ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

ಸುಳ್ಯ: ಇಲ್ಲಿನ ಶಾಂತಿನಗರದಲ್ಲಿ ಮಹಿಳೆಯೊಬ್ಬರು ಬಾವಿಗೆ ಬಿದ್ದಿದ್ದು, ಅವರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ ಘಟನೆ ಆ.19ರಂದು ವರದಿಯಾಗಿದೆ.

ಮಹಿಳೆ ಮನೆ ಸಮೀಪ ಬಾವಿಗೆ ಬಿದ್ದರೆಂದು ವಿಷಯ ತಿಳಿದು ಸ್ಥಳೀಯರು ಪರಿಶೀಲಿಸಿ ಬಳಿಕ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಲಾಯಿತು. ‌ಸ್ಥಳೀಯರಾದ ಮುಳುಗುತಜ್ಞ ಅಬ್ಬಾಸ್ ನೀರಿಗಿಳಿದು ಮಹಿಳೆಯನ್ನು ಅಗ್ನಿಶಾಮಕ ದಳದವರ ಸಹಕಾರದಿಂದ ಮೇಲೆತ್ತಿದರೆಂದೂ ತಿಳಿದುಬಂದಿದೆ. ಅಸ್ವಸ್ಥಗೊಂಡ‌ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.