ಗುತ್ತಿಗಾರು.ಆ.12: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಮಂಗಳೂರು, ಶಿಶು ಅಭಿವೃದ್ಧಿ ಇಲಾಖೆ ಸುಳ್ಯ, ಶಂಖಶ್ರೀ ಸ್ತ್ರೀಶಕ್ತಿ ಗೊಂಚಲು ಗುತ್ತಿಗಾರು ಇವುಗಳ ಜಂಟಿ ಆಶ್ರಯದಲ್ಲಿ ಆಟಿ ಉತ್ಸವ , ಪೋಷಣೆ ಮಾಸಚರಣೆ, ಸ್ತನ್ಯಪಾನ ಸಪ್ತಾಹ ಹಾಗೂ ಸನ್ಮಾನ ಕಾರ್ಯಕ್ರಮ ಆ.11ರಂದು ಗುತ್ತಿಗಾರಿನ ಪ.ಪಂಗಡದ ಸಭಾಭವನದಲ್ಲಿ ಶಂಖಶ್ರಿ ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷ ರಾದ ಶ್ರೀಮತಿ ಯಮಿತಾ ಪೂರ್ಣಚಂದ್ರ ಪೈಕ ಇವರ ಅಧ್ಯಕ್ಷ ತೆಯಲ್ಲಿ ನಡೆಯಿತು.

ಕಾರ್ಯಕ್ರಮ ದ ಉದ್ಘಾಟನೆಯನ್ನು ಸಾವಿತ್ರಿ ಚಿಲ್ತಡ್ಕ ಚೆನ್ನೆಮಣೆ ಆಟ ಆಡುವುದರ ಮೂಲಕ ನೆರವೇರಿಸಿದರು. ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ ಜಿಲ್ಲಾ ಉಪನಿರ್ದೇಶಕ ಉಸ್ಮಾನ್, ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ಮೂಕಮಲೆ , ಪ್ರಭಾರ ಸಿ.ಡಿ.ಪಿ.ಒ ಶೈಲಜಾ ಬಿ., ಗುತ್ತಿಗಾರು ವಲಯ ಮೇಲ್ವಿಚಾರಕಿ ದೀಪಿಕಾ ಪಿ., ಸಖಿ ಸೆಂಟರ್ ನ ಆಡಳಿತಾಧಿಕಾರಿ ಪ್ರಿಯಾ ರಾಜ್ ಮೋಹನ್ , ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ನಾರಾಯಣ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ನಾಟಿವೈದ್ಯೆ ವಿಜಯಲಕ್ಷ್ಮಿ ಕರುವಜೆ, ನಿವೃತ್ತ ಸಿಆರ್ ಪಿಎಫ್ ಸಿಬ್ಬಂದಿ ಅನಿತಾ ಮಹೇಶ್ ರನ್ನು ಸನ್ಮಾನಿಸಲಾಯಿತು. ಗುಂಪಿನ ಸದಸ್ಯರು ಮಾಡಿ ತಂದಿರುವ ಆಟಿ ಖಾದ್ಯಗಳನ್ನು ಸವಿಯಲಾಯಿತು.
ನಿರ್ಮಲ ದೇವ ಪ್ರಾರ್ಥಿಸಿದರು. ರಮ್ಯಾ ಸ್ವಾಗತಿಸಿದರು. ತೀರ್ಥಕುಮಾರಿ ವರದಿ ವಾಚಿಸಿದರು. ಗ್ರಂಥಪಾಲಕಿ ಅಭಿಲಾಷಾರವರು ಕಾರ್ಯಕ್ರಮ ನಿರೂಪಿಸಿ ಅಂಗವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು ವಂದಿಸಿದರು.