ಭಾರೀ ಮಳೆ‌ ಹಿನ್ನಲೆ| ಸುಳ್ಯ ತಾಲೂಕಿನ ಶಾಲೆಗಳಿಗೆ ಇಂದು(ಆ.28) ರಜೆ ಘೋಷಣೆ

ಸುಳ್ಯ: ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಆ. ೨೮ರ ಇಂದು ರಜೆ ಘೋಷಿಸಿ ತಾಲೂಕು ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮುಂದುವರಿದು ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಮುಂದಿನ ದಿನಗಳಲ್ಲಿ ರಜೆ ಅವಧಿಯನ್ನು ಭರ್ತಿ‌ಗೊಳಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಿ ಆದೇಶಿಸಿರುತ್ತಾರೆ.