ಗುತ್ತಿಗಾರು – ಬಳ್ಪ ಸಂಪರ್ಕಿಸುವ ಚತ್ರಪ್ಪಾಡಿ ಸೇತುವೆ ದುರಸ್ತಿ ಹಿನ್ನಲೆ ಸಂಚಾರ ಬಂದ್

ಗುತ್ತಿಗಾರು: ಇಲ್ಲಿಂದ ಬಳ್ಪ ಸಂಪರ್ಕಿಸುವ ರಸ್ತೆಯ ಚತ್ರಪ್ಪಾಡಿ ಎಂಬಲ್ಲಿ ಹಳೆ ಸೇತುವೆ ತೆಗೆದು ನೂತನ ಸೇತುವ ನಿರ್ಮಾಣ ಕಾಮಗಾರಿ ಕೆಲಸ ಇಂದಿನಿಂದ (ನ.19) ಪ್ರಾರಂಭವಾಗಲಿದೆ. ಆದ್ದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸೂಚಿಸಿದ್ದಾರೆ.

ಬಳ್ಪ ಸಂಪರ್ಕಿಸಲು ಘನ ವಾಹನಗಳು ಗುತ್ತಿಗಾರು – ಬಳ್ಳಕ ಪಂಜ ಮಾರ್ಗವಾಗಿ ಸಂಚರಿಸಬಹುದು. ಲಘು ವಾಹನಗಳು ಈ ಮಾರ್ಗದಲ್ಲಿ ಅಲ್ಲದೇ ಚತ್ರಪ್ಪಾಡಿಯಿಂದ ಹಾಲೆಮಜಲು ಮೂಲಕವಾಗಿ ರಾಜ್ಯ ರಸ್ತೆ ಸಂಪರ್ಕ ಪಡೆದು ಗುತ್ತಿಗಾರಿಗೆ ಪ್ರಯಾಣಿಸಬಹುದು.