ಸುಳ್ಯ: ಆಲೆಟ್ಟಿ ಗ್ರಾಮದ ಕುಡೆಂಬಿಯಲ್ಲಿ ಮಹಿಳೆಯೊಬ್ಬರಿಗೆ ವಿಷಪೂರಿತ ಹಾವೊಂದು ಕಡಿದು ಮೃತಪಟ್ಟ ಘಟನೆ ವರದಿಯಾಗಿದೆ.
ಕುಡೆಂಬಿ ಕುತ್ತಿಮುಂಡ ಶಾಂತಪ್ಪ ಎಂಬವರ ಪತ್ನಿ ರಾಧಮ್ಮ ಮೃತಪಟ್ಟ ಮಹಿಳೆ. ಹಾವು ಕಡಿತಕ್ಕೊಳಗಾದ ರಾಧಮ್ಮರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಡಿಯಿತೆಂದು ಹೇಳಲಾಗಿದೆ.