ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ

ಗುತ್ತಿಗಾರು: ಗ್ರಾಮೀಣ ಪ್ರದೇಶದಲ್ಲಿ ಆಂಬುಲೆನ್ಸ್ ಸೇವೆ, ರಕ್ತದಾನ, ತುರ್ತು ಸಂದರ್ಭದಲ್ಲಿ ರಕ್ತದ ಪೂರೈಕೆ, ಯೋಗ ತರಬೇತಿ ಕೇಂದ್ರ, ಡ್ಯಾನ್ಸ್ ತರಬೇತಿ ಕೇಂದ್ರ, ಚೆಸ್ ತರಬೇತಿ ಕೇಂದ್ರ, ಕರಾಟೆ ತರಬೇತಿ ಕೇಂದ್ರ, ಸೇರಿದಂತೆ ವಿವಿಧ ಸೇವಾ ಕಾರ್ಯ ಗಳನ್ನು ದಾನಿಗಳ ಸಹಕಾರ ದಿಂದ ನಡೆಸುತ್ತಾ ಬಂದಿರುವ ಅಮರ ಚಾರಿಟೇಬಲ್ ಟ್ರಸ್ಟ್ ನ 5ನೇ ವರ್ಷದ ಸಂಭ್ರಮದ ಪ್ರಯುಕ್ತ 9ನೇ ರಕ್ತದಾನ ಶಿಬಿರ ಹಾಗೂ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಯನ್ನು 1 ರಿಂದ 12 ಪಿ. ಯು. ಸಿ. ವರೆಗೆ ಹುಡುಗ/ಹುಡುಗಿಯರ ಪ್ರತ್ಯೇಕ ವಿಭಾಗದಲ್ಲಿ ನಡೆಸಲು ತೀರ್ಮಾನಿಸಿದೆ. ಹಾಗೂ ಈ ಸಂದರ್ಭದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಸುವ ಕುರಿತು ಗುತ್ತಿಗಾರಿನ ಪ. ವರ್ಗದ. ಸಭಾ ಭವನದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಬೆಳ್ಯಪ್ಪಗೌಡ ಕಡ್ತಲಕಜೆ, ಸನತ್ ಮುಳುಗಾಡು, ಗ್ರಾ. ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ಗುತ್ತಿಗಾರು ಶಾಲಾ ಯಸ್ ಡಿ. ಯಂ. ಸಿ. ಅಧ್ಯಕ್ಷ ವೆಂಕಟ್ ದಂಬೆಕೋಡಿ,ಉದ್ಯಮಿ ದೇವಿಪ್ರಸಾದ್ ಚಿಕ್ಮಳಿ ಉಪಸ್ಥಿತರಿದ್ದರು.