ಸುಬ್ರಹ್ಮಣ್ಯ: ಕುಕ್ಕೇ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಪ್ರಯುಕ್ತ ವಿಶೇಷ ಕೃಷಿ ಮೇಳ ಆಯೋಜಿಸಲಾಗಿದ್ದು ಕೃಷಿ ಮೇಳದಲ್ಲಿ ಕೃಷಿ ಉಪಯೋಗಿ ಸಲಕರಣೆಗಳು , ಸಾವಯುವ ರಸಗೊಬ್ಬರಗಳು ವಿವಿಧ ಜಾತಿಯ ವಿವಿಧ ಹಣ್ಣಿನ ಗಿಡಗಳು ಹಾಗೂ ಇನ್ನಿತರ ತರಕಾರಿ ಬೀಜಗಳ ಮಳಿಗೆಗಳನ್ನು ತೆರೆಯಲಾಗುತ್ತದೆ.
ಸದ್ಯ ಕೃಷಿಗೆ ಬಾಧಿಸುತ್ತಿರುವ ಎಲೆ ಚುಕ್ಕಿ ರೋಗದ ಪರಿಹಾರ ಮಾಹಿತಿಯ ಮಳಿಗೆ ಜೊತೆಗೆ ಕೃಷಿ , ತೋಟಗಾರಿಗೆ , ಪಶುವೈದ್ಯಕೀಯ ಹಾಗೂ ಇನ್ನಿತರ ಸರಕಾರದ ಮಳಿಗೆಗಳನ್ನು ತೆರೆಯಲಾಗಿದ್ದು ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕೃಷಿಮೇಳ ಸಮಿತಿಯ ಅಧ್ಯಕ್ಷೆ ಲೀಲಾ ಮನಮೋಹನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.