ಅಜ್ಜಾವರ: ದಾಸ್ತಾನು ಇರಿಸಿದ್ದ ಅಡಿಕೆ ಕದ್ದ ಇಬ್ಬರು ಅರೆಸ್ಟ್

ಸುಳ್ಯ: ಇಲ್ಲಿನ ಅಜ್ಜಾವರ ಗ್ರಾಮದ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕರಾದ ಮಹಮ್ಮದ್‌ ರಫೀಕ್‌ ಎಸ್‌ ಡಿ ರವರ ಬಾಬ್ತು ಅಡಿಕೆ ಸಂಗ್ರಹಿಸುವ ಗೋಡಾನ್‌ನಿಂದ ಅಡಿಕೆಯನ್ನು ಕದ್ದ ಇಬ್ಬರು ಕಳ್ಳರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸೆಪ್ಟೆಂಬರ್ 12 ರಂದು ರಾತ್ರಿ ವೇಳೆ ಗೋಡೌನ್ ನಲ್ಲಿದ್ದ 1 ಕ್ವಿಂಟಲ್ ಸುಲಿದ ಅಡಿಕೆಯನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಈ ಕುರಿತಂತೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅಪರಾದ ಕ್ರಮಾಂಕ:103/2025 ಕಲಂ 331(4) 305(ಎ) 3(5) ಬಿಎನ್‌ಎಸ್‌-2023 ರಂತೆ ಪ್ರಕರಣ ದಾಖಾಲಾಗಿತ್ತು.

ಬಂಧಿತ ಆರೋಪಿಗಳನ್ನು ಸುಪ್ರಿತ್‌ ಕೆ(22) ಹಾಗೂ ಮಹಮ್ಮದ್‌ ಸಿನಾನ್‌(21ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ದಿನಾಂಕ:19.09.2025ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಮುರೂರು ಚೆಕ್‌ ಪೋಸ್ಟ್‌ ಬಳಿ ವಶಕ್ಕೆ ಪಡೆದು ಆರೋಪಿಗಳು ಕಳುವು ಮಾಡಿದ 1 ಕ್ವಿಂಟಲ್‌ ಸುಲಿದ ಅಡಿಕೆ ಸಾಗಾಟ ಮಾಡಲು ಉಪಯೋಗಿಸಿರುವ ಕೆಎ 21 ಸಿ 5862ನೇ ನಂಬ್ರದ ಆಟೋ ರಿಕ್ಷಾವನ್ನು ಸ್ವಾಧೀನಪಡಿಸಿಕೊಂಡು ಆರೊಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.