ವಿದ್ಯಾ ಭಾರತಿ ಕರ್ನಾಟಕ ಮತ್ತು ವಿವೇಕಾನಂದ ವಿದ್ಯಾ ವರ್ಧಕ ಸಂಘ, ಪುತ್ತೂರು (ರಿ.) ಆಶ್ರಯದಲ್ಲಿ ಪ್ರಾಂತೀಯ ಯೋಗಾಸನ ಸ್ಪರ್ಧೆಯನ್ನು ಆ.21 ಮತ್ತು 22 ರಂದು ಶುಕ್ರವಾರ ಮತ್ತು ಶನಿವಾರ ದಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ನಲ್ಲಿ ಆಯೋಜಿಸಲಾಗಿತ್ತು.
ಕಲಾತ್ಮಕ ವೈಯಕ್ತಿಕ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಸಾಂಪ್ರದಾಯಕ ಯೋಗಾಸನ ಸ್ಪರ್ಧೆಯಲ್ಲಿ 14 ವರ್ಷ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಕ್ಷಯ. ಬಿ. ಎಂ. ಪ್ರಥಮ ಸ್ಥಾನ ಗಳಿಸಿ ಹೈದರಾಬಾದ್ ನಲ್ಲಿ ನಡೆಯುವ ದಕ್ಷಿಣ ಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ – 2026,
ಅನುದಾನಿತ ಕೆಪಿಎಸ್ ಕೆ ಸ್ಮಾರಕ ಪ್ರೌಢಶಾಲೆ ಪಂಜಿನಡ್ಕ ಮುಲ್ಕಿ ಯಲ್ಲಿ ಆ.19 ಬುಧವಾರ ದಂದು ಆಯೋಜಿಲಾಗಿತ್ತು. ಬಾಲವರ್ಗ ಬಾಲಕಿಯರ ವಿಭಾಗದಲ್ಲಿ (under 14) ಸಾಂಪ್ರದಾಯಕ ಯೋಗಾಸನ ಮತ್ತು ಕಲಾತ್ಮಕ ವೈಯಕ್ತಿಕ ಸ್ಪರ್ಧೆಯಲ್ಲಿ ಅಕ್ಷಯ ಬಾಬ್ಲುಬೆಟ್ಟು ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಕಡಬದಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಏನೇಕಲ್ ಬಾಲಾಡಿ ನಿವಾಸಿ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀಮತಿ ದಿವ್ಯ ಕುಮಾರಿ ಬಾಬ್ಲುಬೆಟ್ಟು ಇವರ ಪುತ್ರಿ. ಇವರು ನಿರಂತರ ಯೋಗ ಕೇಂದ್ರ ಏನೇಕಲ್ ನ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.