ನಿಧನ: ಶ್ರೀಮತಿ ಅಕ್ಕಯ್ಯ ಆರ್ನೋಜಿ

ಗುತ್ತಿಗಾರು: ಇಲ್ಲಿನ ವಳಲಂಬೆ ಸಮೀಪದ ದಿ. ಆರ್ನೋಜಿ ಕೃಷ್ಣಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಅಕ್ಕಯ್ಯರವರು ಅಸೌಖ್ಯದಿಂದ ಜು. 21 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಸಾಹಿತಿ ಎ.ಕೆ. ಹಿಮಕರ, ಪ್ರಗತಿಪರ ಕೃಷಿಕರಾದ ರಾಘವ, ಗೋಪಾಲಕೃಷ್ಣ, ಪುತ್ರಿಯರಾದ ತಾರಾವತಿ, ಭವಾನಿ, ಹೇಮಾವತಿ, ಸೊಸೆ, ಅಳಿಯಂದಿರು,ಮೊಮ್ಮಕ್ಕಳನ್ನು, ಮರಿಮಕ್ಕಳನ್ನು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.