ಮರ್ಕಂಜ: ಕುಡಿಯುವ ನೀರಿಗೆ ಮಲವಿಸರ್ಜಸಿ ಜಾತಿನಿಂದನೆ| ಆರೋಪಿಗೆ ಶಿಕ್ಷೆ ವಿಧಿಸಿದ ಕೋರ್ಟ್

ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಮರ್ಕಂಜ ಗ್ರಾಮದ ಗುಂಡಿಮಜಲಿನ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರು ಕುಡಿಯಲು ಮತ್ತು ಗೃಹ ಬಳಕೆಗೆ ನೀರು ಸಂಗ್ರಹಿಸಿಟ್ಟಿದ್ದ ಬ್ಯಾರಲ್‌ಗೆ ಮಲ ವಿಸರ್ಜಿಸಿದ ಸುಳ್ಯ ತಾಲ್ಲೂಕು ಕೆಮ್ರಾಜೆಯ ಗಿರೀಶ್‌ಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

7 ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ ನೀರು ಮಲಿನ ಮಾಡಿದ ಹಾಗೂ ವಿಚಾರಿಸಿದ ಮಹಿಳೆ ಮತ್ತು ಗಂಡನನ್ನು ಬೈದು ಜಾತಿ ನಿಂದನೆ ಮಾಡಿದ ಗಿರೀಶ್‌ಗೆ ನ್ಯಾಯಾಲಯ ದಂಡವನ್ನೂ ವಿಧಿಸಿದೆ.

2017ನೇ ನ. 3ರಂದು ಘಟನೆ ನಡೆದಿತ್ತು. ಗಿರೀಶ್ ವಿರುದ್ಧ ಡಿವೈಎಸ್‌ಪಿ ಶ್ರೀನಿವಾಸ್ ಬಿ.ಎಸ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೂರುದಾರರ ಸಾಕ್ಷ್ಯವನ್ನು ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಧೀಶರಾದ ಸರಿತಾ ಡಿ ಅವರು ಶಿಕ್ಷೆ ವಿಧಿಸಿದ್ದಾರೆ. ದೂರುದಾರರ ಪರವಾಗಿ ಜಯಂತಿ ಕೆ.ಭಟ್ ವಾದ ಮಂಡಿಸಿದ್ದರು.