ಗುತ್ತಿಗಾರು: ಇಲ್ಲಿನ ವಳಲಂಬೆಯ ನೇರಳಾಡಿ ಮಲೆದೈವಗಳ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವ(ಜಾಲಾಟ) ದ ಅಂಗವಾಗಿ ಮಾ.29ರಂದು ಗೊನೆಮುಹೂರ್ತ ನೆರವೇರಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮನಾಭ ದಂಬೆಕೋಡಿ, ಶಂಕರ ಭಟ್ ವಳಲಂಬೆ, ಚಂದ್ರಶೇಖರ ಮೊಟ್ಟೆಮನೆ, ಜಯರಾಮ ಗೌಡ ಮೊಟ್ಟೆಮನೆ, ಚಂದ್ರಕಾಂತ ಮೊಟ್ಟೆಮನೆ, ಮಾಧವ ಆಚಾರ್ಯ ದಂಬೆಕೋಡಿ, ಭೋಜಪ್ಪ ಗೌಡ ಪುರ್ಲಮಕ್ಕಿ ಹಾಗೂ ಊರವರು ಉಪಸ್ಥಿತರಿದ್ದರು.
ಬಳಿಕ ನೇರಳಾಡಿಯ ಬದಿಕಾನ ಸ್ಥಾನದಲ್ಲಿ ಶ್ರಮದಾನ ಸೇವೆ ನಡೆಯಿತು. ಇದರಲ್ಲಿ ಧರ್ಮಸ್ಥಳ ಗ್ರಾ. ಯೋ ಸದಸ್ಯರು, ಊರ ಹಾಗೂ ಪರವೂರಿನ ಭಕ್ತಾಧಿಗಳು ಪಾಲ್ಗೊಂಡಿದ್ದರು.