ನೆಲ್ಲೂರು ಕೇಮ್ರಾಜೆ: ಬಾವಿಗೆ ಬಿದ್ದು ವ್ಯಕ್ತಿ ಸಾವು

ಗುತ್ತಿಗಾರು.ಸೆ.16:ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಇರಂತಕಜೆಯಿಂದ ಸೆ.15 ರಂದು ರಾತ್ರಿ ವರದಿಯಾಗಿದೆ.

ವ್ಯಕ್ತಿಯನ್ನು ನೆಲ್ಲೂರು ಕೆಮ್ರಾಜೆ ಗ್ರಾಮದ ಇರಂತಕತೆ ನಾರಾಯಣ (42) ಎಂದು ಗುರುತಿಸಲಾಗಿದೆ. ಚಪ್ಪಲಿ ಹಾಗೂ ಬೀಡಿ ಬಾವಿಯ ಬಳಿ ಇದ್ದುದರಿಂದ ಸ್ಥಳೀಯರು ಸೇರಿ ನೀರು ಖಾಲಿ ಮಾಡಿದಾಗ ಮೃತದೇಹ ಪತ್ತೆಯಾಗಿದೆ. ಸೆ.16 ರಂದು ಪೋಲೀಸರು ಮಹಜರು ನಡೆಸಿದ ಬಳಿಕ ಮೃತದೇಹ ಮೇಲಕ್ಕೆತ್ತಿ ಸುಳ್ಯ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಎಂದು ಪೋಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮೃತರು ಪತ್ನಿ, ಪುತ್ರಿ ಯನ್ನು ಅಗಲಿದ್ದಾರೆ.