ಸುಬ್ರಹ್ಮಣ್ಯ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಶ್ರೀಮತಿ ದಿವ್ಯಾ ಎಂ ಕೆ ತೇರ್ಗಡೆಯಾಗಿದ್ದಾರೆ.
ಈ ಪರೀಕ್ಷೆಯು ಜನವರಿ ತಿಂಗಳ 5ನೇ ತಾರೀಕಿನಂದು ನಡೆದಿತ್ತು. ಪ್ರಸ್ತುತ ಇವರು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ಆಂಗ್ಲಭಾಷಾ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 2025 ರಲ್ಲಿ ನಡೆದ ಕೆಸೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು ಕಲ್ಮಡ್ಕ ಗ್ರಾಮದ ಅಶ್ವಥ್ ಕುಳ್ಸಿಗೆ ರವರ ಪತ್ನಿ.