸರಸ್ವತಿನೇರಳಗದ್ದೆ,  ರಾಮಕೃಷ್ಣನೇರಳಗದ್ದೆ,  ಧನುಷ್ ಮರಕತ,

ವರದಿ :ಚೇತನ್ ಮಾಣಿಬೈಲು 

9483964639

]]>
71851
ಪಂಜ: ಇಂದು ಫೆ.7 ಶ್ರೀ ಉಳ್ಳಾಕುಲು ಹಾಗೂ ಶ್ರೀ ಕಾಚುಕುಜುಂಬ ದೈವಗಳ ನೇಮೋತ್ಸವ https://sullia.samagrasamachara.com/2026/02/07/news-one-291/ Sat, 07 Feb 2026 11:16:43 +0000 https://sullia.samagrasamachara.com/?p=71813 ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವ ನಿನ್ನೆ ಫೆ.6 ರಂದು ನಡೆಯಿತು. ಇಂದು ರಾತ್ರಿ ಎರಡು ತಿಂಗಳ ಹಿಂದೆ ಪುನರ್ ಪ್ರತಿಷ್ಠೆ ಗೊಂಡ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟ ಶ್ರೀ ಕಾಚುಕುಜುಂಬ ದೈವದ ನೇಮೋತ್ಸವವು ರಾತ್ರಿ 8 ಗಂಟೆಗೆ ಸರಿಯಾಗಿ ಪಂಬೆತ್ತಾಡಿ ಗ್ರಾಮದ ಮೂಲಸ್ಥಾನ ಗರಡಿಬೈಲಿನಲ್ಲಿ  ನಡೆಯಲಿದೆ.

ಎಲ್ಲಾ ಭಕ್ತಾಧಿಮಾನಿಗಳು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಬೇಕಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಡಾ. ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.

]]>
71813
ಪಂಜ: ಗ್ರಾ.ಪಂ ತೆರಿಗೆ ಹಣ ದುರುಪಯೋಗ ಪ್ರಕರಣ| ಪಿಡಿಒ, ಕಾರ್ಯದರ್ಶಿ ಸಸ್ಪೆಂಡ್ https://sullia.samagrasamachara.com/2026/02/05/news-one-289/ Thu, 05 Feb 2026 12:06:00 +0000 https://sullia.samagrasamachara.com/?p=71808 ಪಂಜ: ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಸಂಗ್ರಹವಾದ ತೆರಿಗೆಯನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಗ್ರಾಮ ಪಂಚಾಯತ್ ಪಿ.ಡಿ.ಒ. ಜಯಂತ್ ಹಾಗೂ ಪ್ರಭಾರ ಕಾರ್ಯದರ್ಶಿ ಸೀತಾರಾಮರವರನ್ನು ಸೇವೆಯಿಂದ ಅಮಾನತುಗೊಳಿಸಿ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆಯವರು ಆದೇಶ ಮಾಡಿದ್ದಾರೆ.

ಪಂಜ ಗ್ರಾ.ಪಂ.ನಲ್ಲಿ ಅಲ್ಲಿನ ಸಿಬ್ಬಂದಿ ಬಾಬು ಎಂಬವರು 13 ಲಕ್ಷ ರೂ.ಗಳಿಗಿಂತ ಹೆಚ್ಚು ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಗ್ರಾ.ಪಂ. ಆಡಳಿತ ಮಂಡಳಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೋಲೀಸ್ ದೂರು ನೀಡಿ ಪ್ರಕರಣ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿ ದಲಿತ ದೌರ್ಜನ್ಯದ ಆರೋಪಗಳೆಲ್ಲ ನಡೆದು, ಪಂಜ ಪಂಚಾಯತ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯೂ ನಡೆದಿತ್ತು.

ಇಷ್ಟೊಂದು ತೆರಿಗೆ ಹಣ ಒಂದು ತಿಂಗಳಲ್ಲಿ ದುರುಪಯೋಗ ಮಾಡಲು ಸಾಧ್ಯವಿಲ್ಲವಾದುದರಿಂದ ಪಿ.ಡಿ.ಒ., ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯೂ ಕಾರಣವೆಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಇದೀಗ ಪಂಚಾಯತ್ ಪಿ.ಡಿ.ಒ. ಮತ್ತು ಪ್ರಭಾರ ಕಾರ್ಯದರ್ಶಿಯವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಜಿ.ಪಂ. ಸಿ.ಇ.ಒ. ಅಮಾನತು ಮಾಡಿದ್ದಾರೆ.

]]>
71808
ಪಂಜ ಸೀಮೆಯ ದೇವಳದಲ್ಲಿ ವರ್ಷವಾಧಿ ಜಾತ್ರೋತ್ಸವ ಪ್ರಯುಕ್ತ ಭಜನಾ ಸಂಕೀರ್ತನೆ ಆರಂಭ https://sullia.samagrasamachara.com/2026/02/02/news-one-288/ Mon, 02 Feb 2026 07:35:18 +0000 https://sullia.samagrasamachara.com/?p=71799 ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ  ವರ್ಷಾವಧಿ  ಜಾತ್ರೋತ್ಸವ ಜ. 24 ರಿಂದ ಫೆ. 9ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ  ನಡೆಯಲಿದೆ.

 ಫೆ. 1ರಂದು ಸಂಜೆ ಭಜನಾ ಸಂಕೀರ್ತನೆಗೆ ದೀಪ ಪ್ರಜ್ವಲನೆ ನಡೆಯಿತು.ದೇವಳದಲ್ಲಿ ಪ್ರಾರ್ಥನೆ ನಡೆದು ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರು ರವರು ದೀಪ ಪ್ರಜ್ವಲನೆ ಗೊಳಿಸಿದರು. 

ಭಜನಾ ಸಂಕೀರ್ತನೆ ಸಂಚಾಲಕ ಮಹಾಲಿಂಗ ಸಂಪ, ಭಕ್ತಾದಿಗಳು ಉಪಸ್ಥಿತರಿದ್ದರು. ಬಳಿಕ ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ವನಿತಾ ಸಮಾಜ ಪಂಜ ರವರಿಂದ ಭಜನಾ ಸಂಕೀರ್ತನೆ ಜರುಗಿತು. ಫೆ. 7 ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆಯು ದೇವಳದಲ್ಲಿ ಜರುಗಲಿದೆ.

]]>
71799
ಸುಬ್ರಹ್ಮಣ್ಯ: ನೋಟೀಸ್ ನೀಡಿದ ಬೆನ್ನಲ್ಲೇ 2.67 ಕೋಟಿ ತೆರಿಗೆ ಪಾವತಿಸಿದ ಕುಕ್ಕೆ ಆಡಳಿತ ಮಂಡಳಿ https://sullia.samagrasamachara.com/2025/12/23/kukke-subramanya-temple-news/ Tue, 23 Dec 2025 02:55:21 +0000 https://sullia.samagrasamachara.com/?p=71733 ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಬಾಕಿಯಾಗಿದ್ದ ರೂ. 2 ಕೋಟಿ 67 ಲಕ್ಷ ಆಸ್ತಿ ತೆರಿಗೆಯನ್ನು ಇಂದು ಪಾವತಿಸಲಾಗಿದೆ ಎಂದು ವರದಿಯಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಸತಿಗೃಹಗಳ ಆಸ್ತಿ ತೆರಿಗೆ ದೀರ್ಘಕಾಲ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ, ವಸತಿಗೃಹ ಜಪ್ತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್‌ ನೋಟಿಸ್‌ ಜಾರಿ ಮಾಡಿತ್ತು.

ಈ ನೋಟಿಸ್‌ ನೀಡಿದ ಬಳಿಕವೇ ದೇವಸ್ಥಾನ ಆಡಳಿತದಿಂದ ಬಾಕಿ ತೆರಿಗೆ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಶ್ಲೇಷ ವಸತಿಗೃಹಕ್ಕೆ ಸಂಬಂಧಿಸಿದಂತೆ ರೂ. 1 ಕೋಟಿ 23 ಲಕ್ಷ ಹಾಗೂ ದೇವಸ್ಥಾನಕ್ಕೆ ಸೇರಿದ ಇತರೆ ಕೆಲವು ಕಟ್ಟಡಗಳ ರೂ. 1 ಕೋಟಿ 44 ಲಕ್ಷ ಆಸ್ತಿ ತೆರಿಗೆ ಬಾಕಿಯನ್ನು ಪಾವತಿಸಲಾಗಿದೆ. ಈ ಮೂಲಕ ಒಟ್ಟು ರೂ. 2 ಕೋಟಿ 67 ಲಕ್ಷ ತೆರಿಗೆ ಮೊತ್ತ ಗ್ರಾಮ ಪಂಚಾಯತ್‌ಗೆ ಸಂದಿದೆ. ಈ ಬೆಳವಣಿಗೆಗೆ ಕಡಬ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತ ಸಂತಸ ವ್ಯಕ್ತಪಡಿಸಿದ್ದು, ಬಾಕಿ ತೆರಿಗೆ ಪಾವತಿಸಿದಕ್ಕಾಗಿ ದೇವಸ್ಥಾನ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ಆದಾಯ ₹155.95 ಕೋಟಿ ಆಗಿತ್ತು. ಈ ಆದಾಯವು 2023-24ನೇ ಸಾಲಿಗೆ ಹೋಲಿಸಿದರೆ 9.94 ಕೋಟಿ ರೂ. ಹೆಚ್ಚಾಗಿದ್ದು, ದೇವಸ್ಥಾನವು ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ದೇವಸ್ಥಾನದ ಒಟ್ಟು ಖರ್ಚು 79.82 ಕೋಟಿ ರೂ. ಆಗಿತ್ತು. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಬರುವ ಈ ದೇಗುಲವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಈ ಆದಾಯ ಬಂದಿದೆ.

]]>
71733
ಕಡಬ: ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದ ಆರೋಪ| ಹೆಡ್ ಕಾನ್ಸ್‌ಟೇಬಲ್ ನ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು https://sullia.samagrasamachara.com/2025/12/05/news-one-278/ Fri, 05 Dec 2025 03:02:39 +0000 https://sullia.samagrasamachara.com/?p=71696 ಸಮಗ್ರ ನ್ಯೂಸ್: ತಡರಾತ್ರಿ ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದ ಕಡಬ ಠಾಣಾ ಹೆಡ್‌ಕಾನ್‌ಸ್ಟೇಬಲ್‌ನನ್ನು ಊರವರು ಹಿಡಿದಿದ್ದು, ಈ ವೇಳೆ ಸ್ಥಳದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಸದಸ್ಯರೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಎಂಬಲ್ಲಿ ಬುಧವಾರ ನಡೆದಿದೆ.

ಕಡಬ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಾಜು ನಾಯ್ಕ್ ಆರೋಪಿ. ಈತ ತಡರಾತ್ರಿ ಕೊಯಿಲ ನಿವಾಸಿ ಹರೀಶ್ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಗೈದಿದ್ದು, ಈ ವೇಳೆ ಮನೆ ಮಂದಿ ಹಿಡಿದಿದ್ದಾರೆ ಎನ್ನಲಾಗಿದೆ.

ಸ್ಥಳದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚೇತನ್ ಎಂಬವರಿಗೆ ಹಲ್ಲೆಗೈದಿದ್ದಾರೆ. ಈ ಬಗ್ಗೆ ಕೊಯಿಲ ನಿವಾಸಿ ಬಾಬು ಗೌಡ ಎಂಬವರ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ರಾಜು ನಾಯ್ಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

]]>
71696
ಸುಬ್ರಹ್ಮಣ್ಯ: ಭಕ್ತರ ಜೊತೆ ಆಟವಾಡುತ್ತಿದ್ದಾಗ ಅಡ್ಡ ಬಂದ ಸಿಬ್ಬಂದಿಯನ್ನು ಸೊಂಡಿಲಿನಿಂದ ತಳ್ಳಿದ ಯಶಸ್ವಿನಿ https://sullia.samagrasamachara.com/2025/12/04/news-one-277/ Thu, 04 Dec 2025 07:30:06 +0000 https://sullia.samagrasamachara.com/?p=71693 ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇಗುಲದ ಆನೆ ಯಶಸ್ವಿನಿಯು ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದು ಕೆಲ ಹೊತ್ತು ಆತಂಕ ಸೃಷ್ಟಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ನೀರು ಬಂಡಿ ಉತ್ಸವದ ವೇಳೆ ಈ ಘಟನೆ ನಡೆದಿದೆ.

ಭಕ್ತರೊಂದಿಗೆ ಬೆರೆಯುತ್ತ ಆಟವಾಡುತ್ತಿದ್ದ ಯಶಸ್ವಿನಿ ಆನೆ ಇದ್ದಕ್ಕಿದ್ದಂತೆ ಅಸಮಾಧಾನಗೊಂಡಿದ್ದು, ಅಡ್ಡ ಬಂದ ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಬದಿಗೆ ಎಸೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇನ್ನು ಘಟನೆ ನಡೆದ ಕೆಲ ಕ್ಷಣದಲ್ಲೇ ಯಶಸ್ವಿನಿ ಆನೆ ಶಾಂತವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ. ಮಕ್ಕಳು, ಭಕ್ತರು ಆನೆಗೆ ನೀರೆರಚಿದರೆ, ಆನೆ ಸೊಂಡಿಲಿನಿಂದ ಅವರತ್ತ ನೀರು ಚಿಮುಕಿಸಿದೆ. ಸಿಬ್ಬಂದಿಗೂ ಯಾವುದೇ ಗಾಯವಾಗಿಲ್ಲ.

]]>
71693
ಉದ್ಘಾಟನೆ ವೇಳೆ ಒಡೆಯದ ತೆಂಗಿನಕಾಯಿ| ಶಾಸಕಿ ಭಾಗೀರಥಿ ಮುರುಳ್ಯರ ವಿಡಿಯೋ ವೈರಲ್ https://sullia.samagrasamachara.com/2025/11/26/mla-bagheerathi-murulya-video/ Wed, 26 Nov 2025 07:00:03 +0000 https://sullia.samagrasamachara.com/?p=71684 ಸುಳ್ಯ: ನೂತನ ರಸ್ತೆಯೊಂದರ ಉದ್ಘಾಟನೆ ವೇಳೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಹೊಡೆದ ತೆಂಗಿನಕಾಯಿ ಒಡೆಯದೇ ಇರುವ ವಿಡಿಯೋವೊಂದು ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಘಟನೆ ಪಂಜ ಸಮೀಪದ ಕೂತ್ಕುಂಜ ಎಂಬಲ್ಲಿ ನಡೆದಿದೆ ಎನ್ನಲಾಗಿದ್ದು, ರಸ್ತೆ ಉದ್ಘಾಟನೆಗೆ ಶಾಸಕಿ ಭಾಗೀರಥಿ ಮುರುಳ್ಯರವರು ತೆರಳಿದ್ದರು. ಈ ವೇಳೆ ಪ್ರಾರ್ಥನೆ ಮಾಡಿ ಕಾಂಕ್ರೀಟ್ ರಸ್ತೆಯನ್ನು ತೆಂಗಿನಕಾಯಿ ಹೊಡೆದು ಉದ್ಘಾಟಿಸಲು ನಿರ್ಧರಿಸಲಾಗಿತ್ತು.

ಆದರೆ ಶಾಸಕಿಯವರು ಹೊಡೆದ ತೆಂಗಿನಕಾಯಿ ಒಡೆಯದೇ ಚಿಮ್ಮಿತ್ತು. ಮತ್ತೆ ಮತ್ತೆ ಪ್ರಯತ್ನಿಸಿದರೂ ತೆಂಗಿನಕಾಯಿ ಹೊಡೆಯದೇ ಇದ್ದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ.

]]>
71684
ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣಕ್ಕೆ ಜಿ.ಎಂ ಭೇಟಿ https://sullia.samagrasamachara.com/2025/11/18/railway-gm-visited-subramanya-road-station/ Tue, 18 Nov 2025 03:18:46 +0000 https://sullia.samagrasamachara.com/?p=71642 ಸುಬ್ರಹ್ಮಣ್ಯ: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಶರಣ್ ಮಾಥುರ್ ಅವರು ಭೇಟಿ ನೀಡಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಬಳಕೆದಾರರ ಅಹವಾಲು ಆಲಿಸಿದರು.

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ ಪ್ರಯಾಣಿಕ ಸೌಲಭ್ಯಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಸೇವಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಅಂಶಗಳನ್ನು ಅವಲೋಕಿಸಿದರು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಸಕಲೇಶಪುರ ಘಾಟ್ ಸೆಕ್ಷನ್‌ನ ವಿದ್ಯುದ್ದೀಕರಣ ಕಾರ್ಯಗಳನ್ನೂ ಪರಿಶೀಲಿಸಿದರು. ಹೊಸದಾಗಿ ವಿದ್ಯುದೀಕೃತಗೊಳ್ಳುತ್ತಿರುವ ಭಾಗದ ಸಿದ್ಧತೆ ಹಾಗೂ ಭದ್ರತಾ ಮಾನದಂಡಗಳನ್ನು ಪರಿಶೀಲಿಸಿದರು. ಜತೆಗೆ ಸುಬ್ರಹ್ಮಣ್ಯ ರಸ್ತೆ ಮತ್ತು ಹಾಸನ ನಡುವಿನ ವಿಭಾಗದಲ್ಲಿ ವಿಂಡೋ ಟ್ರೈಯಾಂಗಲ್ ಪರಿಶೀಲನೆ ನಡೆಸಲಾಗಿದ್ದು, ರೈಲ್ವೆ ಹಳಿಗಳ ಸ್ಥಿತಿ, ಸಿಗ್ನಲ್ ವ್ಯವಸ್ಥೆಗಳು ಹಾಗೂ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರಕ್ಕೆ ಅಗತ್ಯವಿರುವ ಇತರೆ ಕಾರ್ಯಾಚರಣೆ ಅಂಶಗಳ ಮೌಲ್ಯಮಾಪನ ಮಾಡಿದರು.

ಮುಕುಲ್ ಸರನ್ ಮಾಥುರ್, ಮುದಿತ್ ಮಿತ್ತಲ್ ಅವರು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿ, ರೈಲ್ವೆ ಸೌಲಭ್ಯಗಳು, ಸೇವೆಗಳು ಮತ್ತು ಪ್ರಯಾಣ ಅನುಭವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಿ ಪ್ರಯಾಣಿಕರಿಂದ ದೊರೆತ ಸಲಹೆಗಳನ್ನು ದಾಖಲಿಸಿಕೊಂಡು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ -ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಪುತ್ತೂರು, ನೆಟ್ಟಣ ರೈಲು ಬಳಕೆದಾರರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಜಿ., ಮತ್ತಿತರರು ಉಪಸ್ಥಿತರಿದ್ದರು.

]]>
71642