ನಾಲ್ಕೂರು: ಕಿಂಡಿ ಅಣೆಕಟ್ಟು ಸ್ವಚ್ಛತೆ

ಗುತ್ತಿಗಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ನಾಲ್ಕೂರು ಗ್ರಾಮದ ಮರಕತ ಬಳಿಯ ಕಿಂಡಿ ಅಣೆಕಟ್ಟಿನ ಸ್ವಚ್ಛತೆ ಕೈಗೊಳ್ಳಲಾಯಿತು.

ಮಳೆಯ ಸಂದರ್ಭದಲ್ಲಿ ಭಾರಿ ಗಾತ್ರದ ಮರಗಳು ಬಂದು ಅಡ್ಡಲಾಗಿ ನಿಂತು ಸಮಸ್ಯೆಯಾಗಿರುವ ಬಗ್ಗೆ ವಿಪತ್ತು ನಿರ್ವಹಣಾ ಘಟಕಕಕ್ಕೆ ಮಾಹಿತಿ ದೊರೆತು, ಅದನ್ನು ಆ.20 ರಂದು ಅರಣ್ಯ ಇಲಾಖೆಯ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ತೆರವುಗೊಳಿಸುವ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸುಬ್ರಹಣ್ಯ ಗ್ರಾಮ ಪಂಚಾಯತ್‌ ಸದಸ್ಯರಾದ ದಿಲೀಪ್‌ ಉಪ್ಪಳಿಕೆ, ತಾಲೂಕಿನ ಕೃಷಿ ಅಧಿಕಾರಿಗಳು ಹಾಗೂ ವಲಯ ಮೇಲ್ವಿಚಾರಕರು ಭೇಟಿ ನೀಡಿದರು.