ಐವರ್ನಾಡಿನಿಂದ ಕಳ್ಳತನವಾಗಿದ್ದ ಪಿಕಪ್ ಕಾರ್ಕಳದಲ್ಲಿ ಪತ್ತೆ

ಸುಳ್ಯ: ಇಲ್ಲಿನ ಐವರ್ನಾಡಿನಿಂದ ಕಾಣೆಯಾಗಿದ್ದ ಪಿಕಪ್ ವಾಹನ ಕಾರ್ಕಳದಲ್ಲಿ ಮಂಗಳವಾರ ಪತ್ತೆಯಾಗಿದೆ. ಐವರ್ನಾಡಿನ ಎನ್.ಎಸ್.ಸೌಂಡ್ಸ್ & ಲೈಟಿಂಗ್ಸ್, ಶಾಮಿಯಾನದ ಮಾಲಕ ಸುನಿಲ್‌ ನಿಡ್ಡಾಜೆಯವರ ಪಿಕಪ್ ಆ.11 ರಂದು ತನ್ನ ಅಂಗಡಿ ಎದುರು ನಿಲ್ಲಿಸಿದ್ದರು. ಅಂದು ರಾತ್ರಿ ಪಿಕಪ್ ಕಾಣೆಯಾಗಿತ್ತು.

ಈ ಬಗ್ಗೆ ಅವರು ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಮುಖ್ಯ ರಸ್ತೆಯಲ್ಲಿರುವ ಸಿ.ಸಿ.ಕೆಮರಾಗಳನ್ನು ಪರಿಶೀಲಿಸಿದ್ದರು. ಬಳಿಕ ನಡೆದ ತನಿಖೆ ವೇಳೆ ಕಾರ್ಕಳ ತಾಲೂಕಿನ ಮುಡೂರು ಎಂಬಲ್ಲಿ ಪಿಕಪ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಪಿಕಪ್ ಪೋಲೀಸರ ವಶದಲ್ಲಿದ್ದು, ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.