ಕೊಲ್ಲಮೊಗ್ರು: ಇಲ್ಲಿನ ಸಮೀಪದ ಐನೆಕಿದು ಗ್ರಾಮದ ಬಸ್ ನಿಲ್ದಾಣದಲ್ಲಿರುವ ಹಾಲು ಉತ್ಪಾದಕ ಸಹಕಾರ ಸಂಘದ ಕಛೇರಿ ಮತ್ತು ಪಕ್ಕದ ಅಂಗಡಿಯಿಂದ ಕಳ್ಳತನ ನಡೆದ ಘಟನೆ ಆ.18ರಂದು ಬೆಳಕಿಗೆ ಬಂದಿದೆ.
ಹಾಲು ಸೊಸೈಟಿಯ ಶಟರ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು 3900 ನಗದು ಕಳ್ಳತನ ಮಾಡಿದ್ದಾರೆ. ಯಶವಂತ ಕೊಪ್ಪಲಗದ್ದೆ ಎಂಬವರ ಅಂಗಡಿಗೆ ಬೀಗ ಮುರಿದು ನುಗ್ಗಿದ ಕಳ್ಳರು ಅಂದಾಜು 10 ಸಾವಿರದಷ್ಟು ನಗದು ಕಳ್ಳತನ ಮಾಡಲಾಗಿದೆ. ಕಳ್ಳರು ಕಳ್ಳತನ ನಡೆಸಲು ಬಳಸಿದ ಪಿಕ್ಕಾಸನ್ನು ಸ್ಥಳದಲ್ಲೇ ಬಿಟ್ಟು ತೆರಳಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿರುವುದಾಗಿ ತಿಳಿದು ಬಂದಿದೆ.