ಜಾಲ್ಸೂರು: ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡ ಘಟನೆ ಮಾಣಿ-ಮೈಸೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕನಕಮಜಲು ಸಮೀಪದ ಪಂಜಿಗುಂಡಿ ಬಳಿ ನಡೆದಿದೆ.
ಸುಳ್ಯದಿಂದ ಮಂಗಳೂರು ಕಡೆ ಹೋಗುತ್ತಿದ್ದ ಬೊಲೇನೋ ಕಾರು ಹಾಗೂ ಪುತ್ತೂರಿನಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಆಲ್ಟೊ ಕಾರು ನಡುವೆ ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಎರಡು ಕಾರುಗಳು ಜಖಂ ಗೊಂಡಿದ್ದು ಬೋಲೇನೋ ಕಾರು ಚಾಲಕನಿಗೂ ಸೇರಿ ಆಲ್ಟೊಕಾರಿನಲ್ಲಿದ್ದ ಗುತ್ತಿಗಾರಿನ ಮೂವರಿಗೂ ಗಾಯವಾಗಿದ್ದು ಅವರೆಲ್ಲರನ್ನೂ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.