ಭಾರತೀಯ ಮಜ್ದೂರ್ ಸಂಘ (BMS ) ಸ್ಥಾಪನ ದಿನಾಚರಣೆಯನ್ನು ಸುಬ್ರಮಣ್ಯ ಘಟಕದಲ್ಲಿ ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಮಾತೆಯ ಭಾವಚಿತ್ರಕೆ ಪುಷ್ಪರ್ಚನೆ ಮಾಡುವ ಮೂಲಕ ಜು.23 ರಂದು ಆಚರಿಸಲಾಯಿತು.
ಬಿ. ಎಮ್. ಎಸ್ ಎಂದರೇನು ಮತ್ತು ನಮಗೆ ಏಕೆ ಈ ಸಂಘಟನೆ ಬೇಕು ಎಬುದನ್ನು ಸಂಘದ ಮಾಜಿ ಅಧ್ಯಕ್ಷರಾದ ಸುಬ್ಬಪ್ಪ ಕುಲ್ಕುಂದ ರವರು ಸಭೆಯಲ್ಲಿ ಸೇರಿದ ಸದಸ್ಯರುಗಳಿಗೆ ತಿಳಿಸಿದರು.
ನಂತರ ಎಲ್ಲಾ ಸದಸ್ಯರುಗಳಿಗೆ ಸಿಹಿ ತಿಂಡಿ ಹಂಚಿ ಸಂಘದ ಸ್ಥಾಪನ ದಿನಾಚರಣೆಯನ್ನು ಸಂಭ್ರಮಿಸಲಾಯಿತು .