ಪಂಜ: ಜೇಸಿಐ ಪಂಜ ಪಂಚಶ್ರೀ,
ಪಶು ಸಂಗೋಪನಾ ಇಲಾಖೆ ಸುಳ್ಯ
ಇವರ ಜಂಟಿ ಆಶ್ರಯದಲ್ಲಿ
24 ನೇ ವರ್ಷದ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಫೆ.15.ರಂದು ಬೆಳಿಗ್ಗೆ 9.ಕ್ಕೆ ಪಂಜ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಉದ್ಘಾಟನೆ ಗೊಳ್ಳಲಿದೆ.
ಬಳಿಕ ಪಂಜ,ಬಳ್ಪ,ಗುತ್ತಿಗಾರು,
ಎಡಮಂಗಲ,ಕಲ್ಮಡ್ಕ, ಮುರುಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಗದಿ ಪಡಿಸಿದ ಕೇಂದ್ರಗಳಲ್ಲಿ ನಿಗದಿ ಪಡಿಸಿದ ಸಮಯದಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದೆ.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ದೇವಿಪ್ರಸಾದ್ ಚಿಕ್ಮುಳಿ ಸಭಾಧ್ಯಕ್ಷತೆ ಜೇಸಿಐ ಭಾರತ ವಲಯ 15 ಸಮುದಾಯ ಅಭಿವೃದ್ಧಿ ವಿಭಾಗ,ವಲಯ ನಿರ್ದೇಶಕ JFD ವಿಘ್ನೇಶ್ ಪ್ರಸಾದ್ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಸುಳ್ಯ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ನಿತಿನ್ ಪ್ರಭು,ಕಡಬ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾಅಜಿತ್ ಎಂ.ಸಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9902836210, 9449310958, 9449664123 ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ.