ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.17ರಂದು ನಾಗರ ಪಂಚಮಿ ಪ್ರಯುಕ್ತ ಆಶ್ಲೇಷ ಬಲಿ ಹಾಗೂ ನಾಗತಂಬಿಲ ನಡೆಯಿತು.
ಬೆಳಿಗ್ಗೆ ಶ್ರೀ ದೇವಳದ ನಾಗ ಸನ್ನಿಧಿಯಲ್ಲಿ ನಾಗ ತಂಬಿಲ ಹಾಗೂ ಕ್ಷೀರಾಭಿಷೇಕ ನಡೆಯಲಿದ್ದು, ಬಳಿಕ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮಾಜಿ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಪ್ರಸಾದ ಸ್ವೀಕರಿಸಿದರು.