ಜಾಲ್ಸೂರು: ಪಾಠದ ,ಜೊತೆ ಆಟ ಮತ್ತು ಸಂಸ್ಕಾರಕ್ಕೆ ಮಹತ್ವ ಕೊಡಬೇಕು -ಸೂಫಿ ಪೆರಾಜೆ

ವಿವೇಕಾನಂದ ವಿನೋಬಾನಗರ ಶಾಲೆಯ ವಾರ್ಷಿಕ ಕ್ರೀಡಾಕೂಟವು ನ.8 ರಂದು ಅಡ್ಕಾರು ಶ್ರೀ ಸುಬ್ರಮಣ್ಯ ದೇವಸ್ಥಾನದ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಉದ್ಯಮಿಗಳಾದ ಶ್ರೀ ಸಂತೋಷಕೈಕರ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ , ಸೂಫಿ ಪೆರಾಜೆ ಭಾಗವಹಿಸಿದರು ಇವರು ಮಾತನಾಡಿ ಮಕ್ಕಳಿಗೆ ಪಾಠದ ಜೊತೆಗೆ ಕ್ರೀಡೆ ಮತ್ತು ಸಂಸ್ಕಾರ ಶಿಕ್ಷಣ ಕೊಡಬೇಕು ,ಆಗ ಅವರು ದೇಶದ ಉತ್ತಮ ಪ್ರಜೆಗಳಾಗುತ್ತಾರೆ ,ಈ ಕೆಲಸ ವಿವೇಕಾನಂದ ವಿದ್ಯಾಸಂಸ್ಥೆ ವಿನೋಭಾನಗರ ಜಾಲ್ಸೂರು ಇಲ್ಲಿ ಅಗುತ್ತಿರುವುದು ತುಂಬಾ ಅಭಿನಂದನೀಯ ಎಂದು ಹೇಳಿದರು . ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀಹರಿಪ್ರಕಾಶ್ ಅಡ್ಕಾರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷರು ಶ್ರೀ ನ .ಸೀತಾರಾಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಂಸ್ಥೆಯ ಸಂಚಾಲಕ ಡಾ ಗೋಪಾಲಕ್ರಷ್ಣ ಭಟ್, ಕೋಶಾಧಿಕಾರಿ ಶ್ರೀ ಸುಧಾಕರ ಕಾಮತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ಕ್ರೀಡಾ ಭಾರತಿ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಎ. ಸಿ ವಸಂತ, ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದ
ಮೊಕ್ತೆಸರರಾದ ಶ್ರೀ ಗುರುರಾಜ್ ಅಡ್ಕಾರು, ಆಡಳಿತ ಮಂಡಳಿ ಯ ಸದಸ್ಯರಾದ ಶ್ರೀ ಪುರುಷೋತ್ತಮ ಕಿರ್ಲಾಯ , ಶ್ಯಾಮ್ ಪ್ರಸಾದ ಅಡ್ಡ೦ತಡ್ಕ, ಹೇಮಂತ್ ಮಠ, ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷರಾದ ರವಿರಾಜ್ ಗಬ್ಬಲಡ್ಕ, ಉಪಾಧ್ಯಕ್ಷ ಶ್ರೀ ಮಣಿಕಂಠ ಹಾಸ್ಪರೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ಅಶೋಕ್ ಅಡ್ಕಾರು, ಮಾತೃ ಭಾರತಿ ಅಧ್ಯಕ್ಷೆ ಶ್ರೀಮತಿ ಜಲಜಾ ಆಚಾರ್ ಶಾಂತಿ ನಗರ, ರೋಟರಿ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಕರಾದ ಶ್ರೀ ರಂಗನಾಥ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕಿ ಶ್ರೀಮತಿ ಸುಮಿತ ಕಾಟೂರು ವಿದ್ಯಾರ್ಥಿಗಳಿಗಳಿಂದ ಪಥ ಸಂಚಲನವನ್ನು ನಡೆಸಿ ಕೊಟ್ಟರು
ಸ೦ಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಯಪ್ರಸಾದ್ ಕಾರಿಂಜ ಸ್ವಾಗತಿಸಿ, ಸಹ ಶಿಕ್ಷಕ ಶಶಿಧರ್ ಎಂ ವಂದಿಸಿ, ಸಹಶಿಕ್ಷಕ ಶ್ರೀ ಆಶೀಷ್ ರಾವ್ ದೊಡ್ಡೇರಿ ನಿರೂಪಿಸಿದರು.