ಬೆಳ್ತಂಗಡಿ – Sullia Samagra Samachara https://sullia.samagrasamachara.com Samagra Media Network Wed, 21 Aug 2024 13:55:19 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg ಬೆಳ್ತಂಗಡಿ – Sullia Samagra Samachara https://sullia.samagrasamachara.com 32 32 235500897 ಶ್ರೀ ವೆಂಕಟರಮಣ ಸೊಸೈಟಿ ಕೊಕ್ಕಡ ಶಾಖೆ 4ನೇ ವರ್ಷಕ್ಕೆ ಪಾದಾರ್ಪಣೆ https://sullia.samagrasamachara.com/2024/08/21/news-1-7/ Wed, 21 Aug 2024 13:55:19 +0000 https://sullia.samagrasamachara.com/?p=69680 ಕೊಕ್ಕಡ: ಇಲ್ಲಿನ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖೆಯು ತನ್ನ ಯಶಸ್ವಿ ಮೂರು ವರ್ಷಗಳನ್ನು ಪೂರೈಸಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಆ ಪ್ರಯುಕ್ತ ಶಾಖೆಯಲ್ಲಿ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆ ಆ.21ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನ‌ರಾಂ ಸುಳ್ಳಿ, ಮಾಜಿ ಉಪಾಧ್ಯಕ್ಷ ಹಾಗೂ ನಿರ್ದೇಶಕ ಪಿ.ಎಸ್. ಗಂಗಾಧರ, ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ ಹಾಗೂ ಸಂಘದ ಸದಸ್ಯರು, ಗ್ರಾಹಕರು ಭಾಗವಹಿಸಿ ಶುಭಹಾರೈಸಿದರು.

ಶಾಖಾ ವ್ಯವಸ್ಥಾಪಕ ಸುನಿಲ್ ಮುಂಡೋಡಿ, ಸಿಬ್ಬಂದಿಗಳಾದ ಮನೀಶ್, ವೇಣುಗೋಪಾಲ, ಕಿರಣ್ ಆಗಮಿಸಿದವರನ್ನು ಸ್ವಾಗತಿಸಿದರು.

]]>
69680
ಉಪ್ಪಿನಂಗಡಿ: ತುಂಬಿ ಹರಿಯುತ್ತಿದ್ದ ನೇತ್ರಾವತಿಯಲ್ಲಿ ಕೊಚ್ಚಿ ಬಂದ ದನ| ಗೋವನ್ನು ರಕ್ಷಣೆ ಮಾಡಿದ ವಿಕೋಪ ತಂಡ https://sullia.samagrasamachara.com/2024/07/27/news-1-3887/ https://sullia.samagrasamachara.com/2024/07/27/news-1-3887/#respond Sat, 27 Jul 2024 14:24:18 +0000 https://samagrasamachara.com/?p=69078 ಸಮಗ್ರ ನ್ಯೂಸ್: ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕದಳದ ಸಿಬ್ಬಂದಿಗಳು ಹಾಗೂ ಪ್ರವಾಹ ರಕ್ಷಣಾ ತಂಡ ದೋಣಿಯ ಮೂಲಕ ನದಿ ಮಧ್ಯಕ್ಕೆ ಹೋಗಿ ರಕ್ಷಣೆ ಮಾಡಿ ದಡಕ್ಕೆ ಕರೆತಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ರಭಸದಿಂದ ಹರಿಯುತ್ತಿದ್ದ ಈ ನದಿಯು ಮಧ್ಯದಲ್ಲಿ ದನವೊಂದು ತೇಲಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಹಳೆಗೇಟು ಸಮೀಪದ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕ ಚಂದಪ್ಪ ಅವರು ಕೂಡಲೇ ಪ್ರವಾಹ ರಕ್ಷಣಾ ತಂಡಕ್ಕೆ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ತಂಡ ತಮ್ಮಲ್ಲಿರುವ ರಬ್ಬರ್ ದೋಣಿಯ ಮೂಲಕ ತೆರಳಿ ದನದ ಮೂಗುದಾರಕ್ಕೆ ಹಗ್ಗವನ್ನು ಕಟ್ಟಿ ದಡಕ್ಕೆ ಕರೆತಂದು ಕಟ್ಟಿ ಹಾಕಿದರು. ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದ ಈ ರಕ್ಷಣಾ ಕಾರ್ಯಾಚರಣ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ, ಚರಣ್, ಸುದರ್ಶನ್, ಹಾರೀಸ್, ಸಮದ್ ಭಾಗವಹಿಸಿದ್ದರು. ಇನ್ನು ನದಿ ಮಧ್ಯದಿಂದ ದನವನ್ನು ರಕ್ಷಿಸಿ ದಡಕ್ಕೆ ಕರೆ ತಂದ ಪ್ರವಾಹ ರಕ್ಷಣಾ ತಂಡದ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

]]>
https://sullia.samagrasamachara.com/2024/07/27/news-1-3887/feed/ 0 69078
ಉಜಿರೆ: ಬೊಲೆರೋ – ಬೈಕ್ ನಡುವೆ ಭೀಕರ ಅಪಘಾತ| ಗಾಯಾಳು ಬಾಲಕಿ ಚಿಕಿತ್ಸೆ ಫಲಿಸದೇ ಸಾವು https://sullia.samagrasamachara.com/2024/07/27/news-1-3886/ https://sullia.samagrasamachara.com/2024/07/27/news-1-3886/#respond Sat, 27 Jul 2024 13:35:33 +0000 https://samagrasamachara.com/?p=69076 ಸಮಗ್ರ ನ್ಯೂಸ್: ಉಜಿರೆಯಿಂದ ಮುಂಡಾಜೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಸೀಟು ಕಾಡು ಎಂಬಲ್ಲಿ ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಬಾಲಕಿಯ ತಂದೆ ಗಂಭೀರ ಗಾಯಗೊಂಡ ಘಟನೆ ಜು.27ರಂದು ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಗೋಖಲೆಯವರು ಮಗಳಾದ ಅನರ್ಘ್ಯ(13)ಳನ್ನು ಕೂರಿಸಿಕೊಂಡು ಮುಂಡಾಜೆ ಕಡೆ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಬೊಲೆರೋ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನು ತನ್ನ ವಾಹನದಲ್ಲಿ ನೇರವಾಗಿ ಹಿಂಬದಿಯ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ವಾಹನ ಬೈಕನ್ನು ಸುಮಾರು 30 ಮೀಟರಿಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದೆ.

ಈ ವೇಳೆ ಬೈಕ್‌ನಲ್ಲಿದ್ದ ಅನರ್ಘ್ಯಳ ತಲೆ ಮೇಲೆಯೇ ಬೊಲೆರೋ ವಾಹನ ಹರಿದು ಹೋದ ಕಾರಣ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬಾಲಕಿ ಉಜಿರೆ ಎಸ್.ಡಿ.ಎಮ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಎನ್ನಲಾಗಿದೆ.

ಅಪಘಾತವೆಸಗಿದ ನೆರಿಯದ ಬೊಲೆರೋ ಚಾಲಕ ಅಲ್ಲಿಂದ ಪರಾರಿಯಾಗಲೆತ್ನಿಸಿದ್ದು, ಸೀಟು ಕಾಡು ಬಸ್ ಸ್ಟ್ಯಾಂಡ್ ಬಳಿಯ ಒಳಗಿನ ರಸ್ತೆಯಲ್ಲಿ ಸಾಗಿದ್ದು, ಅಲ್ಲಿ ಪರಾರಿಯಾಗಲು ದಾರಿ ಸಿಗದ ಕಾರಣ ಹಿಂದಿರುಗಿ ಬರುವ ವೇಳೆ ಸ್ಥಳೀಯರು ವಾಹನವನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಬೊಲೆರೋವಾಹದಲ್ಲಿದ್ದ ವಾಹನದ ಮಾಲೀಕ ನೆರಿಯದ ಪ್ರಶಾಂತ್ ಸೇರಿ ಮೂವರನ್ನು ಸಾರ್ವಜನಿಕರು ಸಿನಿಮಿಯ ಸೈಲಿಯಲ್ಲಿ ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.

]]>
https://sullia.samagrasamachara.com/2024/07/27/news-1-3886/feed/ 0 69076
ವಾರ ಕಳೆದರೂ ತಗ್ಗದ ಕುಮಾರಧಾರ, ನೇತ್ರಾವತಿ| ಧರ್ಮಸ್ಥಳ, ಕುಕ್ಕೆಯಲ್ಲಿ ಮುಳುಗಡೆ ಸ್ಥಿತಿಯಲ್ಲೇ ಇರುವ ಸ್ನಾನಘಟ್ಟ https://sullia.samagrasamachara.com/2024/07/26/news-1-3874/ https://sullia.samagrasamachara.com/2024/07/26/news-1-3874/#respond Fri, 26 Jul 2024 13:23:04 +0000 https://samagrasamachara.com/?p=69040 ಸಮಗ್ರ ನ್ಯೂಸ್: ಕಳೆದ ಹಲವು ದಿನಗಳಿಂದ ಕರಾವಳಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಕೊಂಚ ವಿರಾಮ ನೀಡಿದ್ದರೂ ಘಟ್ಟ ಪ್ರದೇಶಗಳಲ್ಲಿ ಮಳೆ‌ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಯಾವುದೇ ಇಳಿಕೆಯಾಗಿಲ್ಲ.

ಬಂಟ್ವಾಳ ತಾಲೂಕಿನ ಕೆಲವೊಂದು ತಗ್ಗು ಪ್ರದೇಶ ನದಿ ನೀರಿನಿಂದ ಜಲಾವೃತಗೊಂಡಿದೆ. ನೆರೆಯ ಭೀತಿಯ ಹಿನ್ನೆಲೆ ಸ್ಥಳೀಯ ನಿವಾಸಿಗಳನ್ನು ಕೂಡ ಸ್ಥಳಾಂತರಿಸಲಾಗಿದೆ .

ಈ ಬಾರಿಯ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಹಲವು ಸಾವುನೋವು ಸಂಭವಿಸಿದೆ. ಕರಾವಳಿಯಲ್ಲಿ ಮಳೆ ಆಗುತ್ತಿಲ್ಲವಾದ್ರೂ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಇದರಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಧರ್ಮಸ್ಥಳದಲ್ಲಿ ಹರಿಯುತ್ತಿರುವ ನೇತ್ರಾವತಿ ಸ್ನಾನಘಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ಸ್ನಾನಘಟ್ಟದಲ್ಲಿ ಅಪಾಯದ ಮಟ್ಟದಲ್ಲಿರುವ ನೇತ್ರಾವತಿಯ ಹರಿವಿನಿಂದ ಹೆಚ್ಚಿನ ಭದ್ರತೆ ಮಾಡಲಾಗಿದೆ. ಪ್ರವಾಸಿಗರು ಇಲ್ಲಿ ತೀರ್ಥ ಸ್ನಾನ ಮಾಡಲು ನದಿಗೆ ಇಳಿಯದಂತೆ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ.

ಇತ್ತ ಕುಕ್ಕೆ ‌ಸುಬ್ರಹ್ಮಣ್ಯದಲ್ಲೂ ಕುಮಾರಧಾರ ಸ್ನಾನಘಟ್ಟ ಕಳೆದ ಹತ್ತು ದಿನಗಳಿಂದ ಮುಳುಗಡೆ ಸ್ಥಿತಿಯಲ್ಲೇ ಮುಂದುವರಿದಿದೆ. ಯಾತ್ರಾರ್ಥಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಡ್ರಮ್ ಗಳಲ್ಲಿ ನೀರು ತುಂಬಿಸಿಟ್ಟು ಪುಣ್ಯಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಿದೆ.

]]>
https://sullia.samagrasamachara.com/2024/07/26/news-1-3874/feed/ 0 69040
ಹವಾಮಾನ ವರದಿ| ಜು.25ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ‌ಮಳೆ ಸಾಧ್ಯತೆ https://sullia.samagrasamachara.com/2024/07/22/weather-report-116/ https://sullia.samagrasamachara.com/2024/07/22/weather-report-116/#respond Mon, 22 Jul 2024 02:32:09 +0000 https://samagrasamachara.com/?p=68785 ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯಾದ್ಯಂತ ಮುಂದಿನ 5 ದಿನಗಳವರೆಗೆ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಗಳಿದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಜು. 25ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಜುಲೈ 23ರ ವರೆಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಈ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ 30-40 ಕಿಮೀ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಬೆಳಗಾವಿ, ಬೀದರ್‌, ಕಲಬುರಗಿ ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಗತಳಿವೆ. ಬೆಂಗಳೂರಿನಲ್ಲಿ ಜುಲೈ 25ರ ವರೆಗೆ ಅಲ್ಲಲ್ಲಿ ಹಗುರದಿಂದ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

]]>
https://sullia.samagrasamachara.com/2024/07/22/weather-report-116/feed/ 0 68785
ಹವಾಮಾನ ವರದಿ|ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ| ವಾರಂತ್ಯದಲ್ಲೂ ಭಾರೀ ಗಾಳಿ ಮಳೆ ಸಾಧ್ಯತೆ https://sullia.samagrasamachara.com/2024/07/20/weather-report-115/ https://sullia.samagrasamachara.com/2024/07/20/weather-report-115/#respond Sat, 20 Jul 2024 03:49:43 +0000 https://samagrasamachara.com/?p=68717 ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಟ್ರಫ್ ಹಾಗೂ ವಾಯುಭಾರ ಉಂಟಾಗಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮಳೆಯೊಂದಿಗೆ ಗಾಳಿ ವೇಗವು 50 ಕಿ.ಮೀ ತಲುಪುವ ಸಾಧ್ಯತೆ ಇದೆ.
ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಶನಿವಾರದಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ.

ಇನ್ನೂ ಹಾಸನ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು ತಲುಪುವ ಸಾಧ್ಯತೆಯಿದೆ ಹಾಗೊ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇನ್ನೂ ಭಾನುವಾರದಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯ ವೇಗವು (30-40 ಕಿಮೀ) ವಿಪರೀತ ಮಳೆಯಾಗಲಿದೆ. ಒಳನಾಡಿನ ಬೆಳಗಾವಿ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು 35-45 ಕಿ.ಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 20 ಡಿ.ಸೆ ಇರಲಿದೆ.

ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಅಂಗನವಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

]]>
https://sullia.samagrasamachara.com/2024/07/20/weather-report-115/feed/ 0 68717
ಕರಾವಳಿಗೆ ರೆಡ್ ಅಲರ್ಟ್| ಇಂದು (ಜು.6) ದ.ಕ ಜಿಲ್ಲೆಯ ಶಾಲೆ, ಪ.ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ https://sullia.samagrasamachara.com/2024/07/06/red-alert-holiday-declared-dk-district/ https://sullia.samagrasamachara.com/2024/07/06/red-alert-holiday-declared-dk-district/#respond Sat, 06 Jul 2024 00:17:30 +0000 https://samagrasamachara.com/?p=67960 ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಪ.ಪೂರ್ವ ಕಾಲೇಜುಗಳಿಗೆ ಜುಲೈ06ರ ಶನಿವಾರ ರಜೆ ಘೋಷಿಸಲಾಗಿದೆ.

ದ.ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಖಾಸಗಿ ಪ್ರಾಥಮಿಕ ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ( 12 ನೇ ತರಗತಿ) ಭಾರೀ ಮಳೆ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

]]>
https://sullia.samagrasamachara.com/2024/07/06/red-alert-holiday-declared-dk-district/feed/ 0 67960