ವಳಲಂಬೆ: ಎ.1ರಿಂದ 4ರವರೆಗೆ ನೇರಳಾಡಿ ಮಲೆದೈವಗಳ ಮೂಲಸ್ಥಾನದಲ್ಲಿ ಕಲಶಾಭಿಷೇಕ, ದೈವಗಳ ಪ್ರತಿಷ್ಟೆ ಮತ್ತು ನೇಮೋತ್ಸವ

ಗುತ್ತಿಗಾರು: ಇಲ್ಲಿನ ವಳಲಂಬೆ ಸಮೀಪದ ನೇರಳಾಡಿ ಶ್ರೀ ಮಲೆದೈವಗಳ ಮೂಲಸ್ಥಾನ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡಗಳಿಗೆ ಕಲಶಾಭಿಷೇಕ, ದೈವಗಳ ಪ್ರತಿಷ್ಟೆ, ವಿವಿಧ ಧಾರ್ಮಿಕ ಕ್ರಿಯಾಭಾಗ ಹಾಗೂ ಶ್ರೀ ದೈವಗಳಿಗೆ ನೇಮೋತ್ಸವ ಕಾರ್ಯಕ್ರಮ ಎ.1ರಿಂದ 4ರವರೆಗೆ ನಡೆಯಲಿದೆ.

ಎ.1ರಂದು ಬದಿಕಾನ ಮಾಡದಲ್ಲಿ ಬೆಳಿಗ್ಗೆ ಗಂ.8ರಿಂದ ಸರ್ಪಸಂಸ್ಕಾರ ಬಳಿಕ ಅನ್ನಸಂತರ್ಪಣೆ, ಸಂಜೆ ಸ್ಥಳಶುದ್ದಿ, ವಾಸ್ತು ಪೂಜೆ ಮತ್ತಿತ್ತರ ದೈವಿಕ ವಿಧಿವಿಧಾನಗಳು ನಡೆಯಲಿವೆ.

ಎ. 2ರಂದು ಗಣಪತಿ ಹವನ, ಶ್ರೀ ಮಲೆದೈವಗಳ ಪ್ರತಿಷ್ಟೆ, ಅಂಬ್ರೋಳಿ ಎಂಬಲ್ಲಿ ಗುಳಿಗ ದೈವದ ಶಿಲಾ ಪ್ರತಿಷ್ಟೆ, ಬಳಿಕ ಗುಂಡದ ಕೋಲು ಹೊಡೆಯುವುದು, ಆಶ್ಲೇಷ ಬಲಿ, ಅನ್ನಸಂತರ್ಪಣೆ ನಡೆದು ಸಂಜೆ ದಂಬೆಕೋಡಿ ಭಂಡಾರದ ಚಾವಡಿಯಿಂದ ಬದಿಕಾನ ಮಾಡಕ್ಕೆ ದೈವಗಳ ಭಂಡಾರ ಬಂದು ನೇರಳಾಡಿ ಕೊಡಿ ಅಡಿಗೆ ಭಂಡಾರ ತೆರಳಲಿರುವುದು.

ಎ.3ರಂದು ಮುಂಜಾನೆ ಉಳ್ಳಾಕುಲು ದೈವದ ನೇಮ, ಪುರುಷ ದೈವದ ನೇಮ, ಅನ್ನಸಂತರ್ಪಣೆ, ಮಲೆ ಚಾಮುಂಡಿ ದೈವದ ನೇಮ, ಸಂಜೆ ಕಾರಣಿಕದ ಅಜ್ಜಿ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ.

ಎ.4ರಂದು ಶಿರಾಡಿ ದೈವದ ನೇಮ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ನಂತರ ಗುಳಿಗನಿಗೆ ಕೋಲ‌ ನೆರವೇರಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವಿಕರಿಸಬೇಕೆಂದು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.