ಗುತ್ತಿಗಾರು: ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಚೈತನ್ಯ ಯುವತಿ ಮಂಡಲ (ರಿ) ಕೊಲ್ಲಮೊಗ್ರು ಮಹಾತ್ಮ ಯುವಕ ಮಂಡಲ (ರಿ) ಕೊಲ್ಲಮೊಗ್ರು. ಕೆವಿಜಿ ಅನುದಾನಿತ ಪ್ರೌಢಶಾಲೆ, ಕೊಲ್ಲಮೊಗ್ರು ಇವುಗಳ ಸಂಯುಕ್ತ ಆಶ್ರಯದಲ್ಲಿ ಆಟಿ ಕೂಟ 2026 ವಿಜ್ರಂಬಣೆಯಿಂದ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಗದ್ದೆಯಲ್ಲಿ ಯುವತಿ ಮಂಡಲದ ಸದಸ್ಯರು ನೇಗಿ ನೆಡುವುದರ ಮುಖಾಂತರ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪವನ್ ಪಲ್ಲತಡ್ಕ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲೂಸ್ತುವಾರಿ ಸಮಿತಿ ಅಧ್ಯಕ್ಷ ಬಳಿಯಪ್ಪ ಗೌಡ ಕಳಸಿಗೆಗೆ ಭತ್ತ ಸುರಿಯುವುದರ ಮುಖಾಂತರ ನೆರವೇರಿಸಿದರು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಮಲಾಕ್ಷಗೌಡ ಮುಳುಬಾಗಿಲು ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಮೂಕಮಲೆ ಚೈತನ್ಯ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಭಟ್ ಏನ್ ಬಿ. ಯುವತಿ ಮಂಡಲದ ಸ್ಥಾಪಕ ಅಧ್ಯಕ್ಷ ಶ್ರೀಮತಿ ಯಶೋಧ ಅಂಬೆಕಲ್ಲು ಮಂಡಳಿಯ ಪ್ರಧಾನ ಕಾರ್ಯದರ್ಶಿ, ಮುರಳಿ ನಳಿಯಾರು ಮಂಡಳಿಯ ಪೂರ್ವ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಜಯನಗರ ಉಪಸ್ಥಿತರಿದ್ದರು.
ಆಟಿತಿಂಗಳ ವಿಶೇಷತೆಯನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಸಾರ್ವಜನಿಕರಿಗೂ ಕೂಡ ಅನೇಕ ಸ್ಪರ್ಧಾ ಕಾರ್ಯಕ್ರಮಗಳು ಆಟಿ ಆಚರಣೆಯ ಬಗ್ಗೆ ಭಾಷಣ ಸ್ಪರ್ಧೆಗಳನ್ನು ಕೂಡ ನಡೆಸಲಾಯಿತು. ವಿಶೇಷವಾಗಿ ಮಕ್ಕಳು ಹಾಗೂ ಯುವತಿ ಮಂಡಳದ ಸದಸ್ಯರುಗಳು ಸುಮಾರು 30ಕ್ಕಿಂತಲೂ ಹೆಚ್ಚು ಆಟಿ ತಿಂಗಳ ಲಿ ಉಪಯೋಗಿಸುವ ಖಾದ್ಯವನ್ನು ಸಭೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು ಅದರಲ್ಲಿ ಅತ್ಯುತ್ತಮವಾಗಿ ಮೂಡಿ ಬಂದ ಖಾದ್ಯ ಗಳಿಗೆ ಬಹುಮಾನ ಕೂಡ ನೀಡಲಾಯಿತು. ಈ ಸಂದರ್ಭದಲ್ಲಿ ಸೌಹಾರ್ದಕ್ಕಾಗಿ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಕೂಡ ನಡೆಸಲಾಯಿತು ಅತ್ಯುತ್ತಮ ನಡೆಸಿ ಕೊಟ್ಟದ್ದಕ್ಕಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರನ್ನು ಯುವಕ ಹಾಗೂ ಯುವತಿ ಮಂಡಳದವರು ಗೌರವಿಸಿದರು. ಮಂಡಳಿಯ ಅಧ್ಯಕ್ಷರು ಹಾಗೂ ಎಲ್ಲ ನಿರ್ದೇಶಕರುಗಳು ಯುವಕ ಹಾಗೂ ಯುವತಿ ಮಂಡಳದ ಅಧ್ಯಕ್ಷರನ್ನು ಕೂಡ ಈ ಸಂದರ್ಭದಲ್ಲಿ ಸಾಲು ಹೋದಿಸಿ ಗೌರವಿಸಿದರು ಕಾರ್ಯಕ್ರಮದಲ್ಲಿ ಹಳೆಯ ಕಾಲದಲ್ಲಿ ವಿವಿಧ ಕೆಲಸಗಳಿಗೆ ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನ ಇಡಲಾಗಿತ್ತು. ಶಿಕ್ಷಕರು ಮಕ್ಕಳ ಪೋಷಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು ಶಾಲಾ ನಿವೃತ್ತ ಶಿಕ್ಷಕ ವೆಂಕಟ್ರಮಣಗೌಡ ಕೊಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು ದಿನೇಶ್ ಹಾಲೆಮಜಲು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು ಹರೀಶ್ ಬಳ್ಳಡ್ಕ ವಂದಿಸಿದರು.