ನಿಧನ: ಸರೋಜಿನಿ ಗಂಗಯ್ಯ ಮುಳುಗಾಡು

ಗುತ್ತಿಗಾರು: ಇಲ್ಲಿನ ವಳಲಂಬೆ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ‌ ಹಾಗೂ ಶಂಖಶ್ರೀ ಮಹಿಳಾ ಮಂಡಲದ ಸ್ಥಾಪಕಾದ್ಯಕ್ಷೆ ಶ್ರೀಮತಿ ಸರೋಜಿನಿ ಗಂಗಯ್ಯ ಗೌಡ ಮುಳುಗಾಡು ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತರು ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಯುವ ಮುಂದಾಳು ಪುತ್ರ ಸನತ್ ಮುಳುಗಾಡು, ಸೊಸೆ ಚಂಚಲಾ ಮುಳುಗಾಡು, ಪುತ್ರಿಯರಾದ ನವ್ಯ ಹಾಗೂ ದಿವ್ಯಾ ಅವರನ್ನು ಅಗಲಿದ್ದಾರೆ.