ಪಂಜ: ಅಕ್ರಮ‌ವಾಗಿ ಗೋವಧೆ ಮಾಡುತ್ತಿದ್ದ ಶೆಡ್ ಗೆ ಪೊಲೀಸ್ ದಾಳಿ| ಓರ್ವ ವಶಕ್ಕೆ, ಮೂವರು ಪರಾರಿ

ಪಂಜ: ಇಲ್ಲಿನ ಐವತ್ತೊಕ್ಲು ಗ್ರಾಮದ ಶೆಡ್ ವೊಂದರಲ್ಲಿ ದನ ಕಡಿದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಸುಬ್ರಹ್ಮಣ್ಯ ಎಸ್.ಐ ಕಾರ್ತಿಕ್ ಕೆ ನೇತೃತ್ವದ ಪೊಲೀಸರು ನ.18 ರಂದು ದಾಳಿ ಮಾಡಿದ್ದಾರೆ. ಮೂವರು ಪರಾರಿಯಾಗಿದ್ದು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಐವತ್ತೊಕ್ಲು ಗ್ರಾಮದ ಮುಚ್ಚಿಲ ಮೇಲ್ಮನೆ ಚಾಮುಂಡಿ ಮೂಲೆ ಎಂಬಲ್ಲಿ ಕೆಲವರು ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ. ಶೆಡ್ ನಲ್ಲಿ ಮಾಂಸ ಕತ್ತರಿಸುತ್ತಿದ್ದ ಹಮೀದ್ ಎಂಬಾತನನ್ನು ವಿಚಾರಿಸಿದಾಗ ಆತನು ಮುಸ್ತಾಫ, ಶರೀಫ್ ಜುಬೇರ್, ಎಂಬವರೊಂದಿಗೆ ಸೇರಿಕೊಂಡು 3 ವರ್ಷದ ಹೋರಿಯೊಂದನ್ನು ಮಾಂಸ ಮಾಡಿ ಮಾರಾಟ ಮಾಡಿ ಲಾಭ ಪಡೆಯುವ ಉದ್ದೇಶದಿಂದ ಹತ್ಯೆ ಮಾಡಿ ಅಶ್ರಫ್ ಎಂಬವರ ಕಟ್ಟಡದಲ್ಲಿ ಮಾಂಸ ಕತ್ತರಿಸುತ್ತಿರುವುದಾಗಿ ತಿಳಿಸಿದ್ದಾನೆ. ಒಟ್ಟು 102.5 ಕೆ ಜಿ ಮಾಂಸವಿರುವುದು ಕಂಡು ಬಂದಿದ್ದು ಇದರ ಅಂದಾಜು ಮೌಲ್ಯ ಸುಮಾರು 25,500 ಆಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಸೊತ್ತುಗಳ ವಿವರ: ಆರೋಪಿತ ವ್ಯಕ್ತಿ ಬಳಸುತ್ತಿದ್ದ ಅಂದಾಜು ಬೆಲೆ 500/ ರೂ ಬೆಲೆ ಬಾಳುವ ತೂಕ ಮಾಪಕ-1, ಮಾಂಸ ಮಾಡಲು ಉಪಯೋಗಿಸಿದ ಮರದ ತುಂಡು -1, ಮಾಂಸ ಮಾಡಲು ಉಪಯೋಗಿಸಿದ ಕತ್ತಿ- 1 ಅಂದಾಜು ಬೆಲೆ 300 ರೂ, ಹಾಗೂ ಚಾಕು -3 ಅದರ ಅಂದಾಜು ಮೌಲ್ಯ 50/ ರೂ, ಮಾಂಸವನ್ನು ತುಂಬಲು ಉಪಯೋಗಿಸಿದ -2 ಬಕೆಟ್, ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು ಅಂದಾಜು ಬೆಲೆ 2,00,000, , ಬೈಕ್ ಅಂದಾಜು ಬೆಲೆ 50,000 ಮತ್ತು ಆರೋಪಿ ವಧೆ ಮಾಡುವ ಉದ್ದೇಶದಿಂದ ಆತನ ವಶದಲ್ಲಿಟ್ಟುಕೊಂಡಿದ್ದ ಅಂದಾಜು ಮೂರು ವರ್ಷದ ಕಪ್ಪು ಬಣ್ಣದ ಹೋರಿ-1, ಸುಮಾರು ಒಂದೂವರೆ ವರ್ಷದ ಕಪ್ಪು ಬಣ್ಣದ ಹೋರಿ-1, ಕಪ್ಪು ಬಣ್ಣದ ಸುಮಾರು ಐದು ವರ್ಷದ ಹಸು -1 ಸದ್ರಿ ಜಾನುವಾರುಗಳ ಅಂದಾಜು ಮೌಲ್ಯ 12,000 ಆಗಬಹುದಾಗಿದ್ದು, ಈ ಮೇಲಿನ ಸೊತ್ತುಗಳನ್ನು ಮಹಜರು ಮುಖೇನ ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಅ.ಕ್ರ ನಂಬ್ರ 57/2025 ಕಲಂ: 4,7,12 ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಮತ್ತು ಕಲಂ:66,192(A) IMV ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.