ಸುಳ್ಯದ ನಾಗಪಟ್ಟಣದಲ್ಲಿ ಭೀಕರ ಅಪಘಾತ| ಬೈಕ್ ಸವಾರ ದುರ್ಮರಣ

ಸುಳ್ಯ: ಸುಳ್ಯದಿಂದ ಕಲ್ಲಪಳ್ಳಿ ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್ ಮತ್ತು ಆ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ದೋಸ್ತ್ ವಾಹನ ನಾಗಪಟ್ಟಣ ಸೇತುವೆಯ ಬಳಿ ಪರಸ್ಪರ ಢಿಕ್ಕಿ ಹೊಡೆದು, ತೀವ್ರ ಜಖಂಗೊಂಡ ಬುಲೆಟ್ ಸವಾರ ಹರೀಶ್ ಕಲ್ಲಪಳ್ಳಿ ಎಂಬವರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ ಘಟನೆ ಅ.10ರ ರಾತ್ರಿ 8.30 ರ ಹೊತ್ತಿಗೆ ನಡೆದಿದೆ.

ಹರೀಶ್ ರವರು ಸುಳ್ಯದಿಂದ ಕಲ್ಲಪಳ್ಳಿಯ ಅವರ ಮನೆಯತ್ತ ತೆರಳುತ್ತಿದ್ದರು ಎನ್ನಲಾಗಿದ್ದು, ಅಲೆಟ್ಟಿ ಕಡೆಯಿಂದ ಬರುತ್ತಿದ್ದ ದೋಸ್ತ್ ವಾಹನಕ್ಕೆ ನಾಗಪಟ್ಣ ಸೇತುವೆ ಬಳಿ ಮುಖಾಮುಖಿ ಡಿಕ್ಕಿ ಆಗಿದೆ. ಆ ಸಂದರ್ಭ ನಿಯಂತ್ರಣ ಕಳೆದುಕೊಂಡ ದೋಸ್ತ್ ವಾಹನ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಗುದ್ದಿ ನಿಂತಿದೆ.

ತೀವ್ರ ಗಾಯಗೊಂಡ ಗಾಯಾಳು ಹರೀಶ್ ರನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ , ಅವರು ಆಗಲೇ ಮೃತಪಟ್ಟಿದ್ದರೆನ್ನಲಾಗಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.