ಕೊಡಗು – Sullia Samagra Samachara https://sullia.samagrasamachara.com Samagra Media Network Thu, 06 Aug 2026 10:27:15 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg ಕೊಡಗು – Sullia Samagra Samachara https://sullia.samagrasamachara.com 32 32 235500897 ಸಂಪಾಜೆ: ಕಾಡು ಪ್ರಾಣಿ ಹತ್ಯೆ ಮಾಡಿ ಮಾಂಸ ಮಾರಾಟ|ಇಬ್ಬರ ಬಂಧನ; ಓರ್ವ ಪರಾರಿ https://sullia.samagrasamachara.com/2026/08/06/news-one-324/ Thu, 06 Aug 2026 10:27:15 +0000 https://sullia.samagrasamachara.com/?p=72002 ಸಂಪಾಜೆ: ಇಲ್ಲಿನ ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ 2 ಮಂದಿ ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ನಡೆದಿದೆ.

ಆರೋಪಿಗಳನ್ನು ಗೌತಮ್ ಚೆಂಬು , ಶರತ್ ಪೆರಾಜೆ , ಹಾಗೂ ಯತಿನ್ ಕಾಡುಪಂಜ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಟ್ಟ ಚೆಂಬು ಅರಣ್ಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ . ಬಳಿಕ ಮಾಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೆ. ಎ 12 ರಿಜಿಸ್ಟ್ರೇಷನ್ ನ ಇಕೋ ಕಾರಿನ ಮೂಲಕ ಕಲ್ಲುಗುಂಡಿಯ ಕೈಪಡ್ಕ ಬಳಿ ತಲುಪಿದ್ದು, ಅರಣ್ಯ ಇಲಾಖೆಯ ಚುರುಕಿನ ದಾಳಿಯಿಂದ ಕಾರನ್ನು ಅಡ್ಡಗಟ್ಟಿ ಮಾಂಸ ,ಕೋವಿ ಹಾಗೂ ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮೂರನೇ ಆರೋಪಿ ಯತಿನ್ ಕಾಡುಪಂಜ ತಲೆಮರೆಸಿಕೊಂಡಿದ್ದು ಆರೋಪಿಗೆ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಎ.ಸಿ. ಎಫ್ ಸೆಂದಿಲ್ ಕುಮಾರ್ (IFS) ವಲಯ ಅರಣ್ಯಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಧಿಕಾರಿ ಶ್ರೀಮತಿ ಶ್ರೀರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ ಕೃಷ್ಣ ಹಾಗೂ ಸಂಪಾಜೆ ವಲಯದ ಗಸ್ತು ಅರಣ್ಯ ಪಾಲಕ ಯಮನೂರಿ ಕೊಳೂರು, ಕಾರ್ತಿಕ್. ಡಿ, ಸಿದ್ದೇಶ್, ನಾಗರಾಜ್. ಎಸ್, ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರಾದಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

]]>
72002
ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ 2 ಮಂದಿ ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ನಡೆದಿದೆ. https://sullia.samagrasamachara.com/2026/08/06/news-one-323/ Thu, 06 Aug 2026 10:00:47 +0000 https://sullia.samagrasamachara.com/?p=71997 ಆರೋಪಿಗಳನ್ನು ಗೌತಮ್ ಚೆಂಬು , ಶರತ್ ಪೆರಾಜೆ , ಹಾಗೂ ಯತಿನ್ ಕಾಡುಪಂಜ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಟ್ಟ ಚೆಂಬು ಅರಣ್ಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ . ಬಳಿಕ ಮಾಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೆ. ಎ 12 ರಿಜಿಸ್ಟ್ರೇಷನ್ ನ ಇಕೋ ಕಾರಿನ ಮೂಲಕ ಕಲ್ಲುಗುಂಡಿಯ ಕೈಪಡ್ಕ ಬಳಿ ತಲುಪಿದ್ದು, ಅರಣ್ಯ ಇಲಾಖೆಯ ಚುರುಕಿನ ದಾಳಿಯಿಂದ ಕಾರನ್ನು ಅಡ್ಡಗಟ್ಟಿ ಮಾಂಸ ,ಕೋವಿ ಹಾಗೂ ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮೂರನೇ ಆರೋಪಿ ಯತಿನ್ ಕಾಡುಪಂಜ ತಲೆಮರೆಸಿಕೊಂಡಿದ್ದು ಆರೋಪಿಗೆ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಎ.ಸಿ. ಎಫ್ ಸೆಂದಿಲ್ ಕುಮಾರ್ (IFS) ವಲಯ ಅರಣ್ಯಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಧಿಕಾರಿ ಶ್ರೀಮತಿ ಶ್ರೀರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ ಕೃಷ್ಣ ಹಾಗೂ ಸಂಪಾಜೆ ವಲಯದ ಗಸ್ತು ಅರಣ್ಯ ಪಾಲಕ ಯಮನೂರಿ ಕೊಳೂರು, ಕಾರ್ತಿಕ್. ಡಿ, ಸಿದ್ದೇಶ್, ನಾಗರಾಜ್. ಎಸ್, ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರಾದಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

]]>
71997
ಸಂಪಾಜೆ: ಸೊಸೆ ಮೇಲೆ ಮಾವನಿಂದ ದೈಹಿಕ ಕಿರುಕುಳ| ಪತಿ, ಮಾವನ ಮೇಲೆ ಕೇಸು ದಾಖಲು https://sullia.samagrasamachara.com/2026/02/06/news-one-290/ Fri, 06 Feb 2026 13:13:54 +0000 https://sullia.samagrasamachara.com/?p=71811 ಸಂಪಾಜೆ: ಸಂಪಾಜೆ ಕಲ್ಲುಗುಂಡಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ಇರುವ ಸಂದರ್ಭದಲ್ಲಿ, ತನ್ನ ಮಾವ ಅಕ್ರಮವಾಗಿ ಕೊಠಡಿ ಪ್ರವೇಶಿಸಿ ತನ್ನ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಪರಚಿ ಕಚ್ಚಿ ಗಾಯಗೊಳಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಸಾಹಿತ್ಯ ರೈ ಎಂಬವರು ಬಂಟ್ವಾಳ ಪೋಲೀಸರಿಗೆ ದೂರು ನೀಡಿದ್ದು , ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೋಲೀಸರು ಕೇಸನ್ನು ಸುಳ್ಯ ಪೋಲೀಸರಿಗೆ ಹಸ್ತಾಂತರಿಸಿರುವ ಘಟನೆ ವರದಿಯಾಗಿದೆ.

ಘಟನೆ ಫೆ.2ರಂದು ನಡೆದಿದ್ದು, ಮಾವ ನಿತ್ಯಾನಂದ ರೈ(58)ಯವರು ತನ್ನ ಮೇಲೆ ಹಲ್ಲೆ ನಡೆಸುವಾಗ ತಪ್ಪಿಸಿಕೊಂಡು ಹೊರಗೆ ಬಂದಾಗ, ಗಂಡ ಯಶಸ್ವಿ ರೈ (30) ಸಹ ತಂದೆಯ ಪರವಾಗಿ ವರ್ತಿಸಿ ನನಗೆ ಚಿಕಿತ್ಸೆ ಕೊಡಿಸಲು ನಿರಾಕರಿಸಿದ್ದಾರೆ ಎಂದು ಸಾಹಿತ್ಯ ರೈ (27)ಆರೋಪಿಸಿದ್ದಾರೆ.

ಘಟನೆ ನಡೆದ ಬಗ್ಗೆ ಸಾಹಿತ್ಯ ರೈಯವರು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿರುವ ತನ್ನ ಮನೆಗೆ ಫೋನ್ ಮಾಡಿದ ಬಳಿಕ ಅವರ ತಂದೆ-ತಾಯಿ ಕಲ್ಲುಗುಂಡಿಗೆ ಬಂದು ಅವರನ್ನು ಸಂಪಾಜೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆಂದು ತಿಳಿದುಬಂದಿದ್ದು, ಈ ಸಂಬಂಧ ಸಾಹಿತ್ಯ ರೈಯವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 85, 74, 115(2), 117(2), 351(2)
3(5) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಬಳಿಕ ಪ್ರಕರಣವನ್ನು ಸುಳ್ಯ ಪೋಲೀಸ್ ಠಾಣೆಗೆ ಹಸ್ತಾಂತರಿಸಿರುವುದಾಗಿ ತಿಳಿದುಬಂದಿದೆ.
ಸುಳ್ಯ ಪೋಲೀಸರು ಆರೋಪಿಯಾಗಿರುವ ಮಾವ ನಿತ್ಯಾನಂದ ರೈಯವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
ಉದ್ಯಮಿಯಾಗಿರುವ ನಿತ್ಯಾನಂದ ರೈಯವರು ತನ್ನ ಸೊಸೆಯ ಮೇಲೆ ಕೈ ಮಾಡಲು ಕಾರಣವೇನು ಮತ್ತು ಗಂಡ ಕೂಡ ತಂದೆಯ ಪರ ನಿಂತುದೇಕೆಂಬ ಬಗ್ಗೆ ಪೋಲೀಸರು ವಿಚಾರಣೆ ನಡೆಸತೊಡಗಿದ್ದಾರೆ.

]]>
71811
ಸಂಪಾಜೆ: ಅಕ್ರಮವಾಗಿ ಬೀಟಿ ಮರ ಸಾಗಾಟ ಪತ್ತೆ| ಆರೋಪಿಗಳ‌ ಸಹಿತ ಸೊತ್ತು ವಶ https://sullia.samagrasamachara.com/2026/01/16/sampaje-illegal-wood-transfer/ Fri, 16 Jan 2026 03:33:12 +0000 https://sullia.samagrasamachara.com/?p=71773 ಸಂಪಾಜೆ: ಇಲ್ಲಿನ ಚೆಕ್ ಪೋಸ್ಟ್ ನಲ್ಲಿ ಮಡಿಕೇರಿ ಕಡೆಯಿಂದ ಬರುವ ವಾಹವನ್ನು ತಪಾಸಣೆ ಮಾಡುತ್ತಿರುವ ಸಮಯದಲ್ಲಿ ಆಶೋಕ ಲಾಯಿಲಾಂಡ್ ಕಂಪೆನಿಯ ವಾಹನದಲ್ಲಿ (ನೋಂದಣಿ ಸಂಖ್ಯೆ:ಕೆ.ಎ ೧೩ ಎಎ ೦೭೬೯) ಅಕ್ರಮವಾಗಿ ಬೀಟಿ ಮರ ಸಾಗಾಟ ಪತ್ತೆಯಾಗಿದೆ.

ವಾಹನದ ಮೇಲ್ಬಾಗದಲ್ಲಿ ಟಾರ್ಪಲ್ ಹಾಕಿ ಭತ್ತದ ಹೊಟ್ಟು ಇರುವ ಚೀಲ ಹಾಕಿ ಅದರ ಅಡಿ ಭಾಗದಲ್ಲಿ ಬೀಟಿ ಮರಗಳ ೨೫ ತುಂಡುಗಳನ್ನು ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಆರೋಪಿಗಳನ್ನು ಅರಣ್ಯ ಇಲಾಖೆ ‌ಬಂಧಿಸಿದೆ. ಆರೋಪಿಗಳಾದ ವಾಹನ ಚಾಲಕ ಬಿ.ಎಂ ಸಜನ್ ನಾಪೋಕ್ಲು ಇವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತೋರ್ವ ಪ್ರಮುಖ ಆರೋಪಿ ಅಬ್ದುಲ್ ಅಬ್ದುಟ್ಟಿ, ಸಿದ್ದಾಪುರ ಗ್ರಾಮ, ವಿರಾಜಪೇಟೆ ತಾಲ್ಲೂಕು, ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಡಿಕೇರಿ ಪ್ರಾದೇಶಿಕ ವಿಭಾಗದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಸಂರಕ್ಷಣಾಧಿಕಾರಿಗಳು, ಮಡಿಕೇರಿ ಉಪ ವಿಭಾಗ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಯವರ ನೇತೃತ್ವದಲ್ಲಿ ಖಚಿತ ವರ್ತಮಾನದ ಮೇರೆಗೆ ಜ.15 ರಂದು ರಾತ್ರಿ ಸಂಪಾಜೆ ಅರಣ್ಯ ತನಿಖಾ ಠಾಣೆಯ ಉಪ ವಲಯ ಅರಣ್ಯಾಧಿಕಾರಿಯವರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಚರಣೆ ನಡೆಸಿದರು.

ವಲಯ ಅರಣ್ಯಾಧಿಕಾರಿ ಡಿನ್ನಿ ದೇಚಮ್ಮ, ಉಪ ವಲಯ ಅರಣ್ಯಾಧಿಕಾರಿ. ಸಂಧೀಪ್. ಗೌಡ ಗಸ್ತು ಅರಣ್ಯ ಪಾಲಕರಾದ ಕಾರ್ತಿಕ್.ಡಿ, ನಾಗರಾಜ್.ಎಸ್, ಸಿದ್ದರಾಮ ನಾಟಕರ್ ಮತ್ತು ಇಲಾಖಾ ವಾಹನ ಚಾಲಕ ಭುವನೇಶ್ವರ ತನಿಖಾ ಠಾಣೆಯ ಸಿಬ್ಬಂದಿಯಾದ ರಾಜೇಶ್ ಪಾಲ್ಗೊಂಡಿದ್ದರು.

]]>
71773
ಕಡಮಕಲ್ – ಗಾಳಿಬೀಡು ರಸ್ತೆ ಅಭಿವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ಅನುದಾನಕ್ಕೆ ಯತ್ನ – ಮಂಥರ್ ಗೌಡ https://sullia.samagrasamachara.com/2025/11/18/kadamakal-galibeedu-road-development/ Tue, 18 Nov 2025 07:56:44 +0000 https://sullia.samagrasamachara.com/?p=71645 ಸುಬ್ರಹ್ಮಣ್ಯ: ಮಡಿಕೇರಿ ಗಾಳಿಬೀಡು-ಕಡಮಕಲ್-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿ ಮತ್ತು ಕಡಮಕಲ್ ನಿವಾಸಿಗಳ ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ(ನ.14) ಮಡಿಕೇರಿ ಶಾಸಕ ಮಂತರ್‌ಗೌಡ ಕಡಮಕಲ್‌ನಲ್ಲಿ ಸಮಾಲೋಚನಾ ಸಭೆ ನಡೆಸಿದರು.

ಗುತ್ತಿಗಾರು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮದ ಮುಖಂಡರು, ಗ್ರಾಮಸ್ಥರು, ಮಡಿಕೇರಿ-ಗಾಳಿಬೀಡು, ಕಡಮಕಲ್- ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಅಗತ್ಯ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಬೇಕು ಎಂದು ಮನವಿ ಸಲ್ಲಿಸಿದರು.

ಬಳಿಕ ಮಂತರ್ ಗೌಡ ಮಾತನಾಡಿ, ಸ್ಥಳೀಯ ನಿವಾಸಿಗಳಿಗೆ ಹಕ್ಕುಪತ್ರ, ಕುಡಿಯುವ ನೀರು, ಮೊಬೈಲ್ ಟವರ್ ನಿರ್ಮಾಣ, ರಸ್ತೆ ಅಭಿವೃದ್ಧಿ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಡಿಕೇರಿ-ಗಾಳಿಬೀಡು-ಕಡಮಕಲ್-ಸಂಪರ್ಕ ರಸ್ತೆಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಮುಂದಿನ ಬಜೆಟ್‌ನಲ್ಲಿ ಅನುದಾನ ಇರಿಸಲಾಗುವುದು. ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಪ್ರವೀಣ್ ಮುಂಡೋಡಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆ.ಕೆ ಹರಿಪ್ರಸಾದ್, ಪುಷ್ಪ ಪೂನಾಚ್ಚ, ತೆಣ್ಣೀರ ಮೈನಾ, ಸ್ಥಳೀಯರಾದ ಭವಾನಿಶಂಕರ್ ಪಿಂಡಿಮನೆ, ಸೋಮಶೇಖರ್ ಕಡಮಕಲ್, ಗಣೇಶ್ ಭಟ್ ಇಡ್ಯಡ್ಕ, ಡ್ಯಾನಿ ಯಲದಾಳು, ಶೇಖರ್ ಅಂಬೆಕಲ್ಲು, ನರೇಂದ್ರ ಬಿಳಿಮಲೆ, ಗುರು ಚರಣ್ ಕೊಪ್ಪಡ್ಕ, ವೀಣಾನಂದ ಬಿಳಿಮಲೆ, ದಿನೇಶ್‌ ಕುಮಾರ್ ಮಡ್ತಿಲ, ಸತೀಶ್ ಕೊಮ್ಮೆಮನೆ, ಶರತ್ ಕಡಮಕಲ್, ರವಿಕುಮಾರ್ ಕಿರಿಭಾಗ, ಮಂಜುನಾಥ್ ಮಡ್ತಿಲ, ರವೀಂದ್ರ ರುದ್ರಪಾದ, ರಾಮಕೃಷ್ಣ ಹರಿಹರ, ದ ಕಮಲಾಕ್ಷ ಕೊಲ್ಲಮೊಗ್ರು,, ಪವನ್ ಕೋನಡ್ಕ, ಪರಮೇಶ್ವರ್ ಕೆಂಬಾರೆ, ರಂಜಿತ್ ಪೈಕ, ಪರಮೇಶ್ವರ್ ನಾಯ್ಕ ಚಣಿಲ ಉಪಸ್ಥಿತರಿದ್ದರು.

]]>
71645
ಸಂಪಾಜೆ: ಆನೆ ತುಳಿದು ಕೃಷಿಕ ಸಾವು https://sullia.samagrasamachara.com/2025/08/07/sampaje-wild-elephant-attack-one-killed/ Thu, 07 Aug 2025 03:16:39 +0000 https://sullia.samagrasamachara.com/?p=71349 ಸಂಪಾಜೆ: ಕೃಷಿ ತೋಟಕ್ಕೆ ಆನೆ ದಾಳಿ ನಡೆಸಿದ್ದು, ಈ ವೇಳೆ‌ ಪರಿಶೀಲಿಸಲು ತೆರಳಿದ್ದ ಕೃಷಿಕತೋರ್ವರನ್ನು ಆನೆ ತುಳಿದು ಮೃತಪಟ್ಟ ಘಟನೆ ಸಂಪಾಜೆ ಸಮೀಪದ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಆ.6ರ ರಾತ್ರಿ ವರದಿಯಾಗಿದೆ.

ದಬ್ಬಡ್ಕದ ಶಿವಪ್ಪ ರವರು ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಆ.06 ರಂದು ರಾತ್ರಿ ನಾಯಿ ಬೊಗಳುತ್ತಿದ್ದ ಕಾರಣ ತೋಟಕ್ಕೆ ಹೋದಾಗ ಆನೆ ಅವರನ್ನು ತುಳಿಯಿತು ಎನ್ನಲಾಗಿದೆ. ಕೂಡಲೇ ಅವರನ್ನು ಸಂಪಾಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಮೃತ ಪಟ್ಟರೆಂದು ತಿಳಿದು ಬಂದಿದೆ.

ಸ್ಥಳಕ್ಕೆ ಸಂಪಾಜೆ ವಲಯಾರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ‌ ಪರಿಶೀಲನೆ ನಡೆಸಿದೆ.‌ ಇತ್ತೀಚೆಗೆ ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು ಇದನ್ನು‌ ತಡೆಯಲು ಅರಣ್ಯ ಇಲಾಖೆಗೆ ಒತ್ತಾಯಿಸಲಾಗಿತ್ತು.

]]>
71349
ಕೊಯನಾಡು: ಕಾರು – ಟಿಪ್ಪರ್ ನಡುವೆ ಅಪಘಾತ| ಕಾರಿನಲ್ಲಿದ್ದ ನಾಲ್ವರೂ ಸಾವು https://sullia.samagrasamachara.com/2025/07/25/all-traveller-died-at-road-accident/ Fri, 25 Jul 2025 09:08:22 +0000 https://sullia.samagrasamachara.com/?p=71309 ಸಂಪಾಜೆ: ಇಲ್ಲಿನ ಕೊಯನಾಡು ಸಮೀಪದ ದೇವರಕೊಲ್ಲಿ ಬಳಿ ಸಂಭವಿಸಿದ ಕಾರು ಮತ್ತು ಟಿಪ್ಪರ್ ನಡುವಿನ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರೂ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ.

ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು (ಕೆಎ05ಎಂಎಫ್ 5555) ಮಾಣಿ – ಮೈಸೂರು ರಾ.ಹೆದ್ದಾರಿಯ ಕೊಯನಾಡು ಸಮೀಪದ ದೇವರಕೊಲ್ಲಿ ಬಳಿ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದಾಗಿ ಹೇಳಲಾಗಿದೆ.

ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.‌ಆದರೆ ಈ ನಡುವೆ ಅವರೂ ಕೂಡಾ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪ ಮೂಲದ ಕಾರು ಇದಾಗಿದ್ದು, ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಮೃತರೆಲ್ಲರೂ ಒಂದೇ ಊರಿನವರು ಎಂದು ಹೇಳಲಾಗಿದೆ.

]]>
71309
ಕಲ್ಲುಗುಂಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು https://sullia.samagrasamachara.com/2025/04/19/news-one-174/ Sat, 19 Apr 2025 16:30:13 +0000 https://sullia.samagrasamachara.com/?p=71113 ಸಂಪಾಜೆ: ಕಲ್ಲುಗುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತಿದ್ದ ವ್ಯಕ್ತಿಯೊಬ್ಬರು ಏ. 14 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರ ಸಂಬಂಧಿಕರು ಕೂಡಲೇ ಅವರನ್ನು ಸುಳ್ಳದ ಕೆವಿಜಿ ಆಸ್ಪತ್ರೆಗೆ ಕರೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಏ 18 ರಂದು ಅವರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ವ್ಯಕ್ತಿ ಧರ್ಮರಾಜ್ (45 ವರ್ಷ) ಎಂದು ತಿಳಿದುಬಂದಿದೆ. ಇವರು ಕಲ್ಲುಗುಂಡಿ ಭಾಗದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕ್ಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಕಳೆದ 20 ವರ್ಷಗಳಿಂದ ಇವರ ಪತ್ನಿ ಇಬ್ಬರು ಮಕ್ಕಳೊಂದಿಗೆ ಬೇರೆಡೆ ಇದ್ದರು. ಇದರಿಂದ ಮನನೊಂದು ಈ ಕೃತ್ಯವನ್ನು ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

]]>
71113
ಕೆಲಸಕ್ಕೆ‌ ಹೋದ ವೇಳೆ ಕಚ್ಚಿದ ನಾಯಿಮರಿ| ಮಹಿಳೆ ರೇಬಿಸ್ ನಿಂದ ಸಾವು https://sullia.samagrasamachara.com/2025/03/22/news-one-152/ Sat, 22 Mar 2025 14:19:05 +0000 https://sullia.samagrasamachara.com/?p=71001 ಸಂಪಾಜೆ: ತೋಟದ ಕೆಲಸಕ್ಕೆ ಹೋಗಿದ್ದ ಮಹಿಳೆಗೆ ನಾಯಿ ಕಚ್ಚಿದ್ದ ಪರಿಣಾಮ ರೇಬಿಸ್ ಕಾಯಿಲೆಯಿಂದ ಮಹಿಳೆ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದಿದೆ.

42 ವರ್ಷದ ಮಹಿಳೆ ರೇಬಿಸ್ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಹಿಳೆ ಮಾರ್ಚ್ 7ರಂದು ಅರಂತೋಡಿಯ ತೋಟದ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಬೀದಿಯಲ್ಲಿದ್ದ ನಾಯಿಮರಿ ಕಚ್ಚಿತ್ತು. ನಾಯಿ ಮರಿ ಎಂದು ಮಹಿಳೆ ನಿರ್ಲಕ್ಷ ಮಾಡಿದ್ದರು.

ಮಹಿಳೆಗೆ ಮಾರ್ಚ್ 17ರಂದು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅನಾರೋಗ್ಯಕ್ಕೀಡಾದ ಮಹಿಳೆ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ನೀರು ನೋಡಿದ ಮಹಿಳೆ ಏಕಾಏಕಿ ಕಿರುಚಾಡಲು ಆರಂಭಿಸಿದ್ದರು. ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದರು. ವೈದ್ಯರು ಸಮಾಧಾನದಿಂದ ಮಹಿಳೆಯನ್ನು ಪ್ರಶ್ನಿಸಿ ವಿಚಾರಿಸಿದ್ದಾರೆ. ಈ ವೇಳೆ ಕೆಲದಿನಗಳ ಹಿಂದೆ ನಾಯಿ ಕಚ್ಚಿದ್ದ ಬಗ್ಗೆ ಮಹಿಳೆ ಹೇಳಿದ್ದಾರೆ.

ಪರಿಸ್ಥಿತಿ ಗಂಭೀರತೆ ಅರಿತ ವೈದ್ಯರು ಮಹಿಳೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ವೆನಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ವೈದ್ಯಕೀಯ ವರದಿಯಲ್ಲಿ ಮಹಿಳೆಗೆ ರೇಬಿಸ್ ಸೋಂಕು ತಗುಲಿರುವುದು ದೃಢವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆ ಕುಟುಂಬದವರಿಗೆ, ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದವರಿಗೆ ರೇಬಿಸ್ ವಿರೋಧಿ ಲಸಿಕೆಗಳನ್ನು ನೀಡಿದ್ದಾರೆ.

ಮಹಿಳೆಗೆ ಕಚ್ಚಿದ್ದ ನಾಯಿಮರಿ ಇತರರಿಗೂ ಕಚ್ಚಿರುವ ಶಂಕೆ ವ್ಯಕ್ತವಾಗಿದೆ. ನಾಯಿ ಕಚ್ಚಿದರೆ ತಕ್ಷಣ ಆಸ್ಪತ್ರೆಗೆಗಳಿಗೆ ತೆರಳಿ ಲಸಿಕೆ ಪಡೆಯುವಂತೆ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

]]>
71001
ಸಂಪಾಜೆ: ಕೊಳೆತ ಸ್ಥಿತಿಯಲ್ಲಿ ಕಾಡಾನೆ ಕಳೆಬರ ಪತ್ತೆ https://sullia.samagrasamachara.com/2025/03/22/news-one-151/ Sat, 22 Mar 2025 13:58:58 +0000 https://sullia.samagrasamachara.com/?p=70998 ಸಂಪಾಜೆ: ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಬಳಿ ರಕ್ಷಿತಾರಣ್ಯದಲ್ಲಿ ಆನೆಯೊಂದು ಸತ್ತು ಕೊಳೆತ ಸ್ಥಿತಿಯಲ್ಲಿ ಮಾ.21ರಂದು ಪತ್ತೆಯಾಗಿದ್ದು, ಸಹಜವಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ವಯಸ್ಸಾಗಿರುವ ಆನೆಯಾಗಿದ್ದು ಬಂಡೆಕಲ್ಲಿನ ನಡುವೆ ಕಾಲು ಸಿಲುಕಿ ಸಾವು ಸಂಭವಿಸಿರಬಹುದು ಎನ್ನಲಾಗಿದೆ. ಮೂರು ನಾಲ್ಕು ದಿನಗಳ ಹಿಂದೆ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

]]>
70998