ಸುಬ್ರಹ್ಮಣ್ಯ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಜಂಟಿ ಆಶ್ರಯದಲ್ಲಿ “ಮರೆಯಲಾಗದ ಕರಾವಳಿ ಕರ್ನಾಟಕ ರಾಣಿಯರು ”ಒಂದು ದಿನದ ರಾಷ್ಟ್ರಮಟ್ಟ ವಿಚಾರಸಂಕಿರಣ ನಡೆಯಿತು.
ವಿಚಾರ ಸಂಕಿರಣವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಉದ್ಘಾಟಿಸಿ, ತುಳು ಭಾಷೆ ಸಂಸ್ಕೃತಿಗೆ ಹೆಚ್ಚು ಒತ್ತು ನೀಡುವ ಕಾರ್ಯಗಳು ಆಗಬೇಕು ಎಂದರು. ಕಾರ್ಯಕ್ರಮದ ದಿಕ್ಸೂಚಿ ಉಪನ್ಯಾಸವನ್ನು ನಿವೃತ್ತ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವತ್ವ ವಿಭಾಗದ ಪ್ರೊಫೆಸರ್ ಪುಂಡಿಕಾಯಿ ಗಣಪಯ್ಯಭಟ್ ‘ಕರಾವಳಿಯ ಕರ್ನಾಟಕದ ರಾಣಿಯರು’ ಮತ್ತು ಆಡಳಿತದ ಬಗ್ಗೆ ಮಾತನಾಡಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ದಿನೇಶ ಪಿಟಿ ವಹಿಸಿದ್ದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ ತುಕಾರಾಂ ಪೂಜಾರಿ,ನಿವೃತ್ತ ಪ್ರಾಂಶುಪಾಲರಾದ ಪ್ರೊ. ಮನಮೋಹನ್ ಎಂ , ಐಕ್ಯೂ ಎಸಿ ಸಂಯೋಜಕರಾದ ಪ್ರೊ. ಲತಾ ಬಿ ಟಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಶ್ರೀಲತಾ ಕಮಿಲ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಿವಪ್ರಸಾದ್ ಎಸ್ ಉಪಸ್ಥಿತರಿದ್ದರು.ವೇದಿಕೆಯಲ್ಲಿ.ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿ ಡಾ. ತುಕಾರಾಮ್ ಪೂಜಾರಿ “ಸ್ಥಳೀಯ ಚರಿತ್ರೆ ಮರೆವು ಅರಿವಿನ ಸಂಕಥನ” ವಿಚಾರದ ಪ್ರಥಮ ಗೋಷ್ಠಿ ನಡೆಸಿಕೊಟ್ಟರು. ಪ್ರೊ. ನೋರ್ಬರ್ಟ್ ಮಸ್ಕರೆನಸ್ ಮುಖ್ಯಸ್ಥರು, ಇತಿಹಾಸ ವಿಭಾಗ ಸೈಂಟ್ ಫಿಲೋಮಿನಾ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ದ್ವಿತೀಯ ಗೋಷ್ಠಿಯನ್ನು ಸಂಪನ್ಮೂಲ ವ್ಯಕ್ತಿ ಪ್ರೊ.ಚೇತನ್ ಮುಂಡಾಜೆ ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕೇರಳ ಪೆರಿಯಾ ಕಾಸರಗೋಡು” ಕರಿಮೆಣಸಿನ ರಾಣಿ ಚೆನ್ನಬೈರಾದೇವಿ” ಕುರಿತ ವಿಚಾರವನ್ನು ಮಂಡಿಸಿದರು. ಡಾ.ಸನ್ಮತಿ ಕುಮಾರ್ ಸಹಾಯ ಪ್ರಾಧ್ಯಾಪಕರು ಇತಿಹಾಸ ವಿಭಾಗ ಎಸ್ ಡಿ ಎಂ ಕಾಲೇಜ್ ಉಜಿರೆ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರು. ಒಟ್ಟು 35 ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಡಾ. ಅಶೋಕ್ ರಾಕೇಶ್ ಡಿ.ಸೋಜಾ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ವಿಶ್ವವಿದ್ಯಾನಿಲಯ ಕಾಲೇಜು ಹಾಗೂ ವಿವೇಕಾನಂದ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥರು ಪ್ರಮೋದ್ ಎಂ ಜೆ ಉಪಸ್ಥಿತಿಯಲ್ಲಿ ಪ್ರಬಂಧ ಮಂಡಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸಾದ್ ಎನ್ ಸ್ವಾಗತಿಸಿ.ಸಮಾಜಶಾಸ್ತ್ರ ಮುಖ್ಯಸ್ಥರಾದ ಪ್ರೊ. ಮನೋಹರ ಮತ್ತುಪ್ರೊ.ಆರತಿ ಕೆ ಕಾರ್ಯಕ್ರಮ ನಿರೂಪಿಸಿ ಇತಿಹಾಸ ವಿಭಾಗದ ಉಪನ್ಯಾಸಕಿ ನಮಿತಾ ಎಂಎ ವಂದಿಸಿದರು.