ಗುತ್ತಿಗಾರು: ಕೃಷಿ ಇಲಾಖೆ ಸುಳ್ಯ, ರೈತ ಸಂಪರ್ಕ ಕೇಂದ್ರ ಪಂಜ ಇದರ ವತಿಯಿಂದ ಆತ್ಮ ಯೋಜನೆಯಡಿ ನಾಲ್ಕೂರು ಗ್ರಾಮದ ಹಾಲೆಮಜಲಿನ ರೈತ ಮಿತ್ರರು ರಾಜ್ಯದೊಳಗೆ ಒಂದು ದಿನದ ಕೃಷಿ ಅಧ್ಯಯನ ಪ್ರವಾಸವನ್ನು ಆಗಸ್ಟ್ 14ರಂದು ಕೈಗೊಂಡರು.
ಈ ಪ್ರವಾಸದಲ್ಲಿ ಕೊಡಗು ಜಿಲ್ಲೆಯ ಅಪ್ಪಂಗಳದಲ್ಲಿರುವ ಸಾಂಬಾರ ಮಂಡಳಿ ಭೇಟಿ ನೀಡಿದರು. ಪ್ರವಾಸದಲ್ಲಿ ಕೃಷಿ ಅಧಿಕಾರಿಗಳು ಹಾಗೂ ನಾಲ್ಕೂೂರು ಗ್ರಾಮದ ಹಾಲೆಮಜಲಿನಲ್ಲಿರುವ ಆತ್ಮ ರೈತ ಮಿತ್ರ ಮಹಿಳಾ ಸ್ವಸಹಾಯದ ಸಂಘದ ಸದಸ್ಯರು ಭಾಗವಹಿಸಿದ್ದರು.