ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದ ವತಿಯಿಂದ ಆಯೋಜಿಸಲಾದ ಇಂಟರ್ ಕಾಲೇಜು ಮಟ್ಟದ “ಪ್ರೇರಣಾ ಪಿಯು ಫೆಸ್ಟ್” ಅನ್ನು ಡಿಸೆಂಬರ್ ೧೧ ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ದಿನೇಶ ಪಿಟಿ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಐಕ್ಯೂ ಎಸಿ ಸಂಯೋಜಕರೂ ಹಾಗೂ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಮುಖ್ಯಸ್ಥರಾದ ಪ್ರೊ. ಲತಾ ಬಿ.ಟಿ, ಫೆಸ್ಟ್ ನ ಸಂಯೊಜಕರಾದ ಶ್ರೀಮತಿ ಮಧುರ ಕೆ, ಶೈಕ್ಷಣಿಕ ಸಲಹೆಗಾರರಾದ ಶ್ರೀ ರಮಾನಾಥ,ಶ್ರೀಮತಿ ಪ್ರಮೀಳಾ ಮತ್ತು ಶ್ರೀಮತಿ ಅಶ್ವಿನಿ ಹಾಗೂ ವಿದ್ಯಾರ್ಥಿ ಸಂಯೋಜರಾದ ಮನ್ವಿತ್,ಆಸ್ಥಿಕ್ ಮತ್ತು ರಕ್ಷಾ ಉಪಸ್ಥಿತರಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರು ಹಾಗೂ ಸದಸ್ಯರು, ಪೂರ್ವ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಫೆಸ್ಟ್ನ ಅಂಗವಾಗಿ ಕ್ವಿಜ್ , ಟ್ರೆಶರ್ ಹಂಟ್, ಮಾರ್ಕೆಟಿಂಗ್, ಫೈನಾನ್ಸ್, ಫೇಸ್ ಪೈಂಟಿಂಗ್, ಸಮೂಹ ನೃತ್ಯ ಮತ್ತು ಬೆಸ್ಟ್ ಮ್ಯಾನೇಜರ್ ಎಂಬ ಒಟ್ಟು ಎಂಟು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, 22 ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತುಳು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಜೆಪಿ ತುಮಿನಾಡ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ವಹಿಸಿದ್ದರು. ಸಂಯೋಜಕಿ ಮಧುರ ಕೆ ಸ್ವಾಗತಿಸಿ, ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯದ
ಕುಮಾರಸ್ವಾಮಿ ಪಿ.ಯು ಕಾಲೇಜು ಚಾಂಪಿಯನ್ ಆಗಿಯು, ಕೆಎಸ್ ಗೌಡ ಕಾಲೇಜು ನಿಂತಿಕಲ್ ಹಾಗೂ ಎಸ್ ಎಸ್ ಪಿ ಯು ಕಾಲೇಜು ದ್ವಿತೀಯ ರನ್ನರ್ ಆಗಿಯೂ ಹೊರಹೊಮ್ಮಿದರು. ಫೆಸ್ಟ್ ಪ್ರಯುಕ್ತ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಾದ ಸಿಎಸ್ ರೇನುಣುಪ್ರಸಾದ್ ಹೊಸಳಿಕೆ ಮತ್ತು ಸಿಎ ಚಕ್ರಪಾಣಿ ಅವರನ್ನು ಸನ್ಮಾನಿಸಲಾಯಿತು.