ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಇತಿಹಾಸ ವಿಭಾಗದಿಂದ ಪರಂಪರೆ ಸಂರಕ್ಷಣಾ ಜಾಥಾ

ಸುಬ್ರಹ್ಮಣ್ಯ: ಇಲ್ಲಿನ ಕೆಎಸ್ಎಸ್ ಕಾಲೇಜಿನ ಇತಿಹಾಸ ವಿಭಾಗವು IQAC ಸಹಯೋಗದೊಂದಿಗೆ ಐತಿಹಾಸಿಕ ಪರಂಪರೆ ಸಂರಕ್ಷಣೆ – ಜಾಥಾ ಕಾರ್ಯಕ್ರಮವನ್ನು ಸೆ.26ರಂದು ಆಯೋಜಿಸಿತು. ಈ ಕಾರ್ಯಕ್ರಮದ ಉದ್ದೇಶವು ವಿದ್ಯಾರ್ಥಿಗಳಲ್ಲಿ ನಮ್ಮ ಸಮೃದ್ಧ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವುದಾಗಿತ್ತು.

ಒಟ್ಟು 190 ವಿದ್ಯಾರ್ಥಿಗಳು ಉತ್ಸಾಹದಿಂದ ಈ ಜಾಥಾದಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗಿ, ಪರಂಪರೆ ಸಂರಕ್ಷಣೆಯ ಸಂದೇಶವನ್ನು ಹರಡಿದರು. ಈ ಕಾರ್ಯಕ್ರಮವು ಭವಿಷ್ಯ ಪೀಳಿಗೆಯಿಗಾಗಿ ನಮ್ಮ ಐತಿಹಾಸಿಕ ಸ್ಮಾರಕಗಳು ಹಾಗೂ ಪರಂಪರೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಪ್ರಯತ್ನವಾಯಿತು.

ಕಾರ್ಯಕ್ರಮಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸಾದ್ ಎನ್,ಹಾಗೂ ನಮಿತಾ ಎಂ ಎ, ಭಾಗವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಲತಾ ಹಾಗೂ ಶಶಿ ಕೆ ಸಮಾಜಶಾಸ್ತ್ರ ಮುಖ್ಯಸ್ಥ ಮನೋಹರ,ರಾಜಕೀಯ ಶಾಸ್ತ್ರದ ಮುಖ್ಯಸ್ಥ ಸ್ವಾತಿ .ಕೆ, ಹಾಗೂ ಭರತ್ ಸಹಕರಿಸಿದರು.