ಸುಬ್ರಮಣ್ಯ: ಕೆ.ಎಸ್. ಎಸ್ ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ 

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ  ಆ.12 ರಂದು   ಪದ್ಮಶ್ರೀ ಪ್ರಶಸ್ತಿ ಡಾ ಎಸ್. ಆರ್. ರಂಗನಾಥ್ ಅವರ ಹುಟ್ಟು ಹಬ್ಬದ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ. ವಹಿಸಿದ್ಧರು. ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ರವಿ ಕಕ್ಕೆಪದವು ಅವರು ಉದ್ಘಾಟಿಸಿದರು.  

ಕಾರ್ಯಕ್ರಮದಲ್ಲಿ ಗ್ರಂಥಪಾಲಕಿಯಾದ ಶ್ರೀಮತಿ ಸುಚಿತ್ರ ಎಸ್. ಹಾಗೂ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಗ್ರಂಥಾಲಯ ಸಹಾಯಕರಾದ ಜಯಪ್ರಕಾಶ್ ಆರ್.ವಿ.  ಗ್ರಂಥಾಲಯ ಪರಿಚಾರಕ ರಾಮಾಂಜನಾಚಾರಿ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ ಶ್ರೀಮತಿ ಶ್ರೀಲತಾ ಕಮಿಲ ಸ್ವಾಗತಿಸಿ, ವಾಣಿಜ್ಯಶಾಸ್ತ್ರದ ಮುಖ್ಯಸ್ಥರಾದ ಶ್ರೀಮತಿ ಲತಾ ಬಿ . ಟಿ ವಂದಿಸಿದರು. ಸಂಖ್ಯಾ ಕಾರ್ಯಕ್ರಮ  ನಿರೂಪಿಸಿದರು.